Ranjini Raghavan: ರಂಜಿನಿ ರಾಘವನ್ ನಿಜ ಜೀವನದಲ್ಲಿ ಸಖತ್ ರಾಯಲ್, ಇಲ್ಲಿದೆ ಸಾಕ್ಷಿ!

By ಪೂರ್ವ

ರಂಜಿನಿ ರಾಘವನ್ 'ಪುಟ್ಟ ಗೌರಿ' ಪಾತ್ರದ ಮೂಲಕ ಇಡೀ ಜನರ ಮನೆ ಮಾತಾಗಿದ್ದರು. ಈ ಧಾರಾವಾಹಿ ರಂಜಿನಿ ರಾಘವನ್‌ಗೆ ತುಂಬಾನೆ ಹೆಸರು ಮಾಡಿಕೊಟ್ಟಿತು. ಇದಾದ ಬಳಿಕ ಸಿನಿಮಾದಲ್ಲಿ ಉತ್ತಮ ಚಾನ್ಸ್ ಸಿಕ್ಕಿತು. ಇದರ ಜೊತೆ ಇಷ್ಟ ದೇವತೆ ಎಂಬ ಧಾರಾವಾಹಿಯನ್ನು ನಿರ್ಮಾಣ ಮಾಡಿದರು. ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟು 'ಕನ್ನಡತಿ' ಧಾರವಾಹಿ ಮೂಲಕ ಭುವನೇಶ್ವರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಇಂದು ಕರ್ನಾಟಕದ ಮನೆ ಮಾತಾಗಿರುವ ರಂಜಿನಿ ರಾಘವನ್ ರವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರಂಜಿನಿ ಮನೆಯಲ್ಲಿ ಸಾಹಿತ್ಯ, ಕಲೆಯ ವಾತಾವರಣವಿದ್ದ ಕಾರಣ ಚಿಕ್ಕ ವಯಸ್ಸಿನಲ್ಲಿ ಮ್ಯೂಸಿಕ್ ಕ್ಲಾಸಿಗೆ ಹೋಗಲು ಶುರು ಮಾಡಿದರು. ಏನೇ ಸಾಧನೆ ಮಾಡಿದರೂ ಇವರ ತಂದೆ ಬೆನ್ನೆಲು ಬಾಗಿದ್ದರು.

ರಂಜಿನಿ, ನಾಗವೇಣಿ ಎಂಬ ಚಿಕ್ಕ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದಾದ ಬಳಿಕ 'ಆಕಾಶ ದೀಪಾ' ಧಾರಾವಾಹಿ ಮೂಲಕ ಕಾಣಿಸಿಕೊಂಡರು.

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಂಜಿನಿ ರಾಘವನ್

ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ರಂಜಿನಿ ರಾಘವನ್

ರಂಜಿನಿ ರಾಘವನ್ ಪುಟ್ಟ ಗೌರಿ ಪಾತ್ರದ ಮೂಲಕ ಇಡೀ ಜನರ ಮನೆ ಮಾತಾಗಿದ್ದರು. ಈ ಧಾರಾವಾಹಿ ಬಹಳ ಹೆಸರು ಮಾಡಿಕೊಟ್ಟಿತು. ಇದಾದ ಬಳಿಕ ಸಿನಿಮಾದಲ್ಲಿ ಉತ್ತಮ ಚಾನ್ಸ್ ಸಿಕ್ಕಿತು. ಇದರ ಜೊತೆ ಇಷ್ಟ ದೇವತೆ ಎಂಬ ಧಾರಾವಾಹಿಯನ್ನು ನಿರ್ಮಾಣ ಮಾಡಿದರು. ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟು 'ಕನ್ನಡತಿ' ಧಾರಾವಾಹಿ ಮೂಲಕ ಭುವನೇಶ್ವರಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ರಂಜಿನಿ ರಾಘವನ್ ಬೆಂಗಳೂರಿನವರೇ. ರೂಪಾಂತರ ಥಿಯೇಟರ್ ತಂಡ ನಿರ್ಮಾಣದ ಅನೇಕ ನಾಟಕಗಳಲ್ಲಿ ನಟಿಸಿದ್ದರು. ಬಳಿಕ 'ಪುಟ್ಟಗೌರಿ ಮದುವೆ' ಕನ್ನಡ ಧಾರಾವಾಹಿಯಲ್ಲಿ ರಂಜಿನಿ ರಾಘವನ್ ಅಭಿನಯಿಸಿದ್ದಾರೆ.

ಕನ್ನಡತಿ ಧಾರಾವಾಹಿ ಮೂಲಕ ಮಿಂಚಿದ ನಟಿ

ಕನ್ನಡತಿ ಧಾರಾವಾಹಿ ಮೂಲಕ ಮಿಂಚಿದ ನಟಿ

'ಪುಟ್ಟ ಗೌರಿ' ಮದುವೆ ಮೂಲಕ ಹೆಸರು ಮಾಡಿ, ಇದೀಗ 'ಕನ್ನಡತಿ' ಧಾರಾವಾಹಿ ಮೂಲಕ ಮಿಂಚಿದ ರಂಜಿನಿ ರಾಘವನ್ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದವರು. ಲಲಿತ ಕಲೆ ಮತ್ತು ಸಾಹಿತ್ಯದಲ್ಲಿ ಬಹಳ ಅಸಕ್ತಿ ಹೊಂದಿದ್ದರು. ಗುರು ವಿದ್ವಾನ್, ಚಿಂತಾಲ್ಪಲ್ಲಿ ಶ್ರೀನಿವಾಸ್ ಮತ್ತು ಆಶಾ ವಿಶ್ವನಾಥರಿಂದ ಎಂಟನೆಯ ವಯಸ್ಸಿನಲ್ಲಿ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ವಿದ್ಯಾರ್ಥಿಯಾಗಿ, ಅನೇಕ ರಾಜ್ಯ ಮತ್ತು ಜಿಲ್ಲಾ ಮಟ್ಟದ ಹಾಡುಗಾರಿಕೆ ಮತ್ತು ಸಾಹಿತ್ಯದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

'ಆಕಾಶದೀಪ' ಎಂಬ ಧಾರಾವಾಹಿಯ ಮೂಲಕ ನಟನೆ

'ಆಕಾಶದೀಪ' ಎಂಬ ಧಾರಾವಾಹಿಯ ಮೂಲಕ ನಟನೆ

ರಂಜಿನಿ ರಾಘವನ್ ಶೇಷಾದ್ರಿಪುರಂ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಹಾಗೂ ಸರ್.ಎಮ್.ವಿ.ಐ.ಟಿ ಕಾಲೇಜಿನಲ್ಲಿ ಎಂ.ಬಿ.ಎ(ಎಚ್.ಆರ್ ಮತ್ತು ಮಾರ್ಕೆಟಿಂಗ್) ಮಾಡಿದ್ದಾರೆ. ರಂಜಿನಿ ರಾಘವನ್ ತಮ್ಮ ನಟನಾ ವೃತ್ತಿಯನ್ನು 'ಆಕಾಶದೀಪ'ಎಂಬ ಧಾರವಾಹಿಯ ಮೂಲಕ ಪ್ರಾರಂಭಿಸಿದರು. 'ಪುಟ್ಟಗೌರಿ ಮದುವೆ' ಎಂಬ ಧಾರಾವಾಹಿಯಿಂದ, ಸಣ್ಣ ಪರದೆಯಲ್ಲಿ ಜನಪ್ರಿಯರಾಗಿ ಯಶಸ್ಸು ಗಳಿಸಿದ್ದಾರೆ.

ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಂಜಿನಿ

ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಂಜಿನಿ

2017 ರಲ್ಲಿ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿದ 'ರಾಜಹಂಸ'ಚಿತ್ರದಲ್ಲಿ ಅಭಿನಯಿಸಿದರು. 'ಟಕ್ಕರ್' ಅವರ ಎರಡನೆಯ ಚಿತ್ರ. ಇದಲ್ಲದೇ 'ಟ್ರೇನ್ ಟು ಪಾಕಿಸ್ತಾನ್', 'ಕರ್ವಾಲೋ','ರಾಮಧಾನ್ಯ','ಯಹೂದಿ ಹುಡುಗಿ' ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು "ಕತೆ ಡಬ್ಬಿ" ಎನ್ನುವ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. 2013 ರಲ್ಲಿ 'ಆಕಾಶ ದೀಪ'ದಲ್ಲಿ ಅಮ್ರತ ಪಾತ್ರದಲ್ಲಿ, 'ಪುಟ್ಟಗೌರಿ ಮದುವೆ'ಯಲ್ಲಿ ಗೌರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಂಜಿನಿ ರಾಘವನ್ 'ಪೌರ್ಣಮಿ ತಿಂಕಲ್' ಎಂಬ ಮಲಯಾಳಂ ಧಾರಾವಾಹಿಯಲ್ಲಿ ಪೌರ್ಣಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ. 2019 ರಲ್ಲಿ ಇಷ್ಟದೇವತೆ ಧಾರಾವಾಹಿಯ ಸಹ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ 'ಕನ್ನಡತಿ' ಧಾರವಾಹಿಯಲ್ಲಿ ಭುವನೇಶ್ವರಿ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

More from Filmibeat

English summary
How Ranjini Ragavan real life style. Hear is more details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X