ಯುವ ಸಂಸದರಿಗೆ ನಿಜಕ್ಕೂ 'ಹಾಟ್ ಸೀಟ್‌' ಆದ ಕನ್ನಡದ ಕೋಟ್ಯಧಿಪತಿ!

Recommended Video

ಪ್ರತಾಪ್ ಸಿಂಹ & ತೇಜಸ್ವಿ ಸೂರ್ಯ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು..?

ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿರುವ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಮತ್ತು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ನೆಟ್ಟಿಗರು ಸಿಡಿದೆದ್ದಿದ್ದಾರೆ. 'ಕೇಂದ್ರ ಸರ್ಕಾರದಿಂದ ಅನುದಾನ ತನ್ನಿ ಅಂದ್ರೆ ಇಲ್ಲಿ ಬಂದು ಕೋಟ್ಯಧಿಪತಿ ಆಟ ಆಡ್ತಾವ್ರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೋರಂಜನಾ ರಿಯಾಲಿಟಿ ಶೋನಲ್ಲಿ ಗೆದ್ದ ಹಣವನ್ನ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ ನೀಡುವುದಾಗಿ ಇಬ್ಬರು ಸಂಸದರು ಹೇಳಿದ್ದರು. ಅದು ಕಾರ್ಯಕ್ರಮ ಪರಿಕಲ್ಪನೆ ಕೂಡ ಆಗಿತ್ತು. ಆದರೆ ಇದನ್ನು ವೀಕ್ಷಿಸಿದ ಜನ ಸಂಸದರಿಬ್ಬರಿಗೆ ತಮ್ಮ ಹೊಣೆಗಾರಿಕೆಯನ್ನು ನೆನಪು ಮಾಡಿಕೊಟ್ಟಿದ್ದಾರೆ. 'ನ್ಯಾಯಯುತವಾಗಿ ಸರ್ಕಾರದಿಂದ ಬರಬೇಕಾಗಿರುವ ಪರಿಹಾರವನ್ನ ಕೊಡಿಸಿ, ಇಲ್ಲಿ ಕೂತು ಸುಮ್ಮನೆ ಶೋ ಕೊಡಬೇಡಿ' ಎಂದು ಕಿಡಿಕಾರಿದ್ದಾರೆ.

ಈ ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ಬಿಜೆಪಿ ಸಂಸದರ ವಿರುದ್ದ ಹೊರಹಾಕಿರುವ ಜನ, ಕರ್ನಾಟಕದ ಭೀಕರ ಪ್ರವಾಹ ಮತ್ತು ಅದಕ್ಕೆ ಸರಕಾರ ಸ್ಪಂದಿಸುತ್ತಿರುವ ರೀತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯದಲ್ಲಿ ಪ್ರವಾಹ ಉಂಟಾಗಿ ಜನರು ಬೀದಿಗೆ ಬಂದಿದ್ದಾರೆ. ಇವರು ನೋಡಿದ್ರೆ ಏನೂ ಆಗಿಲ್ಲ ಅನ್ನೋತರ 'ದಿ ಗ್ರೆಟ್' ರಾಜಕಾರಣಿಗಳ ರೀತಿ ಸೂಟು, ಬೂಟು ಹಾಕ್ಕೊಂಡು ಬಂದು ಆಟ ಆಡ್ತಿದ್ದಾರೆ ಎಂದು ಶೋ ಆಯೋಜಕರು ಮತ್ತು ಸಂಸದರ ವಿರುದ್ಧ ಪ್ರೇಕ್ಷಕರು ಅಸಮಾಧಾನಗೊಂಡಿದ್ದಾರೆ. ಮುಂದೆ ಓದಿ....

ಅನುದಾನ ಯಾಕೆ ತಂದಿಲ್ಲಾ?

ಅನುದಾನ ಯಾಕೆ ತಂದಿಲ್ಲಾ?

ರಾಜ್ಯದ ನೆರೆ ಸಂತ್ರಸ್ತರಗೆ ನಿರೀಕ್ಷೆಯ ಅನುದಾನ ಸಿಕ್ಕಿಲ್ಲ. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದರೂ, ಕೇಂದ್ರಕ್ಕೆ ಒತ್ತಡ ಹಾಕಿ ಅನುದಾನ ತರುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇಂತಹ ಸಮಯದಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಕನ್ನಡದ ಕೋಟ್ಯಧಿಪತಿ ಶೋಗೆ ಬಂದಿದ್ದಾರೆ. ಇದು ಸಹಜವಾಗಿ ಜನರನ್ನ ಕೆರಳಿಸಿದೆ.

ಕೋಟ್ಯಧಿಪತಿಯಿಂದ ಹಣ ತರೋದಕ್ಕೆ ನಿಮ್ಮನ್ನ ಗೆಲ್ಲಿಸಿಲ್ಲ

ಕೋಟ್ಯಧಿಪತಿಯಿಂದ ಹಣ ತರೋದಕ್ಕೆ ನಿಮ್ಮನ್ನ ಗೆಲ್ಲಿಸಿಲ್ಲ

''ನಿಮ್ಮನ್ನು ಕೋಟ್ಯಧಿಪತಿ ಕಾರ್ಯಕ್ರಮದಿಂದ ಗೆದ್ದುಕೊಂಡು ಬನ್ನಿ ಅಂತ ಸಂಸದರಾಗಿ ಆಯ್ಕೆ ಮಾಡಿಲ್ಲ. ಹೋಗಿ ಕೇಂದ್ರ ಸರ್ಕಾರದಿಂದ ಜನರಿಗೆ ತಲುಪಬೇಕಾಗಿರುವ ಹಣವನ್ನ ತನ್ನಿ. ಕನ್ನಡಿಗರಿಗೆ ಉದ್ಯೋಗ ಕೊಡಿಸಿ'' ಎಂದು ಟೀಕಿಸಿದ್ದಾರೆ.

 ಮಾಡೋ ಕೆಲಸ ಮಾಡಿ, ಅದನ್ನ ಬಿಟ್ಟು ಶೋ ಕೊಡ್ಬೇಡಿ

ಮಾಡೋ ಕೆಲಸ ಮಾಡಿ, ಅದನ್ನ ಬಿಟ್ಟು ಶೋ ಕೊಡ್ಬೇಡಿ

''ಸಂಸದರಾಗಿ ನೀವು ಮಾಡಬೇಕಾಗಿರುವ ಕೆಲಸವನ್ನ ಮಾಡಿ, ಅದನ್ನ ಬಿಟ್ಟು ಇಲ್ಲಿ ಬಂದು ಶೋ ಕೊಡ್ಬೇಡಿ. ನಾಡಿಗೆ ನ್ಯಾಯಯುತವಾಗಿ ಬರಬೇಕಾಗಿರುವ ಅನುದಾನ ತನ್ನಿ. ಇವರನ್ನ ಕರೆಸುವ ಬದಲು ಬೇರೆ ಯಾರನ್ನಾದರೂ ಕೂರಿಸಬಹುದಿತ್ತು?'' ಎಂದು ಆಯೋಜಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ದುಡ್ಡನ್ನ ಕೇಳೋ ಜಾಗದಲ್ಲಿ ಕೇಳಿ

ದುಡ್ಡನ್ನ ಕೇಳೋ ಜಾಗದಲ್ಲಿ ಕೇಳಿ

''ದುಡ್ಡನ್ನ ಕೇಳೋ ಜಾಗದಲ್ಲಿ ಕೇಳಿ, ಇಲ್ಲೇನು ಮಾಡ್ತಿದ್ದೀರಾ. ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿರುವುದು ಜನರ ಕಷ್ಟ, ಕಣ್ಣೀರು ಒರೆಸಲು. ಪ್ರಕೃತಿ ವಿಕೋಪದಿಂದ ಆಗಿರುವ ತೊಂದರೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ತಿಳಿಸಿ ಜನರಿಗೆ ನೆರವಾಗಿ, ಅದನ್ನ ಬಿಟ್ಟು ಇಲ್ಲಿ ಬಂದು ಸಹಾಯ ಮಾಡ್ತೀವಿ ಅಂತ ಶೋ ಕೊಡ್ಬೇಡಿ'' ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

50 ಜನಕ್ಕೆ ಸಹಾಯ ಮಾಡೋಕೆ ಆಗಲ್ಲ

50 ಜನಕ್ಕೆ ಸಹಾಯ ಮಾಡೋಕೆ ಆಗಲ್ಲ

''ಕೋಟ್ಯಧಿಪತಿಯಲ್ಲಿ ಗೆದ್ದ ಹಣದಿಂದ ನೀವು 50 ಜನಕ್ಕೆ ಸಹಾಯ ಮಾಡೋಕೆ ಆಗಲ್ಲ. ಕೇಂದ್ರದಲ್ಲಿ ಬರಬೇಕಾಗಿರುವ ಹಣ ಬಿಟ್ಟು, ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೇಡಲು ಬಂದಿದ್ದೀರಾ" ಎಂದು ಯುವ ಸಂಸದರನ್ನ ಪ್ರಶ್ನಿಸುತ್ತಿದ್ದಾರೆ.

ಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆ

ಶೋ ನೋಡಲ್ಲ ಸಾರ್

ಶೋ ನೋಡಲ್ಲ ಸಾರ್

''ಪುನೀತ್ ರಾಜ್ ಕುಮಾರ್ ಅವರ ಮೇಲಿನ ಪ್ರೀತಿಯಿಂದ ಈ ಶೋ ನೋಡ್ತೀವಿ. ಆದರೆ, ಇಂತವರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದ ಮೇಲೆ ಇದನ್ನ ನೋಡಬಾರದೆಂದು ನಿರ್ಧರಿಸಿದ್ದೇವೆ'' ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

ಶೋಗೆ ಬಂದಿದ್ದು ತಪ್ಪಲ್ಲ

ಶೋಗೆ ಬಂದಿದ್ದು ತಪ್ಪಲ್ಲ

ತೇಜಸ್ವಿ ಸೂರ್ಯ ಮತ್ತು ಪ್ರತಾಪ್ ಸಿಂಹ ಅವರು ಕೋಟ್ಯಧಿಪತಿಗೆ ಶೋಗೆ ಬಂದಿದ್ದು ತಪ್ಪಲ್ಲ. ಆದರೆ ಕೇಂದ್ರದಿಂದ ಅನುದಾನ ತರಬೇಕಾದ ಜವಾಬ್ದಾರಿ ಅವರ ಮೇಲಿತ್ತು. ಇದುವರೆಗೂ ಆ ಕೆಲಸ ಆಗಿಲ್ಲ. ಅದನ್ನ ಬಿಟ್ಟು ಈ ಶೋನಿಂದ ಬರುವ ಹಣವನ್ನ ನಾನು ಸಿಎಂ ಪರಿಹಾರ ನಿಧಿಗೆ ಕೊಡ್ತೀವಿ ಅಂದ್ರೆ, ಅವರ ಘನತೆಗೆ ತಕ್ಕ ನೆರವು ಇದಾಗುತ್ತಾ? ಎಂಬುದು ಸಹಜವಾಗಿ ಬೇಸರ ತರಿಸುತ್ತೆ.

More from Filmibeat

English summary
Tv Audience expressed displeasure against tejasvi surya and pratap simha for being participate in Kannadada kotyadipathi programme.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X