ಅರ್ಚನಾ ಬಾಳಿಗೆ ಬೆಳಕಾದ ದೀಪಾ; ನಟಿ ಸನ್ಮಿತಾಳಿಗೆ ಬರ್ತ್‌ಡೇ ಸಂಭ್ರಮ

By ಪ್ರಿಯಾ ದೊರೆ

ದೀಪಾ ಈಗ ಮೊದಲಿನಂತೆ ಇಲ್ಲ. ಗಂಡನ ಮನೆಯಲ್ಲಿ ತನ್ನ ಸ್ಥಾನವನ್ನು ದೀಪಾ ಅರಿತುಕೊಂಡಿದ್ದಾಳೆ. ಅಲ್ಲದೇ, ಮನೆಯವರ ಗುಣಗಳನ್ನೂ ಅರ್ಥ ಮಾಡಿಕೊಂಡಿದ್ದಾಳೆ.

ದೀಪಾ ಮತ್ತು ಚಿರು ಸಂಬಂಧ ಮಾತ್ರವೇ ಇನ್ನೂ ಸರಿ ಹೋಗಿಲ್ಲ. ಈಗಲೂ ಚಿರು ದೀಪಾಳನ್ನು ಬಿಟ್ಟು ಹೋಗಲು ಆಲೋಚಿಸುತ್ತಿದ್ದಾನೆ.

Tv Actress Sanmitha feels overwhelmed with birthday wishes from fans

ದೀಪಾ ಮಾತ್ರ ತನ್ನ ಸಂಸಾರದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಬದಲಿಗೆ ತನ್ನ ತವರು ಮನೆ ಹಾಗೂ ಗಂಡನ ಮನೆ ಚೆನ್ನಾಗಿರಬೇಕು ಎಂದು ನಿಸ್ವಾರ್ಥದಿಂದ ನಡೆದುಕೊಳ್ಳುತ್ತಿದ್ದಾಳೆ.

ಅರ್ಚನಾ ಬಾಳಿಗೆ ಬೆಳಕಾದ ದೀಪಾ

ಈಗಾಗಲೇ ಸೌಂದರ್ಯಳ ಆಟಗಳನ್ನು ಮಟ್ಟ ಹಾಕಿರುವ ದೀಪಾ, ಅತ್ತಿಗೆ ಅರ್ಚನಾ ಬಾಳನ್ನು ಸರಿ ಮಾಡಲು ಪ್ರಯತ್ನ ಪಟ್ಟಿದ್ದಾಳೆ. ಸೌಂದರ್ಯಳನ್ನು ಎದುರು ಹಾಕಿಕೋಮಡು ಅರ್ಚನಾ ಮತ್ತು ರಾಹುಲ್ ಅನ್ನು ಒಂದು ಮಾಡುತ್ತಿದ್ದಾಳೆ. ಅರ್ಚನಾ ಮತ್ತು ರಾಹುಲ್ ಈಗ ಮತ್ತೆ ಭೇಟಿಯಾಗುತ್ತಿದ್ದು, ಮನೆಯವರಿಂದ ವಿಷಯ ಮುಚ್ಚಿಟ್ಟಿದ್ದಾರೆ. ಇನ್ನು ಇದೀಗ ದೀಪಾ ತನ್ನ ಅಣ್ಣ ನರಸಿಂಹನ ಬಾಳಲ್ಲಿ ಎಂಟ್ರಿಕೊಟ್ಟಿರುವ ಬೆಳದಿಂಗಳ ಬಾಲೆಯ ಆಟಕ್ಕೆ ಬ್ರೇಕ್ ಹಾಕುತ್ತಿದ್ದಾಳೆ. ಇನ್ನು ಚಿರು ಕೂಡ ದೀಪಾ ಜೊತೆಗೆ ಹಳ್ಳಿಗೆ ಬಂದಿದ್ದು, ಅವರ ಅತ್ತೆಯ ನಂಬಿಕೆಯನ್ನು ಕಂಡು ದೀಪಾಳಿಂದ ದೂರಾದರೆ ಇವರಿಗೆಲ್ಲಾ ಎಷ್ಟು ನೋವಾಗುತ್ತದೆ ಎಂದು ಬೇಸರ ಮಾಡಿಕೊಂಡಿದ್ದಾಳೆ.

ತಾಯಿ ಆಸೆ ಈಡೇರಿಸಿದ ಸನ್ಮಿತಾ

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಸನ್ಮಿತಾಳಿಗೆ ಹುಟ್ಟುಹಬ್ಬದ ಸಂಭ್ರಮ. ಸ್ನೇಹಿತರ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸನ್ಮಿತಾ ಮಾಡೆಲ್ ಕೂಡ ಹೌದು. ತಾಯಿಯ ಆಸೆಯಂತೆ ನಟನೆಗೆ ಎಂಟ್ರಿಕೊಟ್ಟ ಸನ್ಮಿತಾ ಅವರು ಈಗಾಗಲೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ, ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ನಾಯಕಿ ಪಾತ್ರದಲ್ಲಿ ಚಿತ್ರಗಳಲ್ಲಿ ನಟಿಸಿದ್ದು, ಕಿರುತೆರೆಯಲ್ಲಿ ಕಳೆದ ಏಳೆಂಟು ವರ್ಷಗಳಿಂದ ಸಕ್ರಿಯರಾಗಿದ್ದಾರೆ.

ಸೋಶಿಯಲ್ ಮೀಡಿಯಾದಿಂದ ದೂರ?

ಸಾಮಾನ್ಯವಾಗಿ ನಟಿಯರು ಸೋಶಿಯಲ್ ಮೀಡಿಯಾವನ್ನು ಅತೀ ಹೆಚ್ಚು ಬಳಸುತ್ತಾರೆ. ಅಭಿಮಾನಿಗಳೊಂದಿಗೆ ನೇರವಾದ ಸಂಪರ್ಕವನ್ನು ಹೊಂದಿರುತ್ತಾರೆ. ಆದರೆ ನಟಿ ಸನ್ಮಿತಾ ಅವರು ತೀರಾ ಕಡಿಮೆ ಆಕ್ಟೀವ್ ಆಗಿದ್ದಾರೆ. ಸನ್ಮಿತಾ ಬಹಳ ಕೂಲ್ ಹಾಗೂ ಸೈಲೆಂಟ್ ಆಗಿರುವುದು ಹೆಚ್ಚು. ಸೋಶಿಯಲ್ ಮೀಡಿಯಾವನ್ನು ಅತೀ ಕಡಿಮೆ ಬಳಸುವ ಸನ್ಮಿತಾ ಅವರು ತಂದೆ-ತಾಯಿ ಜೊತೆಗೆ ಇದ್ದು, ಸನ್ಮಿತಾ ಅವರಿಗೆ ಅಕ್ಕ ಕೂಡ ಇದ್ದಾರೆ. ಸನ್ಮಿತಾ ಅವರ ಸೋಶಿಯಲ್ ಮೀಡಿಯಾದಲ್ಲಿ ಕೆಲವೇ ಕೆಲವೂ ಪೋಸ್ಟ್‌ಗಳು ಇವೆ. 2018ರಲ್ಲೇ ಇನ್ ಸ್ಟಾಗ್ರಾಂ ಖಾತೆ ತೆರೆದಿರುವ ನಟಿ ಸನ್ಮಿತಾ ಅವರು ಇದುವರೆಗೂ ಕೇವಲ 178 ಪೋಸ್ಟ್‌ ಮಾಡಿದ್ದಾರೆ.

ಇದೀಗ ಆಕ್ಟೀವ್ ಆಗಿರುವ ನಟಿ

ಅದೂ ಕೂಡ ಇತ್ತೀಚೆಗೆ. 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಲು ಆರಂಭಿಸಲು ಶುರು ಮಾಡಿದಾಗಿನಿಂದ ಸಹ ಕಲಾವಿದರ ಜೊತೆ ಸೇರಿ ರೀಲ್ಸ್ ಮಾಡುವುದು ಹಾಗೂ ಫೋಟೋಶೂಟ್ ಗಳನ್ನು ಮಾಡಿಸುತ್ತಿದ್ದು, ಈಗೀಗ ಹೆಚ್ಚು ಹೆಚ್ಚು ಪೋಸ್ಟ್ ಮಾಡುತ್ತಿದ್ದಾರೆ. ಇನ್ನು ನಟಿ ಸನ್ಮಿತಾ ಅವರು 'ಸುಬ್ಬಲಕ್ಷ್ಮೀ ಸಂಸಾರ', 'ನಾನು ನನ್ನ ಕನಸು', 'ಮುದ್ದುಲಕ್ಷ್ಮೀ', 'ಮಂಗಳಗೌರಿ ಮದುವೆ', 'ಮುದ್ದು ಮಣಿಗಳು', 'ಭೂಮಿಗೆ ಬಂದ ಭಗವಂತ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕ್ವಾಟ್ಲೆ ಮತ್ತು ಗಹನ ಸಿನಿಮಾಗಳಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಪಾತ್ರದ ಮೂಲಕ ಸದ್ಯ ಆಕ್ಟೀವ್ ಆಗಿರುವ ನಟಿ ಸನ್ಮಿತಾ ಅವರಿಗೆ ಇನ್ನಷ್ಟು ಒಳ್ಳೆಯ ಪಾತ್ರಗಳು ಸಿಗಲಿ, ಸ್ಯಾಂಡಲ್‌ವುಡ್‌ನಲ್ಲೂ ಮಿಂಚುವಂತಾಗಲಿ ಎಂದು ಶುಭ ಹಾರೈಸೋಣ. ಫಿಲ್ಮೀಬೀಟ್ ವತಿಯಿಂದ ನಟಿ ಸನ್ಮಿತಾಗೆ ಹುಟ್ಟುಹಬ್ಬದ ಶುಭಾಷಯಗಳು.

More from Filmibeat

English summary
Brahmagantu serial archana character actress sanmitha birthday;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X