Prerana Kambam: ತಮ್ಮ ಬದುಕಿನ ರಿಯಲ್ ಹೀರೊನ ಪರಿಚಯಿಸಿದ ಪ್ರೇರಣಾ ಕಂಬಂ

ಸದ್ಯ ತೆಲುಗು ಅಂಗಳದಲ್ಲಿ ಬ್ಯುಸಿಯಾಗಿರುವ ನಟಿ ಪ್ರೇರಣಾ ಕಂಬಂ ಈಗ ಜಂಟಿಯಾಗುವ ಹಾದಿಯಲ್ಲಿದ್ದಾರೆ. ತಮ್ಮ ಲೈಫ್‌ನ ಹೀರೋ ಯಾರು ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಬೆಳ್ಳಿ ಪರದೆ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಕಿರುತೆರೆಯಲ್ಲಿ ಹೆಸರು ಮಾಡಿದ ನಟಿ ಪ್ರೇರಣಾ ಕಂಬಂ ನಟನೆಗೆ ಆಗಮಿಸಲು ಅವರ ಸಂಬಂಧಿಯೇ ಕಾರಣ.

ಪ್ರೇರಣಾ ಅವರ ಸಂಬಂಧಿ ನಟಿಸುತ್ತಿದ್ದ ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ.

TV Actress Prerana kambams Cryptic Post Amid Marriage Speculation

ಧಾರಾವಾಹಿಗಳಲ್ಲಿ ಮಿಂಚಿದ ನಟಿ

'ರಂಗನಾಯಕಿ'ಯಾಗಿ ಹೆಸರು ಮಾಡಿದ ಪ್ರೇರಣಾ ಕಂಬಂ ಈಗ ತಮ್ಮ ಬಾಳ ಸಂಗಾತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈಕೆ ಮೊದಲು 'ಹರಹರ ಮಹದೇವ' ಧಾರಾವಾಹಿಯಲ್ಲಿ ನಟಿಸಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬಂದ ಈ ಧಾರಾವಾಹಿಗೆ ಆಡಿಷನ್ ಕೊಟ್ಟು ಆಯ್ಕೆಯಾದರು. ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ರಂಗನಾಯಕಿ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಕಳ್ಳಿ ಬಂಗಾರಿ ಎಂದೇ ಹೆಸರು ಪಡೆದರು. ಇದಾದ ಬಳಿಕ 'ನಕ್ಷತ್ರ' ಧಾರಾವಾಹಿಯಲ್ಲೂ ಪ್ರೇರಣಾ ಕಂಬಂ ನಟಿಸಿದರು.

ಸಿನಿಮಾಗಳಲ್ಲೂ ಪ್ರೇರಣಾ ಕಂಬಂ ನಟನೆ

ಧಾರಾವಾಹಿಗಳ ನಂತರ ಪ್ರೇರಣಾ 'ಚೂರಿಕಟ್ಟೆ' ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು. 2018ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಬಳಿಕ 'ಪೆಂಟಗನ್', 'ಒಂದಂಕೆ ಕಾಡು', 'ಆನ', 'ಫಿಸಿಕ್ಸ್ ಟೀಚರ್' ಎಂಬ ಸಿನಿಮಾಗಳಲ್ಲೂ ಪ್ರೇರಣಾ ಕಂಬಂ ನಟಿಸಿದರು. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಫಿಸಿಕ್ಸ್ ಟೀಚರ್' ಚಿತ್ರ ಪ್ರದರ್ಶನ ಕಂಡಿತ್ತು. ಇದಾದ ಬಳಿಕ ಬೇರೆ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ತೆಲುಗಿನ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರೇರಣಾ ಈಗ ಸ್ಟಾರ್ ಮಾ 2023 ಅವಾರ್ಡ್ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಹೊಸ ಅಪ್ ಡೇಟ್ ನೀಡಿದ ನಟಿ

ಇನ್ನು ಪ್ರೇರಣಾ ಕಂಬಂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ಆಕ್ಟೀವ್ ಆಗಿ ಇರದಿದ್ದರೂ ಕೂಡ ಅಭಿಮಾನಿಗಳಿಗೆ ಆಗಾಗ ಅಪ್ ಡೇಟ್ ಮಾಡುತ್ತಿರುತ್ತಾರೆ. ಈಗಲೂ ಅಭಿಮಾನಿಗಳು ಪ್ರೇರಣಾ ಯಾವುದಾದರೂ ಧಾರಾವಾಹಿಯಲ್ಲಿ ನಟಿಸಲಿ ಎಂದು ಕೇಳುತ್ತಲೇ ಇರುತ್ತಾರೆ. ಆದರೆ, ಪ್ರೇರಣಾ ಅವರು ಮತ್ತೆ ಯಾವಾಗ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಈಗಂತೂ ಅಭಿಮಾನಿಗಳಿಗೆ ಹೊಸ ಸುದ್ದಿ ಕೊಟ್ಟಿದ್ದಾರೆ. ಈ ಅಪ್ ಡೇಟ್ ಏನು ಎಂಬುದನ್ನು ನೋಡಿದ ಕೆಲ ಅಭಿಮಾನಿಗಳು ಫುಲ್ ಶಾಕ್ ಆಗಿದ್ದಾರೆ. ಅದೇನು ಎಂದು ನೀವೂ ಕೂಡ ನೋಡಿ.

ಹುಡುಗನ ವೀಡಿಯೋ ಹಂಚಿಕೊಂಡ ನಟಿ

ಪ್ರೇರಣಾ ಕಂಬಂ, ಶ್ರೀಪಾದ್ ಎಂಬುವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದು, ನನ್ನ ಬದುಕಿನ ನಿಜವಾದ ಹೀರೋ ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋದಲ್ಲಿ ಪ್ರಿವೆಡ್ಡಿಂಗ್ ವೀಡಿಯೋದಂತೆಯೇ ಲಂಗದಾವಣಿ ಧರಿಸಿ ಪ್ರೇರಣಾ ಹಾಗೂ ಶ್ರೀಪಾದ್ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಪ್ರೇರಣಾ ಮದುವೆ ಅಥವಾ ನಿಶ್ಚಿತಾರ್ಥದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ನಾಲ್ಕು ದಿನಗಳ ಹಿಂದೆಯೂ ಶ್ರೀಪಾದ್ ಅವರೊಂದಿಗಿನ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಕಾಮೆಂಟ್ ಬಾಕ್ಸ್‌ ಅಭಿಮಾನಿಗಳು ಕಂಗ್ರಾಟ್ಸ್ ಹೇಳಿದ್ದು, ಕೆಲವರು ಯಾವಾಗ ಮದುವೆ ಎಂದು ಕೇಳಿದ್ದಾರೆ.

More from Filmibeat

English summary
Actress Prerana kambam introduced real hero of her life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X