ಕಿರುತೆರೆಯ ಈ ನಟಿ ಇದೀಗ ನಿಖಿಲ್ ಕುಮಾರ್ ಗೆ ಹೀರೋಯಿನ್.!

Recommended Video

ನಿಖಿಲ್ ಕುಮಾರಸ್ವಾಮಿ ಹೊಸ ಚಿತ್ರದ ನಾಯಕಿ ಇವರೇ..! | Nikhil Kumarswamy | Heroine | Lahaari Velu

'ಜಾಗ್ವಾರ್', 'ಕುರುಕ್ಷೇತ್ರ', 'ಸೀತಾರಾಮ ಕಲ್ಯಾಣ' ಚಿತ್ರದ ಬಳಿಕ ರಾಜಕೀಯದಲ್ಲಿ ತೊಡಗಿದ್ದ ನಿಖಿಲ್ ಕುಮಾರ್ ಇನ್ಮುಂದೆ ಚಿತ್ರರಂಗದಲ್ಲಿ ಬಿಜಿಯಾಗಿರಲಿದ್ದಾರೆ.

ಲಹರಿ ಆಡಿಯೋ ಸಂಸ್ಥೆ ನಿರ್ಮಾಣದ ಹೊಸ ಪ್ರಾಜೆಕ್ಟ್ ಗೆ ನಟ ನಿಖಿಲ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ. ಇದೇ ಚಿತ್ರಕ್ಕೆ ನಿನ್ನೆ ಬೆಂಗಳೂರಿನ ಕಾರಂಜಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.

ನಿಖಿಲ್ ಕುಮಾರ್ ಅಭಿನಯದ ನಾಲ್ಕನೇ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಆದ್ರೆ, ಕಿರುತೆರೆಯ ಈ ನಟಿ ನಿಖಿಲ್ ಕುಮಾರ್ ಗೆ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಯಾರು ಆಕೆ.? ನೀವೇ ನೋಡಿ...

ಕಿರುತೆರೆ ನಟಿ ಸಂಪದ

ಕಿರುತೆರೆ ನಟಿ ಸಂಪದ

ನಿಖಿಲ್ ಕುಮಾರ್ ಅಭಿನಯದ ಇನ್ನೂ ಹೆಸರಿಡದ ಈ ಚಿತ್ರದಲ್ಲಿ ಕಿರುತೆರೆ ನಟಿ ಸಂಪದ ನಾಯಕಿ ಆಗಿ ಆಯ್ಕೆ ಆಗಿದ್ದಾರೆ. ಖಾಸಗಿ ವಾಹಿನಿಯ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದ ಸಂಪದ ಇದೀಗ ನಿಖಿಲ್ ಕುಮಾರ್-ವಿಜಯ್ ಕುಮಾರ್ ಕೊಂಡ ಕಾಂಬಿನೇಶನ್ ನಲ್ಲಿ ಮೂಡಿ ಬರುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ.

ಅಲ್ಲಿ ವಿಲನ್, ಇಲ್ಲಿ ಎರಡನೇ ನಾಯಕಿ.!

ಅಲ್ಲಿ ವಿಲನ್, ಇಲ್ಲಿ ಎರಡನೇ ನಾಯಕಿ.!

ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಯಲ್ಲಿ ಸಂಪದ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ನಿಖಿಲ್ ಕುಮಾರ್ ಅಭಿನಯದ ಲಹರಿ ಆಡಿಯೋ ಸಂಸ್ಥೆ ನಿರ್ಮಾಣದ ಪ್ರೊಡಕ್ಷನ್ ನಂಬರ್ 1 ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಸಂಪದ ಕಾಣಿಸಿಕೊಳ್ಳಲಿದ್ದಾರೆ.

ಮುಖ್ಯ ನಾಯಕಿ ಯಾರು.?

ಮುಖ್ಯ ನಾಯಕಿ ಯಾರು.?

ಕ್ರೀಡೆ, ಆಕ್ಷನ್, ಲವ್.. ಎಲ್ಲವೂ ಮಿಕ್ಸ್ ಆಗಿರುವ ಈ ಚಿತ್ರದಲ್ಲಿ ನಿಖಿಲ್ ಗೆ ಮುಖ್ಯ ನಾಯಕಿ ಆಗಿ ಕಾಶ್ಮೀರಿ ಪರ್ದೇಶಿ ನಟಿಸಲಿದ್ದಾರೆ. ನಿಖಿಲ್, ಕಾಶ್ಮೀರಿ ಪರ್ದೇಸಿ, ಸಂಪದ ಜೊತೆಗೆ ದತ್ತಣ್ಣ, ಶಿವರಾಜ್.ಕೆ.ಆರ್.ಪೇಟೆ, ರಾಜೇಶ್, ಬೇಬಿ ಪ್ರಾಣ್ಯ ಕೂಡ ತಾರಾಗಣದಲ್ಲಿದ್ದಾರೆ.

ದ್ವಿಭಾಷಾ ಚಿತ್ರ

ದ್ವಿಭಾಷಾ ಚಿತ್ರ

ತೆಲುಗಿನಲ್ಲಿ 'ಒಕ ಲೈಲಾ ಕೋಸಂ' ಮತ್ತು 'ಗುಂಡೇ ಜಾರಿ ಗಲ್ಲಂತಾಯಿಂದಿ' ಚಿತ್ರಗಳನ್ನು ನಿರ್ದೇಶಿಸಿದ್ದ ವಿಜಯ್ ಕುಮಾರ್ ಕೊಂಡ ಇದೀಗ ನಿಖಿಲ್ ಕುಮಾರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಸ್ಕಲ್ ಬಾಲ್ ಪ್ಲೇಯರ್ ಆಗಿ ನಿಖಿಲ್ ಕುಮಾರ್ ಕಾಣಿಸಿಕೊಳ್ಳಲಿದ್ದು, ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ.

More from Filmibeat

English summary
TV Actress Sampada is playing second lead opposite Nikhil Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X