ಎಂಗೇಜ್ ಆಗಿ ಮದುವೆಗೆ ಸಜ್ಜಾದ ಕನ್ನಡ ಕಿರುತೆರೆ ನಟ-ನಟಿಯರು

By ಪ್ರಿಯಾ ದೊರೆ

ಈ ವರ್ಷ ಮದುವೆಯಾಗಲು ಒಂದಷ್ಟು ಕಿರುತೆರೆ ಜೋಡಿಗಳು ಸಜ್ಜಾಗಿದ್ದಾರೆ. ನಿಶ್ಚಿತಾರ್ಥದ ಮುದ್ರೆ ಒತ್ತಿ. ಮದುವೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಿರುತೆರೆ ನಟ-ನಟಿಯರ ಮದುವೆ ಸಾಲು ಸಾಲಾಗಿ ನಡೆಯುತ್ತಿರುತ್ತದೆ.

ಇತ್ತೀಚೆಗೆ ಒಂಭತ್ತು ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆ ಜೋಡಿಗಳು ಯಾರು.? ಅವರು ಮದುವೆಯಾಗುತ್ತಿರುವವರೆಲ್ಲಾ ಯಾರು ಎಂಬ ಕಂಪ್ಲೀಟ್ ಡಿಟೇಲ್ಸ್ ನೋಡೋಣ ಬನ್ನಿ..

TV Celebs Wedding Bells 9 Television Couples Get Engaged and Ready to Tie the Knot

ಇತ್ತೀಚೆಗಷ್ಟೇ ನಟಿ ವೈಷ್ಣವಿ ಗೌಡ, ಸುಪ್ರೀತಾ ಸತ್ಯ ನಾರಾಯಣ್, ಶೋಭಾ ಶೆಟ್ಟಿ, ಶೀಲಾ ಸೇರಿದಂತೆ ಹಲವು ಕಿರುತೆರೆ ನಟಿಯರು ಎಂಗೇಜ್ ಆಗಿದ್ದಾರೆ.

ಇನ್ನು ಕಿರುತೆರೆ ನಟರಾದ ಶಮಂತ್ ಬ್ರೋ ಗೌಡ, ಯದು ಶ್ರೇಷ್ಠ, ರಂಜಿತ್ ಕೂಡ ತಮ್ಮ ಮನದರಸಿಯ ಬೆರಳಿಗೆ ಉಂಗುರ ತೊಡಿಸಿ, ತಾಳಿ ಕಟ್ಟಲು ಸಜ್ಜಾಗಿದ್ದಾರೆ.

ವೈಷ್ಣವಿ ಬಾಳ ಸಂಗಾತಿ

ಬಹಳ ಸಮಯದಿಂದ ನಟಿ ವೈಷ್ಣವಿ ಗೌಡ ಅವರ ಮದುವೆ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದವು. ಆದರೆ, ಇದೀಗ ಅಫೀಶಿಯಲ್ ಆಗಿ ನಟಿ ವೈಷ್ಣವಿ ಗೌಡ ಅವರು ಎಂಗೇಜ್ ಆಗಿದ್ದಾರೆ. ಅನುಕೂಲ್ ಮಿಶ್ರಾ ಎಂಬುವರಿಗೆ ನಟಿ ವೈಷ್ಣವಿ ಗೌಡ ಅವರು ಉಂಗುರ ತೊಡಿಸಿದ್ದಾರೆ. ಆದರೆ ಮದುವೆಯ ದಿನಾಂಕದ ಬಗ್ಗೆ ಮಾತ್ರಿ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ.

TV Celebs Wedding Bells 9 Television Couples Get Engaged and Ready to Tie the Knot

ಸಾಲು ಸಾಲು ಮದುವೆ

ಸದ್ಯ ವೈಷ್ಣವಿ ಗೌಡ ಅವರು 'ಸೀತಾರಾಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಈ ಹಿಂದೆ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಟಿಸಿದ್ದರು. ಈವರನ್ನು ಹೊರತು ಪಡಿಸಿ ಶೋಭಾ ಶೆಟ್ಟಿ, ಐಶ್ವರ್ಯ ರಂಗರಾಜನ್ ಸೇರಿದಂತೆ ಹಲವು ನಿಶ್ಚಿತಾರ್ಥನ್ನು ಮಾಡಿಕೊಂಡು ಮದುವೆಗಾಗಿ ಕಾಯುತ್ತಿದ್ದಾರೆ.

ನಟಿಯರ ಮದುವೆ ನಿಶ್ಚಯ

'ದೃಷ್ಟಿಬೊಟ್ಟು', 'ಭೂಮಿಗೆ ಬಂದ ಭಗವಂತ', 'ಮಹಾಕಾಳಿ' ಧಾರಾವಾಹಿಗಳಲ್ಲಿ ನಟಿಸಿರುವ ಗೌತಮಿ ಜಯರಾಮ್ ಅವರುಇತ್ತೀಚೆಗಷ್ಟೇ ಎಂಗೇಜ್ ಆಗಿದ್ದಾರೆ. ಉದಯ್ ರಾಜ್ ಎಂಬುವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 'ರಾಮಾಚಾರಿ', 'ಗಿಣಿ ರಾಮ', 'ಇಂತಿ ನಿಮ್ಮ ಆಶಾ', 'ರಾಧಿಕಾ' ಧಾರಾವಾಹಿಗಳಲ್ಲಿ ನಟಿಸಿರುವ ಶೃತಿ ಅವರು ಕೂಡ ಸೈಲೆಂಟ್ ಆಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಚಿರಂತ್ ಎಂಬು ಹುಡುಗನೊಂದಿಗೆ ಮದುವೆಯ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

ಶೋಭಾ ಶೆಟ್ಟಿ ಎಂಗೇಜ್ಡ್

ಕನ್ನಡ ಕಿರುತೆರೆ ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚಿ, ಇದೀಗ 'ಬಾಯ್ಸ್ ವರ್ಸಸ್ ಗರ್ಲ್ಸ್' ಮೂಲಕ ಮೋಡಿ ಮಾಡುತ್ತಿರುವ ಚೆಲುವೆ ಶೋಭಾ ಶೆಟ್ಟಿ ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಿ ಹಲವು ವರ್ಷಗಳಿಂದ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿರುವ ನಟಿ ಶೋಭಾ ಶೆಟ್ಟಿ ಅವರು ನಟ ಯಶವಂತ್ ಅವರೊಂದಿಗೆ ಎಂಗೇಜ್ ಆಗಿದ್ದಾರೆ. ತೆಲುಗು ಬಿಗ್ ಬಾಸ್ ನಲ್ಲಿ ಸದ್ದು ಮಾಡಿ ಸದ್ಯ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದು, ಇವರ ಮದುವೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಸುಪ್ರೀತಾ ನಿಶ್ಚಿತಾರ್ಥ

ನಟಿ ಸುಪ್ರೀತಾ ಸತ್ಯ ನಾರಾಯಣ್ ಅವರು 'ಸೀತಾ ವಲ್ಲಭ', 'ಸರಸು' ಸೇರಿದಂತೆ ಕೆಲ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದು, ಸದ್ಯ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಗಾಯಕಿ ಐಶ್ವರ್ಯ ರಂಗರಾಜನ್ ಅವರು ಕೂಡ ಎಂಗೇಜ್ ಆಗಿದ್ದು. ಮದುವೆ ಬಗ್ಗೆ ಮಾಹಿತಿ ನೀಡಬೇಕಿದೆ.

ನಟರ ಕೈ ಹಿಡಿಯೋದು ಯಾರು?

ಇನ್ನು ಕಿರುತೆರೆ ನಟ ಶಮಂತ್ ಬ್ರೋ ಗೌಡ ಬಾಲ್ಯದ ಗೆಳತಿಯೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದು, ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಖ್ಯಾತಿಯ ರಂಜಿತ್ ಅವರು ಮಾನಸಾ ಗೌಡ ಎಂಬುವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 'ಮಿಥುನ ರಾ'ಶಿ ಧಾರಾವಾಹಿ ಖ್ಯಾತಿಯ ನಟ ಯದು ಶ್ರೇಷ್ಠ ಅವರು ಇಷ್ಟದ ಹುಡುಗಿ ಜೊತೆಗೆ ಮದುವೆ ನಿಶ್ಚಯಿಸಿಕೊಂಡಿದ್ದಾರೆ. ಸದ್ಯ ನವ ಜೋಡಿಗಳು ಎಂಗೇಜ್ ಮೆಂಟ್ ಮಾತ್ರ ಮಾಡಿಕೊಂಡಿದ್ದು, ಇನ್ನೂ ಮದುವೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

More from Filmibeat

English summary
Including Vaishnavi Gowda, Shobha Shetty, and Shamanth Bro Gowda, get engaged and prepare for their weddings.
Read more about: serial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X