»   » ಕಿರುತೆರೆ ತಾರೆ 'ಕನಕ' ಖ್ಯಾತಿಯ ಸುಷ್ಮಾ ಸಂದರ್ಶನ

ಕಿರುತೆರೆ ತಾರೆ 'ಕನಕ' ಖ್ಯಾತಿಯ ಸುಷ್ಮಾ ಸಂದರ್ಶನ

Posted By:
Subscribe to Filmibeat Kannada
<ul id="pagination-digg"><li class="next"><a href="/tv/actress-sushma-lakumi-serial-zee-kannada-channel-069588.html">Next »</a></li></ul>
Sushma
ಕಿರುತೆರೆ ಲೋಕದಲ್ಲಿ ಬಹಳಷ್ಟು ನಟ-ನಟಿಯರು ಮಿಂಚುತ್ತಿದ್ದಾರೆ. ಅವರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ತಾರೆಗಳಾಗಿ ಹೊರಹೊಮ್ಮಿದ್ದಾರೆ. ಆ ತಾರೆಗಳಲ್ಲೊಂದು ಹೆಸರು ಸುಷ್ಮಾ. ಈ ಸುಷ್ಮಾ ಬೇರೆ ಯಾರೋ ಅಲ್ಲ, 'ಲಕುಮಿ' ಧಾರಾವಾಹಿ ಮೂಲಕ ಕರ್ನಾಟಕದ ಮೂಲೆಮೂಲೆಯನ್ನೂ ತಲುಪಿ ಈಗ 'ಕನಕ'ಳಾಗಿ ಕನ್ನಡಿಗರ ಮನೆಮನೆಯಲ್ಲಿ ಕಾಣಿಸಿಕೊಳ್ಳುತ್ತಾ ಎಲ್ಲರ 'ಮನ'ದಲ್ಲಿ ಮನೆ ಮಾಡಿರುವ ನಟಿ.

ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ಸುಷ್ಮಾ, ಕನ್ನಡ ಹಾಗೂ ತೆಲುಗು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ. 'ಮಕ್ಕಳ ಲೋಕ' ಧಾರಾವಾಹಿಯಿಂದ ಪ್ರಾರಂಭಿಸಿ ಜೀ ಕನ್ನಡ ವಾಹಿನಿಯಲ್ಲಿ ಈಗ ಪ್ರಸಾರ ಕಾಣುತ್ತಿರುವ 'ಕನಕ' ಧಾರಾವಾಹಿಯ ತನಕವೂ ಓದಿನ ಜೊತೆಜೊತೆಗೇ ಕಲಾವಿದೆಯಾಗಿಯೂ 'ಜರ್ನಿ' ಮುಂದುವರಿಸಿದ್ದಾರೆ. 'ಕನಕ' ಧಾರಾವಾಹಿಯ ಹಿನ್ನಲೆಯಲ್ಲಿ ಅವರನ್ನು 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಸಂದರ್ಶಿಸಿದಾಗ ಅವರಾಡಿದ ಮಾತುಗಳು ಇಲ್ಲಿವೆ, ಓದಿ..

*ನಿಮ್ಮ ಹುಟ್ಟೂರು, ಕುಟುಂಬ ಹಾಗೂ ಹಿನ್ನೆಲೆ ಹಾಗೂ ಶಿಕ್ಷಣದ ಬಗ್ಗೆ ಹೇಳಿ..

ಹುಟ್ಟೂರು ಬೆಂಗಳೂರು. ಅಪ್ಪ ಶೇಖರ್, ಅಮ್ಮ ಭಾಗೀರಥಿ. ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿದ್ದೇನೆ.

ನನಗೆ ಕಲಾವಿದರ ಕುಟುಂಬದ ಹಿನ್ನಲೆಯಿಲ್ಲದಿದ್ದರೂ ನನಗಿಂತ ಮೊದಲು ನನ್ನ ಅಕ್ಕ (ಅಂಕಿತನಯನಾ) ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿ ಈ ಕ್ಷೇತ್ರದಲ್ಲಿ ಇದ್ದ ಕಾರಣದಿಂದ ನನಗೆ ಇಲ್ಲಿ ಪ್ರವೇಶ ಸುಲಭವಾಯ್ತು. ಹೀಗಾಗಿ ಈ ಫೀಲ್ಡ್ ನಲ್ಲಿ ಅಕ್ಕನೇ ನನಗೆ 'ಮಾರ್ಗದರ್ಶಿ'.

*ನಿಮ್ಮ ಮೊದಲ ನಟನೆಯ ಧಾರಾವಾಹಿ ಯಾವುದು?

ನನ್ನಕ್ಕ ಅಂಕಿತನಯನಾ ಅದಾಗಲೇ ಸೀರಿಯಲ್ ನಲ್ಲಿ ನಟಿಸುತ್ತಿದ್ದರು ಎಂದು ಹೇಳಿದ್ದೇನೆ. ಅಕ್ಕನನ್ನು ಹುಡುಕಿಕೊಂಡು ಬಂದಿದ್ದ 'ಮಕ್ಕಳ ಲೋಕ' ಎಂಬ ಧಾರಾವಾಹಿ, ಅವಳಿಗೆ ಪರೀಕ್ಷೆ ಸಮೀಪಿಸಿದ್ದು ಹಾಗೂ ಬೇರೆ ಕಮಿಟ್ ಮೆಂಟ್ ಇರುವ ಕಾರಣಕ್ಕೆ ಆ ಧಾರಾವಾಹಿಯಲ್ಲಿ ನಾನೇ ನಟಿಸುವಂತಾಯ್ತು. ಅನಿವಾರ್ಯವಾಗಿ ನಟಿಸಲು ಒಪ್ಪಕೊಂಡ ನಾನು ನಂತರ ಅಗತ್ಯ ಆಸಕ್ತಿ ಬೆಳೆಸಿಕೊಂಡೆ. ಹೀಗಾಗಿ 'ಮಕ್ಕಳ ಲೋಕ' ಎಂಬುದೇ ನಾನು ನಟಿಸಿರುವ ಮೊದಲ ಧಾರಾವಾಹಿ.

*ಕಲಾವಿದೆಯಾಗಿ ನಿಮ್ಮ ಜರ್ನಿ ಬಗ್ಗೆ ಹೇಳಿ...

ಓದಿನ ಜೊತೆಜೊತೆಗೇ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಾನು 'ಮಕ್ಕಳ ಲೋಕ' ಧಾರಾವಾಹಿ ನಂತರ ವಿಜಯ ರೆಡ್ಡಿಯವರು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಿಸಿದ 'ವೆಂಕಟೇಶ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸಿದೆ. ಅದಾದ ನಂತರ ಕುಸುಮಾಂಜಲಿ, ಅಮೃತವಾಣಿ, ಪುಣ್ಯಕೋಟಿ ಧಾರಾವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿದೆ. ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/tv/actress-sushma-lakumi-serial-zee-kannada-channel-069588.html">Next »</a></li></ul>
English summary
Actress Sushma is the popular name in TV Industry. She acted in many serials like Makkala Loka, Kusumanjali, Lakumi and now acting in Zee Kannada Serial Kanaka. She became famous in Serial 'Lakumi' and now her fame is going high through the serial 'Kanaka'. Here is her Interview to read...&#13; &#13;
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada