"ಪುರುಷರು ಸೊಂಟಕ್ಕೆ ಕೈ ಹಾಕಿದ್ರೆ, ಎಂಜಾಯ್ ಮಾಡಿ.. ನನ್ನ ಸೊಂಟ ಮುಟ್ಟಿದ್ರೆ, ನನಗೆ ಕೋಪ ಬರಲ್ಲ"

ಮೀಟು ಅಭಿಯಾನದ ಹಿನ್ನೆಲೆಯಲ್ಲಿ ಸಾಕಷ್ಟು ನಟ, ನಟಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ. ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಆದರೆ ತಮಿಳು ಕಿರುತೆರೆ ನಟಿ ರೇಖಾ ನಾಯರ್ ಮಹಿಳೆಯರ ಡ್ರೆಸ್‌ ಕೋಡ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ರೇಖಾ ನಾಯರ್ 'ಆಮೆವಂಶಂ', 'ಪಗಲ್ ನಿಲವು', 'ಆಂಡಾಲ್ ಆಜಗರ್', 'ಬಾಲ ಗಣಪತಿ' ಸೇರಿದಂತೆ ಒಂದಷ್ಟು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ತಮಿಳು ಬಿಗ್‌ಬಾಸ್ ಸೀಸನ್- 7ರ ಸ್ಪರ್ಧಿ ಕೂಡ ಆಗಿದ್ದರು. ಯೂಟ್ಯೂಬ್ ಸಂದರ್ಶನದಲ್ಲಿ ಇದೀಗ ರೇಖಾ ನಾಯರ್ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಇತ್ತೀಚೆಗೆ ಮಹಿಳೆಯರು ಬಹಳ ಸೆಕ್ಸಿಯಾಗಿ ಬಟ್ಟೆ ಧರಿಸುತ್ತಾರೆ. ಅದೇ ಕಾರಣಕ್ಕೆ ಪುರುಷರು ಕೆಟ್ಟದಾಗಿ ವರ್ತಿಸುತ್ತಾರೆ ಎಂದು ಕೆಲವರು ಹೇಳುತ್ತಾರೆ, ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು? ಎನ್ನುವ ಪ್ರಶ್ನೆಗೆ ಆಕೆ ಉತ್ತರಿಸಿದ್ದಾರೆ.

Rekha-Nair- comments

"ಮಹಿಳೆಯರ ಸೊಂಟದ ಮೇಲೆ ಪುರುಷರು ಕೈ ಹಾಕಿದರು, ಎಂಜಾಯ್ ಮಾಡಬೇಕು. ಅದು ಬಿಟ್ಟು ಗಲಾಟೆ ಮಾಡಬಾರದು. ಈ ವಿಷಯದಲ್ಲಿ ಮಹಿಳೆಯರು ತಮ್ಮ ಸ್ವಾತಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನು ಧರಿಸುವ ಬಟ್ಟೆ ಬಗ್ಗೆ ಕೂಡ ಕೆಲವರು ಕೇಳುತ್ತಿರುತ್ತಾರೆ. ಇನ್ನು ಯಾರಾದರೂ ನನ್ನ ಸೊಂಟದ ಮೇಲೆ ಕೈ ಹಾಕಿದರೆ ನಾನು ಕೋಪ ಮಾಡಿಕೊಳ್ಳಲ್ಲ. ನಾನು ಸೀರೆ ಉಟ್ಟರೆ ನನ್ನ ಸೊಂಟ ಕಾಣುತ್ತದೆ. ಬಸ್ಸಿನಲ್ಲಿ ಹೋಗುವಾಗ ಯಾರಾದರೂ ಸೊಂಟಕ್ಕೆ ಕೈ ಹಾಕಿದರೆ ನಾನು ಅದಕ್ಕೆ ಪ್ರತಿಕ್ರಿಯಿಸಲ್ಲ. ಅಂತಹ ಮನಸ್ಥಿತಿ ಇಂದು ಮಹಿಳೆಯರಿಗಿಲ್ಲ".

"ನಾನು ಜಾಗಿಂಗ್ ಮಾಡುವಾಗ ಚಿಕ್ಕ ಶಾರ್ಟ್ಸ್ ಹಾಕಿಕೊಳ್ಳುತ್ತೇನೆ. ಅದು ಕಂಪರ್ಟಬಲ್ ಆಗಿರುತ್ತದೆ. ಅಥ್ಲೆಟ್‌ಗಳು ಶಾರ್ಟ್ಸ್ ಧರಿಸಿ ಸ್ಪರ್ಧಿಗಳಲ್ಲಿ ಭಾಗಿ ಆಗುತ್ತಾರೆ. ಯಾರು ಮುಟ್ಟುವುದಿಲ್ಲ ಎನ್ನುವ ಧೈರ್ಯದಿಂದ ತಾನೇ ಆ ರೀತಿ ಬಟ್ಟೆ ಧರಿಸುತ್ತಾರೆ. ಆದರೆ ಅದೇ ರೀತಿ ತುಂಡುಡುಗೆ ತೊಟ್ಟು ಮಾಲ್‌ಗೆ ಹೋದರೆ, ರಸ್ತೆಯಲ್ಲಿ ಹೋದರೆ ಕೈ ಹಾಕುತ್ತಾರೆ. ಇದು ಯಾರ ತಪ್ಪು? ಪುರುಷರು ಕೆಟ್ಟದಾಗಿ ನೋಡುತ್ತಾರೆ ಅಂದ್ರೆ ತಪ್ಪು ಯಾರದ್ದು? ಅವರನ್ನು ಪ್ರೇರೇಪಿಸುತ್ತಿರುವುದು ಯಾರು ? ಎಂದು ಪ್ರಶ್ನಿಸಿದ್ದಾರೆ.

Rekha-Nair- comments

"ಪುರುಷರು ನಿಮ್ಮ ಸೌಂದರ್ಯ ನೋಡಿ ಆಸ್ವಾದಿಸುತ್ತಾರೆ. ಇಲ್ಲ ಅಂದ್ರೆ ಇನ್ಯಾರು ಆಸ್ವಾದಿಸುತ್ತಾರೆ. ಅವರು ಮೆಚ್ಚಿಕೊಳ್ಳದಿದ್ದರೆ ಅದಕ್ಕೆ ಅರ್ಥ ಇರುವುದಿಲ್ಲ. ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯರು ಎಲ್ಲವನ್ನೂ ಮಾಡುತ್ತಾರೆ. ಕಾರು-ಬೈಕು ಓಡಿಸೋಕೆ ಬರದಿದ್ರು ಸ್ಟೈಲ್‌ ಕಾರಣಕ್ಕಾಗಿ ಓಡಿಸ್ತಾರೆ. ನೀವು ನ್ಯೂಸ್‌ ಚಾನಲ್‌ಗಳಲ್ಲಿ ನೋಡಿದರೆ ಪುರುಷರು ಕುಡಿದ ವಾಹನ ಚಾಲಾಯಿಸಿದರೆ ದಂಡ ಕಟ್ಟಿ ಹೋಗುತ್ತಾರೆ. ಆದರೆ ಮಹಿಳೆಯರು ಕುಡಿದು ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಗಲಾಟೆ ಮಾಡುತ್ತಾರೆ."

"ನೀವು ಮನೆಯಲ್ಲಿ ಕುಡಿದು ಸುಮ್ಮನಿರಿ. ಕುಡಿದು ರಸ್ತೆಗೆ ಬಂದು ಬೀಳೋದು, ನಂತರ ಆಂಬ್ಯುಲೆನ್ಸ್ ಸರಿಯಾದ ಸಮಯಕ್ಕೆ ಬಂದಿಲ್ಲ, ಸರಿಯಾಗಿ ಚಿಕಿತ್ಸೆ ಸಿಕ್ಕಿಲ್ಲ ಎಂದು ಗಲಾಟೆ ಮಾಡುವುದು ಯಾಕೆ? ಎಂದಿದ್ದಾರೆ. ಪುರುಷ ಮಹಿಳೆಯನ್ನು ಅಥವಾ ಮಹಿಳೆ ಪುರುಷನನ್ನು ಬದಲಾಯಿಸಲು ಸಾಧ್ಯವಿಲ್ಲ. ಶಿವನನ್ನು ಪಾರ್ವತಿ ಅದೇ ರೀತಿ ಪಾರ್ವತಿಯನ್ನು ಶಿವ ಬದಲಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಎಲ್ಲದ್ದಕ್ಕೂ ಒಗ್ಗಿಕೊಳ್ಳುವುದನ್ನು ಕಲಿಯಬೇಕು" ಎಂದು ರೇಖಾ ಹೇಳಿದ್ದಾರೆ.

"ಪುರುಷರ ಜೊತೆ ಲವ್, ಡೇಟಿಂಗ್ ಅಂತ ಡ್ರಿಂಕ್ಸ್ ಮಾಡ್ತಾರೆ, ಊರೂರು ಸುತ್ತಾಡುತ್ತಾರೆ, ಕೊನೆಗೆ ಅವನು ಮೋಸ ಮಾಡಿದ ಎಂದು ಗೊಳೋ ಅಂತಾರೆ. ಇಲ್ಲಿ ತಪ್ಪು ಯಾರದ್ದು? ಇಲ್ಲಿ ಪುರುಷನ ತಪ್ಪಿಲ್ಲ. ಅವನು ಹುಟ್ಟಿರೋದೇ ಎಂಜಾಯ್ ಮಾಡೋಕೆ. ನಿನಗೆ ಬುದ್ಧಿ ಇದೆ ಅಲ್ವಾ? ನೀವು ಯಾವುದು ಸರಿ? ಯಾವುದು ತಪ್ಪು? ಎಂದು ನಿರ್ಧರಿಸಬೇಕು ಅಲ್ಲವೇ? ಎಂದು ರೇಖಾ ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗೆ ಪುರುಷರು ಮೆಚ್ಚಿಗೆ ಸೂಚಿಸಿದರೆ ಮಹಿಳೆಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Tv Actress Rekha Nair Shocking comments on womens dress code. some people supported her viewpoint. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X