»   » ಸೀರಿಯಲ್ ದ್ವೇಷಿಗಳು ಮೆಚ್ಚಿದ ಧಾರಾವಾಹಿ 'ಶನಿ', ಸಾಕ್ಷಿ ಇಲ್ಲಿದೆ!

ಸೀರಿಯಲ್ ದ್ವೇಷಿಗಳು ಮೆಚ್ಚಿದ ಧಾರಾವಾಹಿ 'ಶನಿ', ಸಾಕ್ಷಿ ಇಲ್ಲಿದೆ!

Posted By:
Subscribe to Filmibeat Kannada

ಧಾರಾವಾಹಿಗಳು ಅಂದ್ರೆ ಇಷ್ಟು ಪಡುವ ಹೆಂಗಳೆಯರಿಗಿಂತ ದ್ವೇಷ ಮಾಡುವ ಗಂಡಸರು ಹೆಚ್ಚು. ಯಾಕಂದ್ರೆ, ಮನೆಯಲ್ಲಿ ಕೆಲಸ, ಊಟವನ್ನ ಬಿಟ್ಟು ಮಹಿಳೆಯರು ಧಾರಾವಾಹಿಗಳನ್ನ ನೋಡ್ತಾರೆ ಎಂಬ ಆರೋಪ.

ಆದ್ರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪೌರಾಣಿಕ ಧಾರಾವಾಹಿ 'ಶನಿ' ಈಗ ಈ ಆರೋಪ-ಪ್ರತ್ಯಾರೋಪಗಳನ್ನ ಮೀರಿ ಯಶಸ್ಸು ಕಂಡಿದೆ. ಹೌದು, ಸೀರಿಯಲ್ ದ್ವೇಷ ಮಾಡುವ ಗಂಡಸರು ಸೇರಿದಂತೆ ಮನೆ ಮಂದಿಯಲ್ಲಿ ಈ ಧಾರಾವಾಹಿಯನ್ನ ನೋಡುತ್ತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ 'ಶನಿ'

ಸಾಮಾಜಿಕ ಜಾಲತಾಣದಲ್ಲಿ ಧಾರಾವಾಹಿಗಳ ವಿರುದ್ಧವಾದ ಟ್ರೋಲ್ ಗಳು, ಬೈಗುಳಗಳೇ ಕಾಣಿಸುತ್ತೆ. ಆದ್ರೆ, ಇದೇ ಮೊದಲ ಬಾರಿಗೆ ಒಂದೇ ಒಂದು ಬೈಗುಳ, ಟ್ರೋಲ್ ಇಲ್ಲದೇ ಪ್ರತಿಯೊಬ್ಬರು ಮೆಚ್ಚಿಕೊಂಡಿರುವ ಸೀರಿಯಲ್ 'ಶನಿ'.

ಹಾಗಿದ್ರೆ, 'ಶನಿ' ಧಾರಾವಾಹಿ ಇಷ್ಟವಾಗಲು ಕಾರಣವೇನು? ಟಿವಿ ಪ್ರೇಕ್ಷಕರು ಮಾಡಿರುವ ಕಾಮೆಂಟ್ ಗಳೇನು ಎಂದು ಮುಂದೆ ಓದಿ.....

ಫ್ಯಾಮಿಲಿ ಶೋ

ಧಾರಾವಾಹಿಗಳನ್ನ ನೋಡದೆ ಇದ್ದವರು ಕೂಡ 'ಶನಿ' ಸೀರಿಯಲ್ ನೋಡಲು ಪ್ರಾರಂಭಿಸಿದ್ದಾರೆ. ಇದು ಇಡೀ ಕುಟುಂಬ ಕೂತು ನೋಡುವ ಅದ್ಭುತ ಸೀರಿಯಲ್ ಎನ್ನುವುದು ವೀಕ್ಷಕರ ಅಭಿಪ್ರಾಯ.

'ಅಗ್ನಿಸಾಕ್ಷಿ'ಯಲ್ಲಿ ಹೆಬ್ಬುಲಿ : ಲವರ್ ಬಾಯ್ ಸಿದ್ಧಾರ್ಥ್ ಈಗ ಆಕ್ಷನ್ ಹೀರೋ !

'ಶನಿ' ಪಾತ್ರಧಾರಿ

'ಶನಿ' ಧಾರಾವಾಹಿಯಲ್ಲಿ 'ಶನಿ' ಪಾತ್ರ ನಿರ್ವಹಿಸುತ್ತಿರುವ ಬಾಲಕನ ಬಗ್ಗೆ ಬಹುತೇಕ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಅಗ್ನಿಸಾಕ್ಷಿ'ಯಲ್ಲಿ ರೋಚಕ ಟ್ವಿಸ್ಟ್: ತಾಯಿಯ ಕೈ ಸೇರಿದ ಆಯುಷಿ.!

1 ಗಂಟೆ ಪ್ರಸಾರ ಮಾಡಿ

'ಶನಿ' ಧಾರಾವಾಹಿ ಅರ್ಧ ಗಂಟೆ ಪ್ರಸಾರವಾಗುತ್ತಿದ್ದು, ಅದನ್ನ ಒಂದು ಗಂಟೆಗೆ ಪ್ರಸಾರದ ಅವಧಿಯನ್ನ ಹೆಚ್ಚಿಸುವಂತೆ ಅನೇಕರ ಮನವಿಯಾಗಿದೆ.

ನೀವು 'ಪುಟ್ಟಗೌರಿ ಮದುವೆ' ಸೀರಿಯಲ್ ಭಕ್ತರಾ? ಇದನ್ನೊಮ್ಮೆ ತಪ್ಪದೆ ಓದಿ..

ಸಮಯ ಬದಲಾಯಿಸಿ

ಸಮಯ ಹೆಚ್ಚಿಸುವುದು ಮಾತ್ರವಲ್ಲದೇ, ಪ್ರಸಾರದ ಸಮಯವನ್ನ ಕೂಡ ಬದಲಾಯಿಸಲು ಕೋರಿಕೆ ಇಡುತ್ತಿದ್ದಾರೆ ವೀಕ್ಷಕರು. ಯಾಕಂದ್ರೆ, 8.30 ಕ್ಕೆ 'ಶನಿ' ಪ್ರಸಾರವಾಗುತ್ತೆ. ಆ ವೇಳೆ 'ಬಿಗ್ ಬಾಸ್' ಮತ್ತು ಇತರೆ ಧಾರಾವಾಹಿಗೆ ಹೊಂದಿಕೊಂಡಿರುತ್ತಾರೆ ಎಂಬ ಮಾತು ಹಲವರದ್ದು.

ಒಂದೇ ಒಂದು ನೆಗಿಟೀವ್ ಕಾಮೆಂಟ್ ಇಲ್ಲ

ಬಹುತೇಕ ಧಾರಾವಾಹಿಗಳಿಗೆ ಪಾಸಿಟೀವ್ ಗಿಂತ ನೆಗಿಟೀವ್ ಕಾಮೆಂಟ್ ಗಳೇ ಹೆಚ್ಚು. ಆದ್ರೆ, 'ಶನಿ' ಧಾರಾವಾಹಿಯಲ್ಲಿ ಯಾವುದೇ ಒಂದೇ ಒಂದು ನೆಗಿಟೀವ್ ಕಾಮೆಂಟ್ ಇಲ್ಲದೆ ಜನರ ಮೆಚ್ಚಿಕೊಂಡಿದ್ದಾರೆ.

ಮೇಕಿಂಗ್ ಸೂಪರ್

'ಶನಿ' ಧಾರಾವಾಹಿಯಲ್ಲಿ ಎಲ್ಲವೂ ಉತ್ತಮವಾಗಿದೆ ಎಂಬುದು ಪ್ರೇಕ್ಷಕರ ಸಮಾದಾನ. ಪಾತ್ರಗಳ ಆಯ್ಕೆ, ಅವರ ಅಭಿನಯ, ತಾಂತ್ರಿಕವಾಗಿ, ಗ್ರಾಫಿಕ್ಸ್ ಹೀಗೆ ಎಲ್ಲವನ್ನು ಇಷ್ಟ ಪಟ್ಟಿದ್ದಾರೆ.

ಅರ್ಧಕ್ಕೆ ನಿಲ್ಲಿಸಬೇಡಿ

ಬಹುತೇಕ ಧಾರಾವಾಹಿಗಳು ಕಾರಣವಿಲ್ಲದೇ ಅರ್ಧಕ್ಕೆ ನಿಲ್ಲಿಸಿರುವ ಉದಾಹರಣೆಗಳಿವೆ. ಹೀಗಾಗಿ, 'ಶನಿ' ಧಾರಾವಾಹಿಯನ್ನ ಅರ್ಧಕ್ಕೆ ನಿಲ್ಲಿಸಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ಶನಿ ಧಾರಾವಾಹಿ ಯಶಸ್ಸು ಕಂಡಿದೆ.

ಜನ ಮೆಚ್ಚಿದ 'ಶನಿ'

ಈ ಮೂಲಕ 'ಶನಿ' ಧಾರಾವಾಹಿ ಇತರೆ ಸೀರಿಯಲ್ ಗಳನ್ನ ಹಿಂದಿಕ್ಕಿ ರೇಟಿಂಗ್ ನಲ್ಲೂ ಮುಂದುವರೆಯುತ್ತಿದೆ. ಇದರಿಂದ ಟಿವಿ ಪ್ರೇಕ್ಷಕರಿಗೆ ಒಂದೊಳ್ಳೆ ಮನರಂಜನೆಯ ಕಾರ್ಯಕ್ರಮ ಇದಾಗಿದೆ ಎನ್ನುವುದು ನೆಟ್ಟಿಗರ ಕಾಮೆಂಟ್.

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

English summary
Tv Audience is appreciating to the 'Shani' Serial in social media. ಸಾಮಾಜಿಕ ಜಾಲತಾಣದಲ್ಲಿ ಶನಿ ಧಾರಾವಾಹಿ ಬಗ್ಗೆ ಎಲ್ಲರು ಮೆಚ್ಚಿಗೆ ವ್ಯಕ್ತ ಪಡಿಸುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X