ಕಟೀಲು ದುರ್ಗಾದೇವಿಯ ದರ್ಶನ ಪಡೆದ ನೇಹಾ- ಸೋನು ಸಹೋದರಿಯರು
ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ಸಹೋದರಿಯರು ನೇಹಾ ರಾಮಕೃಷ್ಣ ಹಾಗೂ ಸೋನು ಗೌಡ. ಸೋನು ಬೆಳ್ಳಿತೆರೆಯಲ್ಲೂ ಮಿಂಚಿದ್ದಾರೆ. ಹೌದು ಇವರಿಬ್ಬರೂ ಕೂಡ ಅಕ್ಕ ತಂಗಿ ಎಂದು ಹೇಳುವುದಕ್ಕಿಂತ ಹೆಚ್ಚಾಗಿ ಸ್ನೇಹಿತರಾಗಿ ಬೆರೆತ್ತಿರುವುದೇ ಹೆಚ್ಚು. ಎಲ್ಲೇ ಸುತ್ತಾಡಲು ಹೋದರೂ ಅಕ್ಕ ತಂಗಿ ಜೊತೆಯಾಗಿಯೇ ಹೋಗುತ್ತಾರೆ.
ಇನ್ನು ಕೆಲವು ದಿನಗಳ ಹಿಂದೆ ಅಕ್ಕ ತಂಗಿ ಇಬ್ಬರೂ ಥೈರ್ಲಾಂಡ್‌ಗೆ ಕೂಡ ಹೋಗಿದ್ದರು. ಅಲ್ಲಿ ಇಬ್ಬರು ಫೋಟೋ ಕ್ಲಿಕ್ಕಿಸಿ ಬಹಳ ಎಂಜಾಯ್ ಕೂಡ ಮಾಡಿದರು. ಪ್ರವಾಸ ಹೋಗುವುದು ಎಂದರೆ ನೇಹಾ ಗೌಡಗೆ ಬಹಳ ಇಷ್ಟವಂತೆ. ನೇಹಾ ಹಾಗೂ ಸೋನು ಆಗಾಗ ತಮ್ಮ ಫೋಟೋ ಹಾಗೂ ತಾವು ಮಾಡಿದ ರೀಲ್ಸ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜೊತೆ ಮತ್ತಷ್ಟೂ ಹತ್ತಿರ ಆಗಿದ್ದಾರೆ ಇಬ್ಬರು ನಟಿ ಮಣಿಯರು.

ಇನ್ನು ಇಬ್ಬರು ಸಹೋದರಿಯರು ಮಂಗಳೂರಿನ ಬಳಿ ಇರುವ ಕಟೀಲು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೌದು ನೇಹಾ ಗೌಡ ಹಾಗೂ ಸೋನು ಗೌಡ ಇಬ್ಬರು ಕಟೀಲು ದುರ್ಗಾ ಪರಮೇಶ್ವರಿ ದರ್ಶನ ಪಡೆದು ಪುನೀತರಾದರು. ಇವರಿಬ್ಬರೂ ಕೂಡ ದೇವಾಲಯದ ಬಳಿ ಹಾಗೂ ಆನೆಯ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಬಹಳ ಖುಷಿ ಪಟ್ಟಿದ್ದಾರೆ.
ನಂದಿನಿ ನದಿಯ ಥಟದಲ್ಲಿ ಇರುವ ದೇವಸ್ಥಾನ
ನಂದಿನಿ ನದಿಯ ಬಳಿಯೇ ಇರುವ ದೇವಾಲಯವನ್ನು ನೋಡಿ ಹಾಗೆಯೇ ದುರ್ಗ ದೇವರ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲಿರುವಂತಹ ಪ್ರಕೃತಿಯ ರಮಣೀಯ ದೃಶ್ಯವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಹಾಗೆಯೇ ದೇವಾಲಯದಲ್ಲಿ ಇರುವ ಆನೆಯನ್ನು ನೋಡಿ ಇಬ್ಬರು ಸಹೋದರಿಯರು ಬಹಳ ಖುಷಿ ಪಟ್ಟಿದ್ದಾರೆ. ಇನ್ನು ನೇಹಾ ಆಗಾಗ ವಿದೇಶಗಳಿಗೆ ಟ್ರಿಪ್ ಹೋಗುತ್ತಾ ಇರುತ್ತಾರೆ. ಇನ್ನು ಈ ಇಬ್ಬರು ಅಕ್ಕ ತಂಗಿಯನ್ನು ಅಭಿಮಾನಿಗಳು ಮತ್ತೆ ಒಟ್ಟಿಗೆ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.
ಕಿರುತೆರೆಯ ಗೊಂಬೆ ನಟಿ ನೇಹಾ
ಇನ್ನು ನೇಹಾ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಗಿರಿಜಾ ಆಗಿ ಅಭಿನಯ ಮಾಡುತ್ತಾ ಇದ್ದಾರೆ. ಹಾಗೆಯೇ ಕಿರುತೆರೆಯ ಗೊಂಬೆ ಎಂದೇ ನೇಹಾ ಖ್ಯಾತಿ ಪಡೆದುಕೊಂಡು ಇದ್ದಾರೆ. ಕನ್ನಡದ ರಿಯಾಲಿಟಿ ಶೋಗಳು, ಧಾರಾವಾಹಿಗಳಲ್ಲಿ ನಟಿ ನೇಹಾ ಗೌಡ ಕಾಣಿಸಿಕೊಂಡಿದ್ದಾರೆ. ಇದೀಗ ಕಿರುತೆರೆಗೆ ನೇಹಾ ಗೌಡ ಗಂಡ ಕೂಡ ಎಂಟ್ರಿ ನೀಡಿದ್ದಾರೆ. ಸೋನು ಗೌಡ ಕಿರುತೆರೆಗಿಂತ ಹೆಚ್ಚಾಗಿ ಹಿರಿತೆರೆಯಲ್ಲಿ ಮಿಂಚಿದ್ದಾರೆ.

ಮುದ್ದು ಮೊಗದ ಚೆಲುವೆ ಸೋನು ಗೌಡ
ಚಿತ್ರರಂಗದಲ್ಲಿ ಮಿಂಚುತ್ತಿರುವ ಮುದ್ದು ಮೊಗದ ಚೆಲುವೆ ಸೋನು ಗೌಡ . ಸೋನು ಗೌಡ ಹೆಚ್ಚಾಗಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ. 'ಮರೀಚಿ' ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಹಾಗೆಯೇ 'ದೃಶ್ಯ- 2', 'ಇಂತಿ ನಿನ್ನ ಪ್ರೀತಿಯ', 'ರಾಮ್', ಗೋವಾ, 'ಗುಲ್ಟು', 'ಚಂಬಲ್' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಹೋದರಿಯರಿಬ್ಬರು ಇದೀಗ ದುರ್ಗಾ ದೇವಿ ದರ್ಶನ ಪಡೆದಿದ್ದಾರೆ.
ಕೈ ಕೈ ಹಿಡಿದು ಸುತ್ತಾಟ
ಮೊದಲೇ ಹೇಳಿದಂತೆ ಸೋನು- ನೇಹಾ ಸದಾ ಸ್ನೇಹಿತೆಯರಂತೆ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಕಟೀಲು ದೇವಸ್ಥಾನದ ಆವರಣದಲ್ಲೂ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಸಹೋದರಿಯರು ನೀವು ಎಂದಾದರೂ ಇಲ್ಲಿಗೆ ಭೇಟಿ ನೀಡಿದ್ದೀರಾ? ಎಂದು ಅಭಿಮಾನಿಗಳಲ್ಲಿ ಕೇಳಿದ್ದಾರೆ.


Click it and Unblock the Notifications











