'ರಾಧಾ ಕಲ್ಯಾಣ' ನಟಿ ಪುತ್ರನ ಬಾಲರಾಮನ ಅವತಾರ; ಸೋ ಕ್ಯೂಟ್ ಎಂದ ನೆಟ್ಟಿಗರು!

By ಅನಿತಾ ಬನಾರಿ

ನಿನ್ನೆ ರಾಮಭಕ್ತರ ಪಾಲಿಗೆ ಸುದಿನ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಹಳ ವಿಜೃಂಭಣೆಯಿಂದ ನಡೆಯಿತು. ಬರೋಬ್ಬರಿ ಐದು ಶತಮಾನಗಳಿಂದ ರಾಮ ಭಕ್ತರು ಕಾಯುತ್ತಿದ್ದ ಕ್ಷಣವದು. ಈ ಐತಿಹಾಸಿಕ ಸಂಭ್ರಮವನ್ನು ನೋಡಿ ಎಲ್ಲರೂ ಕಣ್ತುಂಬಿಸಿಕೊಂಡರು.

ಇದೇ ಸಂಭ್ರಮದಲ್ಲಿ ಎಷ್ಟೋ ಜನ ತಮ್ಮ ಮಕ್ಕಳಿಗಾಗಿ ಬಾಲರಾಮನ ಫೋಟೋಶೂಟ್‌ಗಳನ್ನು ಮಾಡಿಸಿಕೊಂಡವರಿಗೇನೂ ಕಡಿಮೆಯಿಲ್ಲ. ಹೆಚ್ಚಿನವರು ತಮ್ಮ ಮುದ್ದು ಮಕ್ಕಳಿಗೆ ರಾಮನ ವೇಷ ಹಾಕಿಸಿ ಈ ಸಂತಸವನ್ನು ಮತ್ತಷ್ಟು ಹೆಚ್ಚುಗೊಳಿಸಿದ್ದಾರೆ. ಈ ಸಾಲಿನಲ್ಲಿ ಕಿರುತೆರೆ ನಟಿ ರಾಧಿಕಾ ರಾವ್ ಕೂಡ ಸೇರಿಕೊಂಡಿದ್ದಾರೆ.

Tv actress Radhika Rao dressed up as Balarama for her sons photo shoot

ಹೌದು, ಕಿರುತೆರೆ ನಟಿ ರಾಧಿಕಾ ರಾವ್ ಅವರು ಕೂಡಾ ತಮ್ಮ ಮಗನಿಗೆ ರಾಮನ ವೇಷ ಹಾಕಿಸಿದ್ದರು. ಬಾಲರಾಮನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ರಾಧಿಕಾ ರಾವ್ ಹಂಚಿಕೊಂಡಿದ್ದು, ಮುದ್ದು ರಾಮನನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಮಗ ಬಾಲರಾಮನ ಫೋಟೋ ಹಂಚಿಕೊಳ್ಳುವುದರ ಜೊತೆಗೆ "ಭಗವಾನ್ ರಾಮನು ನಮ್ಮೆಲ್ಲರೊಂದಿಗಿನ ಕತ್ತಲೆಯನ್ನು ನಾಶಮಾಡಿ ಬೆಳಕನ್ನು ತರಲಿ. ಅವನು ಎಲ್ಲಾ ದುಃಖಗಳನ್ನು ನಾಶಮಾಡಿ ಸಂತೋಷವನ್ನು ತರಲಿ. ಅವನು ನಮ್ಮ ಅಜ್ಞಾನವನ್ನು ನಾಶ ಮಾಡಿ ನಮಗೆ ಜಾಗೃತಿಯನ್ನು ತರಲಿ. ಜೈ ಶ್ರೀ ರಾಮ್!" ಎಂದು ರಾಧಿಕಾ ರಾವ್ ಅವರು ಬರೆದುಕೊಂಡಿದ್ದಾರೆ.

ಇದರ ಜೊತೆಗೆ ಕಡಿಮೆ ಅವಧಿಯಲ್ಲಿ ಫೋಟೋ ತೆಗೆಯಲು ಒಪ್ಪಿದ ಮತ್ತು ಸೊಗಸಾಗು ಬಾಲರಾಮನ ಫೋಟೋಗಳನ್ನು ಬಹಳ ಸೊಗಸಾಗಿ ಸೆರೆ ಹಿಡಿದ ಗೀತಾಂಜಲಿ ಅವರಿಗೂ ಧನ್ಯವಾದಗಳನ್ನು ಹೇಳಲು ರಾಧಿಕಾ ರಾವ್ ಅವರು ಮರೆಯಲಿಲ್ಲ. ಇನ್ನು ಕಳೆದ ವರ್ಷ ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್ ಅವರು ಡಿಸೆಂಬರ್‌ನಲ್ಲಿ ಮಗುವಿನ ಹೆಸರನ್ನು ಅನಾವರಣಗೊಳಿಸಿದ್ದರು.

Tv actress Radhika Rao dressed up as Balarama for her sons photo shoot

ಡಿಸೆಂಬರ್ನಲ್ಲಿ ಮೊದಲ ಬಾರಿಗೆ ಮಗನ ಫೋಟೋವನ್ನು ಹಂಚಿಕೊಂಡಿದ್ದ ರಾಧಿಕಾ ರಾವ್ ಚಿಕ್ಕ ವಿಷಯಗಳು ನಿಮ್ಮ ಹೃದಯದಲ್ಲಿ ಹೆಚ್ಚಿನ ಸ್ಥಳವನ್ನು ತೆಗೆದುಕೊಳ್ಳುತ್ತವೆ. ನನ್ನ ಮಗು ನನ್ನ ಪಾಲಿಗೆ ಅತ್ಯಮೂಲ್ಯ‌. ಅವನೇ ನನ್ನ ಸಂಪತ್ತು, ನನ್ನ ಸಂತೋಷ, ನನ್ನ ಪ್ರಪಂಚ" ಎಂದು ಬರೆದುಕೊಂಡಿದ್ದರು. ಜೊತೆಗೆ "ಅಗಸ್ತ್ಯ" ಎಂಬ ಹೆಸರನ್ನು ಕೂಡಾ ಪರಿಚಯಿಸಿದ್ದರು.

ಸದ್ಯ ಮಗ ಅಗಸ್ತ್ಯನ ಪಾಲನೆ ಪೋಷಣೆಗಾಗಿ ತಮ್ಮ ಸಮಯ ಮೀಸಲಿಟ್ಟಿರುವ ರಾಧಿಕಾ ರಾವ್ ಈ ಸುಂದರ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಇದರ ಜೊತೆಗೆ "ತಾಯ್ತನ ಎನ್ನುವುದು ನಿಜಕ್ಕೂ ಒಂದು ಸುಂದರವಾದ ಅನುಭವ. ಅದರ ಖುಷಿಯನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯವಿಲ್ಲ. ನಾನು ತಾಯಿಯಾಗಿದ್ದೇನೆ ಎನ್ನುವ ವಿಚಾರವೇ ನನಗೆ ತುಂಬಾ ಖುಷಿ. ಅಗಸ್ತ್ಯ ಬಂದ ಮೇಲೆಯೇ ನನ್ನ ಜೀವನ ಕಂಪ್ಲೀಟ್ ಆಯಿತು. ಜೀವನಕ್ಕೆ ಒಂದು ಅರ್ಥ ದೊರಕಿತು" ಎಂದು ಈ ಹಿಂದೆ ಫಿಲ್ಮಿಬೀಟ್ ಜೊತೆಗೆ ಮಾತನಾಡುವಾಗ ಹೇಳಿಕೊಂಡಿದ್ದರು ನಟಿ ರಾಧಿಕಾ ರಾವ್.

ಕೊನೆಯದಾಗಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದ್ದರು ನಟಿ ರಾಧಿಕಾ ರಾವ್. ಇದೀಗ ಬಣ್ಣದ ಜಗತ್ತಿನಿಂದ ಬ್ರೇಕ್ ಪಡೆದುಕೊಂಡಿರುವ ಆಕೆಗೆ ಒಂದಾದ ಮೇಲೆ ಒಂದರಂತೆ ಅವಕಾಶಗಳು ಬರುತ್ತಿದೆ. ಆದರೆ ಸದ್ಯ ಮಗ ಅಗಸ್ತ್ಯನಿಗೆ ಒಂದೂವರೆ ವರ್ಷ ಆಗುವ ತನಕ ನಟನೆಯಿಂದ ದೂರವಿರುವ ನಿರ್ಧಾರ ಮಾಡಿದ್ದಾರೆ ರಾಧಿಕಾ ರಾವ್. ಆದರೆ ಮತ್ತೊಮ್ಮೆ ನಟನೆಗೆ ಮರಳಲು ಬೇಕಾಗಿರುವಂತಹ ಪ್ರಯತ್ನಗಳನ್ನು ಆಕೆ ಶುರು ಮಾಡಲಿದ್ದಾರೆ.

More from Filmibeat

English summary
Serial actress Radhika Rao's Son charmed in the avatar of Balarama.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X