ಟ್ರೆಡಿಷನಲ್‌ಗೂ ಸೈ ವೆಸ್ಟರ್ಸ್‌ ಲುಕ್‌ಗೂ ಜೈ ಎನ್ನುವ ಸಾರಾ ಅಣ್ಣಯ್ಯ

By ಪ್ರಿಯಾ ದೊರೆ

ನಟಿ ಸಾರಾ ಅಣ್ಣಯ್ಯ ಸ್ಟಾರ್ ಸುವರ್ಣದಲ್ಲಿ ಮೂಡಿಬರುತ್ತಿದ್ದ ಧಾರಾವಾಹಿ 'ನಮ್ಮ ಲಚ್ಚಿ' ಧಾರಾವಾಹಿಯಿಂದ ಹೊರ ನಡೆದಿರುವುದು ಎಲ್ಲರಿಗೂ ಗೊತ್ತೇ ಇದೆ. ಶೂಟಿಂಗ್‌ನಿಂದ ಬಿಡುವು ಸಿಕ್ಕ ಕಾರಣ ಸಿಕ್ಕಾಪಟ್ಟೆ ಫೋಟೋಶೂಟ್ ಅನ್ನು ಮಾಡಿಸುತ್ತಿದ್ದಾರೆ. ಮೂರು ದಿನಗಳಿಂದ ಒಂದೇ ಸಮನೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಆ ಫೋಟೊಗಳು ಸಖತ್ ವೈರಲ್ ಆಗ್ತಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ಬೋಲ್ಡ್ ನಟಿ ಸಾರಾ ಅಣ್ಣಯ್ಯ ಈಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಿಂಚುತ್ತಿದ್ದರು. ಈಗ ಸೋಶಿಯಲ್ ಮೀಡಿಯಾದಲ್ಲಿ ಎಂದಿನಂತೆ ಆಕ್ಟೀವ್ ಆಗಿರುವುದರ ಜೊತೆಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ಮೊದಲು 'ಕನ್ನಡತಿ' ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೋಲ್‌ನಲ್ಲಿ ಮಿಂಚಿದ್ದರು. ವರೂಧಿನಿ ಎಂಬ ಪಾತ್ರದಲ್ಲಿ ನಟಿಸಿದ್ದರು.

TV Actress Sara Annaiah Traditional and Western outfit photoshoot goes viral

ಇತ್ತೀಚೆಗೆ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಅವರ ಪತ್ನಿ ದೀಪಿಕಾ ಪಾತ್ರದಲ್ಲಿ ನಟಿಸಿದ್ದರು. ಶ್ರೀಮಂತಿಕೆ, ರಾಯಲ್ ಜೀವನದ ಬಗ್ಗೆಯೇ ಯೋಚನೆ ಮಾಡುತ್ತಾ ಇರುವಂತ ಕ್ಯಾರೆಕ್ಟರ್ ಇದಾಗಿತ್ತು. ಇದರಲ್ಲೂ ವಿಲನ್ ಪಾತ್ರವನ್ನೇ ಆರಿಸಿಕೊಂಡಿದ್ದ ಸಾರಾ ಸಿಕ್ಕಪಟ್ಟೆ ಟ್ರೋಲ್ ಕೂಡ ಆಗುತ್ತಿದ್ದರು. ಆದರೆ ಇತ್ತೀಚೆಗೆ 'ನಮ್ಮ ಲಚ್ಚಿ' ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನೂ ಸಾರಾ ಅಣ್ಣಯ್ಯ ಅವರು ನೀಡಿಲ್ಲ.

ಇನ್ನು ಮೂಲತಃ ಹುಣಸೂರಿನವರಾದ ಸಾರಾ ಅಣ್ಣಯ್ಯ ಅವರಿಗೆ ಮಾಡೆಲಿಂಗ್‌ನಲ್ಲಿ ಇರಬೇಕೆಂದು ಆಸೆ ಇತ್ತು. ಹೀಗಾಗಿ ಆಕೆ ಫ್ರೀಲಾನ್ಸ್ ಮಾಡೆಲಿಂಗ್ ಮಾಡುತ್ತಿದ್ದರು. ಆದರೆ, ನಟಿಸುವ ಆಸೆ ಏನೂ ಇರಲಿಲ್ಲ. ಕಿರಣ್ ರಾಜ್, ರಕ್ಷಿತ್ ಸೇರಿದಂತೆ ಸಾರಾ ಅಣ್ಣಯ್ಯ ಅವರಿಗೆ ಹಲವು ನಟ ನಟಿಯರ ಪರಿಚಯವಿತ್ತು. ಆದರೆ, ಅದೊಂದು ದಿನ 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಬಯಸದೇ ಬಂದ ಭಾಗ್ಯ ಎಂದು ಒಪ್ಪಿಕೊಂಡ ಸಾರಾ ಅವರು ಈಗ ಕಿರುತೆರೆಗೆ ಎಂಟ್ರಿ ಕೊಟ್ಟರು. ಸಾರಾ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಿನಿಮಾದಲ್ಲಿ ನಟಿಸಬೇಕು ಎಂದು ಕೊಂಡಿರುವ ಸಾರಾ ಅವರು ನಾಯಕಿ ಆಗುವುದಕ್ಕಿಂತಲೂ ಉತ್ತಮ ಪಾತ್ರಕ್ಕಾಗಿ ಕಾಯುತ್ತಿದ್ದಾರೆ. ಸಾರಾ ಅಣ್ಣಯ್ಯ ಅವರಿಗೆ ಪರಭಾಷೆಯಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿದೆ. ಸಾರಾ ಅಣ್ಣಯ್ಯ ಅವರಿಗೆ ಟ್ರಾವೆಲಿಂಗ್ ಮಾಡುವುದೆಂದರೆ ಬಹಳ ಇಷ್ಟವಂತೆ. ಆಗಾಗ ಟ್ರಿಪ್‌ಗಳಿಗೂ ಹೋಗುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಸಾರಾ ಅವರು ಸಾಕಷ್ಟು ಬೋಲ್ಡ್ ಆಗಿ ಫೋಟೋ ಶೂಟ್ ಮಾಡಿಸುತ್ತಾರೆ. ಸಾರಾ ಅಣ್ಣಯ್ಯ ಅವರು ಇದುವರೆಗೂ ಕೇವಲ 180 ಪೋಸ್ಟ್‌ ಮಾಡಿದ್ದು ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ.

TV Actress Sara Annaiah Traditional and Western outfit photoshoot goes viral

ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್‌ನಲ್ಲಿ ಆಗಾಗ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಿರುತ್ತಾರೆ. ಸಾರಾ ಅವರ ಡ್ರೆಸ್ಸಿಂಗ್ ಸ್ಟೈನ ಹುಡುಗಿಯರು ಇಷ್ಟ ಪಟ್ಟು ಫಾಲೋ ಮಾಡುತ್ತಾರೆ. ಇನ್ನು ಇದೀಗ ಕಳೆದ ಮೂರು ದಿನಗಳಿಂದ ಸಾರಾ ಅವರು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ಟ್ರೆಡಿಷನಲ್ ಹಾಗೂ ವೆಸ್ಟರ್ನ್ ಎರಡೂ ಲುಕ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಮೊದಲೇ ಮಾಡೆಲ್ ಆಗಿರುವ ಸಾರಾ ಅಣ್ಣಯ್ಯ ಅವರು ಫೋಟೋಗಳಿಗೆ ಬೋಲ್ಡ್ ಪೋಸ್ ನೀಡುತ್ತಾರೆ. ಆಕೆಯ ಈ ಹಾಟ್ ಫೋಟೋಗಳನ್ನು ಅಭಿಮಾನಿಗಳು ಲೈಕ್ ಮಾಡುತ್ತಿರುತ್ತಾರೆ. ಸೀರೆ, ಜೀನ್ಸ್- ಟೀಶರ್ಟ್, ಲಂಗಾ ದಾವಣಿ, ಶಾರ್ಟ್ ಡ್ರೆಸ್‌ ಹೀಗೆ ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಮಿಂಚಿದ್ದಾರೆ. ವೈಟ್ ಕಲರ್ ಕ್ರಾಪ್‌ ಟಾಪ್ ಟೀ ಶರ್ಟ್ ಹಾಗೂ ಬ್ಲಾಕ್‌ ಜೀನ್ಸ್‌ ಫೋಟೊಗಳಲ್ಲಿ ಸಖತ್ ಹಾಟ್ ಆಗಿ ದರ್ಶನ ಕೊಟ್ಟಿದ್ದಾರೆ.

More from Filmibeat

English summary
Kannada TV Actress Sara Annaiah Traditional and Western outfit photoshoot goes viral. Recently she backed out of Namma Lachi Serial, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X