For Quick Alerts
  ALLOW NOTIFICATIONS  
  For Daily Alerts

  ಬ್ರೇಕ್ ಬಳಿಕ ಸಿನಿಮಾಗೆ ಮರಳಿದ ಶ್ವೇತಾ ಚೆಂಗಪ್ಪಾ!

  |

  ಕಿರುತೆರೆಯಲ್ಲಿ ಮಿಂಚಿ ನಟನೆಯ ಜೊತೆಗೆ ನಿರೂಪಣೆಯ ನಟನೆ, ನಿರೂಪಕಿ ಆಗಿರುವ ಶ್ವೇತಾ ಚೆಂಗಪ್ಪ ಸೈ ಎನಿಸಿಕೊಂಡಿದ್ದಾರೆ. ಶ್ವೇತಾ ಚೆಂಗಪ್ಪ ಅವರು ಇದ್ದಕ್ಕಿದ್ದಂತೆ ಮರೆಯಾಗಿದ್ದರು. ತಾಯ್ತನದ ಅನುಭವವನ್ನು ಅನುಭವಿಸಿ ಈಗ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.

  ಮಗುವಾದ ಮೇಲೆ ಕಿರುತೆರೆಯಿಂದ ಬ್ರೇಕ್ ಪಡೆದಿದ್ದ ಶ್ವೇತಾ ಚೆಂಗಪ್ಪ ಕೋವಿಡ್ ಕಾರಣದಿಂದ ನಟನೆಗೆ ಮರಳಿರಲಿಲ್ಲ. ಸದ್ಯ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ ಜೋಡಿ ನಂ.1 ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವ ಅವರು, ಬೆಳ್ಳಿತೆರೆಯಲ್ಲೂ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ.

  ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ಮದುವೆ ? ಆ ಹೀರೋ ನಮಗೂ ಚಿರಪರಿಚಿತ!ಮಾಲಿವುಡ್ ಹೀರೋ ಜೊತೆ ನಿತ್ಯಾ ಮೆನನ್ ಮದುವೆ ? ಆ ಹೀರೋ ನಮಗೂ ಚಿರಪರಿಚಿತ!

  ವೇದಾ ಚಿತ್ರದಲ್ಲಿ ಶ್ವೇತಾ ನಟನೆ!

  ವೇದಾ ಚಿತ್ರದಲ್ಲಿ ಶ್ವೇತಾ ನಟನೆ!

  ಹ್ಯಾಟ್ರಿಕ್ ಹೀರೋ 125ನೇ ಸಿನಿಮಾದಲ್ಲಿ ಶ್ವೇತಾ ಚೆಂಗಪ್ಪಾ ಅವರು ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದರು. ಶಿವಣ್ಣ ಅವರ ವೇದ ಚಿತ್ರದಲ್ಲಿ ಶ್ವೇತಾ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಶ್ವೇತಾ ಚೆಂಗಪ್ಪಾ ಅವರು ಬೋಲ್ಡ್ ಆಗಿ ನಟಿಸಿದ್ದಾರಂತೆ. ಈ ಬಗ್ಗೆ ಶಿವಣ್ಣ ಹಾಗೂ ಅವರ ಪತ್ನಿ ಗೀತಅ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ರಿಲೀಸ್ ಆಗುವುದನ್ನೇ ಶ್ವೇತಾ ಅವರು ನಿರೀಕ್ಷಿಸುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಮತ್ತೆ ತೆರೆ ಮೇಲೆ ಮಿಂಚಲಿದ್ದಾರೆ.

  ''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''''ನಿತ್ಯಾ ಮೆನನ್ ಅನ್ನು ಮದುವೆಯಾಗುವುದಿಲ್ಲ, ನನ್ನನ್ನು ಕಳೆದುಕೊಂಡು ಪಶ್ಚಾತಾಪ ಪಡಲಿದ್ದಾಳೆ''

  ಕಿರುತೆಯಲ್ಲಿ ಶ್ವೇತಾ ಮಿಂಚು!

  ಕಿರುತೆಯಲ್ಲಿ ಶ್ವೇತಾ ಮಿಂಚು!

  ಎಸ್. ನಾರಾಯಣ ನಿರ್ದೇಶನದ ಸುಮತಿ ಧಾರಾವಾಹಿಯಲ್ಲಿ ಉದಯ ಟಿವಿಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಬಳಿಕ 2006ರಲ್ಲಿ ಕಾದಂಬರಿ ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ನಂತರ ಪ್ರಾರಂಭವಾದ ಸುಕನ್ಯ ಧಾರಾವಾಹಿಯಲ್ಲಿ ಮಿಂಚಿದರು. ಅರುಂಧತಿ ಧಾರಾವಾಹಿ ಮೂಲಕ ಮನೆ ಮನಗಳಲ್ಲಿ ಮಗಳಾಗಿ ಉಳಿದರು. ಶ್ವೇತಾ ಚೆಂಗಪ್ಪ ಅವರ ನಟನೆಗೆ ಜನ ಸೋತಿದ್ದರು. ಅವರ ಪಾತ್ರವನ್ನು ತಮ್ಮ ಮಗಳಂತೆಯೇ ಕಾಣುತ್ತಿದ್ದರು.

  ನಟನೆ ಜೊತೆಗೆ ನಿರೂಪಣೆ!

  ನಟನೆ ಜೊತೆಗೆ ನಿರೂಪಣೆ!

  ನಟನೆಗಷ್ಟೇ ಸೀಮಿತವಾಗಿರದ ಶ್ವೇತಾ ಚೆಂಗಪ್ಪ ಅವರು ನಿರೂಪಣೆಗೂ ಇಳಿದರು. ಜೀ ಕನ್ನಡದಲ್ಲಿ ಮೂಡಿ ಬಂದ ಯಾರಿಗುಂಟು ಯಾರಿಗಿಲ್ಲ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಪ್ರೇಕ್ಷಕರ ಮೆಚ್ಚಿನ ಆಂಕರ್ ಆದರು. ಬಳಿಕ ಕುಣಿಯೋಣ ಬಾರಾ ರಿಯಾಲಿಟಿ ಶೋ ಅನ್ನು ನಡೆಸಿಕೊಟ್ಟರು. ಸ್ಟಾರ್ ಸುವರ್ಣದಲ್ಲಿ ಮೂಡಿ ಬಂದ ಡ್ಯಾನ್ಸ್ ಜ್ಯೂನಿಯರ್ಸ್ ಡ್ಯಾನ್ಸ್ ರಿಯಾಲಿಟಿ ಶೋಗೂ ಇವರೇ ಆಂಕರ್ ಆಗಿದ್ದರು. ಇಷ್ಟೇ ಅಲ್ಲದೇ, ಡ್ಯಾನ್ಸಿಂಗ್ ಸ್ಟಾರ್, ಸೂಪರ್ ಮಿನಿಟ್, ಡೀ ಡ್ಯಾನ್ಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನೂ ನಿರೂಪಣೆ ಮಾಡಿದರು. ಇದೀಗ ಜೀ ಕನ್ನಡದ ಜೋಡಿ ನಂ. 1 ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದು, ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ.

  10 ವರ್ಷದ ಬಳಿಕ ಮತ್ತೆ ಬೆಳ್ಳಿತೆರೆಗೆ!

  10 ವರ್ಷದ ಬಳಿಕ ಮತ್ತೆ ಬೆಳ್ಳಿತೆರೆಗೆ!

  ಇದೀಗಷ್ಟೇ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಬಿಸಿರುವ ಶ್ವೇತಾ ಚೆಂಗಪ್ಪ ಅವರಿ ನಿರೂಪಣೆಗೆ ಉತ್ತಮವಾದ ರೆಸ್ಪಾನ್ಸ್ ಬರುತ್ತಿವೆ. ಇದೀಗ 10 ವರ್ಷದ ಬಳಿಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಶ್ವೇತಾ ಚೆಂಗಪ್ಪ ಅವರೇ ಹೇಳಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಂಗಿಗಾಗಿ ಚಿತ್ರದ ಮೂಲಕ ಸಿನಿಲೋಕಕ್ಕೆ ಬಂದರು. ಇದರಲ್ಲಿ ದರ್ಶನ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ವರ್ಷ ಸಿನಿಮಾದಲ್ಲೂ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡರು. ಇನ್ನು ಕೃಷ್ಣನ್ ಮ್ಯಾರೇಜ್ ಸ್ಟೋರಿ, ಗನ್ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದರು.

  English summary
  Tv Actress Shwetha Chengappa Second Innings In Sandalwood, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X