ರಜಿನಿ ಫೋಟೋಶೂಟ್ ನೋಡಿ "ಬಿಳಿ ಡ್ರೆಸ್‌ನಲ್ಲಿ ನೀವು ಸುಂದರ" ಎಂದ ಫ್ಯಾನ್ಸ್
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಂತರಾ ಪಾತ್ರದಲ್ಲಿ ರಜನಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ಅಮೃತಾ ಪಾತ್ರದಲ್ಲಿ ಕಿರುತೆರೆಯಲ್ಲಿ ಫೇಮಸ್ಸು ಆಗಿದ್ದಾರೆ. ಹೌದು, ದಶಕಗಳ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ನಾಯಕಿ ಅಮೃತಾಳಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ ಈಕೆ.
ಅಮೃತಾ ಪಾತ್ರದ ಮೂಲಕ ಕರುನಾಡಿನ ಮನೆಮಗಳಾಗಿ ಮೋಡಿ ಮಾಡಿರುವ ರಜಿನಿ ಆ ಧಾರಾವಾಹಿ ಮೂಲಕ ನಟನೆಗೆ ಕಾಲಿಟ್ಟವರು. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅಮೃತಾ ಮುಂದೆ ಒಂದೆರಡು ಧಾರಾವಾಹಿಗಳಲ್ಲಿ ಅಭಿನಯಿಸಿದರು.

ಕಿರುತೆರೆಯ ಜೊತೆಗೆ ಹಿರಿತೆರೆಗೂ ಕಾಲಿಟ್ಟುರುವ ಈಕೆ 'ಅಂಬುಜಾ' ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಮಹಿಳಾ ಪ್ರಧಾನ 'ಅಂಬುಜಾ'ದಲ್ಲಿ ಲಂಬಾಣಿಯಾಗಿ ಈಕೆ ಕಾಣಿಸಿಕೊಂಡಿದ್ದರು. ನಟನೆಯ ಹೊರತಾಗಿ ಸೋಶಿಯಲ್ ಮೀಡಿಯಾದಲ್ಲಿಯೂ ರಜಿನಿ ಸಕತ್ ಆ್ಯಕ್ಟೀವ್ ಆಗಿದ್ದಾರೆ.
ಸಮಯ ಸಿಕ್ಕಾಗಲೆಲ್ಲಾ ರೀಲ್ಸ್ ಮಾಡಿ ಅಪ್‌ಲೋಡ್ ಮಾಡುವ ರಜಿನಿ ಫೋಟೋಗಳನ್ನು ಕೂಡಾ ಶೇರ್ ಮಾಡುತ್ತಿರುತ್ತಾರೆ. ಮಾತ್ರವಲ್ಲದೇ ದಿನಕ್ಕೊಂದು ಒಳ್ಳೆಯ ಸಂದೇಶ ನೀಡುವ ವಾಕ್ಯವನ್ನು ಕೂಡಾ ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ರಜಿನಿ ಅವರು ಇತ್ತೀಚೆಗೆ ಶೇರ್ ಮಾಡಿರುವಂತಹ ಫೋಟೋಗಳು ಸಕತ್ ಸದ್ದು ಮಾಡುತ್ತಿದೆ.

ಬಿಳಿ ಬಣ್ಣದ ಶಾರ್ಟ್ ಡ್ರೆಸಲ್ಲಿ ತೆಗೆಸಿಕೊಂಡಿರುವಂತಹ ಫೋಟೋಗಳನ್ನು ನಟಿ ರಜಿನಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ "ಬಂದರಿನಲ್ಲಿ ನಿಲ್ಲಿಸಿದ ಹಡಗು ಸುರಕ್ಷಿತ ನಿಜ. ಆದರೆ, ಅದರ ಉದ್ದೇಶ ಅದಲ್ಲವಲ್ಲ. ಬದುಕೂ ಹಾಗೆಯೇ, ಕಟ್ಟಿ ಹಾಕಿಕೊಂಡರೆ ವೇಸ್ಟ್..ಶುಭ ದಿನ" ಉತ್ತಮ ಸಂದೇಶ ಕೊಡುವ ಕ್ಯಾಪ್ಶನ್ ಅನ್ನು ಕೂಡಾ ಆಕೆ ಹಾಕಿಕೊಂಡಿದ್ದಾರೆ.
ಇನ್ನು ರಜಿನಿ ಅವರ ಫೋಟೋಕ್ಕೆ ಕಮೆಂಟ್‌ಗಳ ಸುರಿಮಳೆಯೇ ಸುರಿದುಬರುತ್ತಿದೆ. "ಬಿಳಿ ಡ್ರೆಸ್‌ನಲ್ಲಿ ನೀವು ಸುಂದರವಾದ ಬಿಳಿ ನವಿಲಿನಂತೆ ಕಾಣಿಸ್ತಿದ್ದೀರಿ", "ಸುಂದರವಾಗಿ ಕಾಣಿಸುತ್ತಿದ್ದೀರಿ","ಏಂಜಲ್", "ಸೌಂದರ್ಯ ರಾಶಿಗೆ ಮತ್ತೊಂದು ಮೆರಗು ನಮ್ಮ ರಜಿನಿ", "ನಿಮ್ಮ ಸೆಕ್ಸಿ ಫಿಗರ್", "ಆ ಆಕರ್ಷಕ ಕಣ್ಣುಗಳು ನಿಮ್ಮ ನಗು", "ವಾವ್ ಎಲ್ಲವೂ ಅದ್ಭುತವಾಗಿದೆ", "ಈ ಡ್ರೆಸಲ್ಲಿ ತುಂಬಾನೇ ಚೆನ್ನಾಗಿ ಕಾಣಿಸುತ್ತೀರಿ" ಎಂದೆಲ್ಲಾ ಕಮೆಂಟ್ ಹಾಕಿದ್ದಾರೆ.
'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಂತರ 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಈಕೆ ನಟಿಸಿದ್ದರು. ಇದರ ಹೊರತಾಗಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಸಂಕಲ್ಪ'ದ ಭಾಗವಾಗಿರುವ 'ಯೋಗ ಸಂಕಲ್ಪ'ದ ಸಾರಥ್ಯವನ್ನು ಈಕೆ ವಹಿಸಿಕೊಂಡಿದ್ದಾರೆ.


Click it and Unblock the Notifications











