For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ಫೈನಲ್ ಫಿಕ್ಸ್ ಎಂದು ಕೆಲಸ ಬಿಟ್ಟ ಯುವತಿ! 'ವಾಹಿನಿ' ಕೊಟ್ಟ ಸ್ಪಷ್ಟನೆ ಏನು?

  |

  'ಬಿಗ್ ಬಾಸ್ ಕಾರ್ಯಕ್ರಮ ಫಿಕ್ಸಿಂಗ್'.....ಇಂತಹದೊಂದು ಪ್ರಶ್ನೆ ಮೊದಲನೇ ಆವೃತ್ತಿಯಿಂದಲೂ ವೀಕ್ಷಕರನ್ನು ಕಾಡುತ್ತಲೇ ಇದೆ. ಈ ಶೋನಲ್ಲಿ ವೀಕ್ಷಕರು ವೋಟ್ ಪ್ರಮುಖವಾಗಿರುವುದಿಲ್ಲ, ಜಯಶಾಲಿ ಯಾರಾಗಬೇಕು ಎಂದು ಮೊದಲೇ ತೀರ್ಮಾನವಾಗಿರುತ್ತೆ ಎಂಬ ಆರೋಪವೂ ಇದೆ.

  Bigg Boss : Confidential Video of Bigg Boss 13 control room goes viral | Filmibeat kannada

  ಆದರೆ, ಇದುವರೆಗೂ ವಾಹಿನಿ ಕಡೆಯಿಂದ ಆಗಲಿ ಅಥವಾ ಸ್ಪರ್ಧಿಗಳಿಂದ ಆಗಲಿ ಫಿಕ್ಸಿಂಗ್ ಎಂಬ ಮಾತು ಕೇಳಿಬಂದಿಲ್ಲ. ಆದ್ರೀಗ ಹಿಂದಿ ಕಾರ್ಯಕ್ರಮದ ಮೇಲೆ ಯುವತಿಯೊಬ್ಬರು ಮಾಡಿರುವ ಆರೋಪ ಟಾಕ್ ಆಫ್ ದಿ ಟೌನ್ ಆಗಿದೆ.

  ಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರುಬಿಗ್‌ ಬಾಸ್‌ ಸೈಡ್ ಎಫೆಕ್ಟ್: 'ಕಲರ್ಸ್ ಟಿವಿ' ಬ್ಯಾನ್ ಮಾಡಿ ಎಂದು ರೊಚ್ಚಿಗೆದ್ದ ನೆಟ್ಟಿಗರು

  ಬಿಗ್ ಬಾಸ್ ಶೋನಲ್ಲೇ ಆ ಯುವತಿ ಕೆಲಸ ಮಾಡುತ್ತಿದ್ದರಂತೆ. ಫೈನಲ್ ಫಲಿತಾಂಶ ಫಿಕ್ಸಿಂಗ್ ಎಂದು ಗೊತ್ತಾಗುತ್ತಿದ್ದಂತೆ ಕೆಲಸ ಬಿಟ್ಟು ಹೊರಬಂದರಂತೆ. ಅಷ್ಟಕ್ಕೂ, ಆ ಯುವತಿ ಮಾಡುತ್ತಿರುವ ಆರೋಪ ಏನು? ವಾಹಿನಿ ಅವರು ಕೊಟ್ಟ ಸ್ಪಷ್ಟನೆ ಏನು?

  ಕಡಿಮೆ ವೋಟ್ ಬಂದರೂ ಸಿದ್ಧಾರ್ಥ್ ಗೆದ್ದರಾ?

  ಕಡಿಮೆ ವೋಟ್ ಬಂದರೂ ಸಿದ್ಧಾರ್ಥ್ ಗೆದ್ದರಾ?

  ಬಿಗ್ ಬಾಸ್ ಫೈನಲ್ ಕುರಿತು ಫೆರಿಹಾ ಎಂಬ ಯುವತಿ ಟ್ವೀಟ್ ಮಾಡಿದ್ದು, ''ನಾನು ನನ್ನ ಕೆಲಸ ಬಿಡಲು ನಿರ್ಧರಿಸಿದ್ದೇನೆ. ಕ್ರಿಯೇಟೀವ್ ತಂಡದ ನಾನು ಕೆಲಸ ಮಾಡಿದ್ದು ಒಳ್ಳೆಯ ಅನುಭವ ಆದರೆ ಫಿಕ್ಸಿಂಗ್ ಶೋ ಎಂದು ಭಾವಿಸಿರಲಿಲ್ಲ. ಕಡಿಮೆ ವೋಟ್ ಬಂದಿದ್ದರೂ ಸಿದ್ಧಾರ್ಥ್ ಶುಕ್ಲಾ ಅವರನ್ನು ವಿನ್ನರ್ ಮಾಡುತ್ತಿದೆ. ನಾನು ಇದರಲ್ಲಿ ಭಾಗಿಯಾಗಲು ಇಷ್ಟವಿಲ್ಲ'' ಎಂದು ಫೆಬ್ರವರಿ 15 ರಂದು ಟ್ವೀಟ್ ಮಾಡಿದ್ದಾರೆ.

  ಫೈನಲ್ ಗೆದ್ದ ಸಿದ್ಧಾರ್ಥ್ ಶುಕ್ಲಾ

  ಫೈನಲ್ ಗೆದ್ದ ಸಿದ್ಧಾರ್ಥ್ ಶುಕ್ಲಾ

  ಬಿಗ್ ಬಾಸ್ 13ನೇ ಸೀಸನ್ ಫೈನಲ್ ಫೆಬ್ರವರಿ 15 ಮತ್ತು 16 ರಂದು ನಡೆದಿದೆ. ಅಸೀಮ್ ರಿಯಾಜ್ ಅವರನ್ನು ಹಿಂದಿಕ್ಕಿದ ಸಿದ್ಧಾರ್ಥ್ ಶುಕ್ಲಾ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಗೆಲ್ಲಬಹುದು ಎಂದುಕೊಂಡಿದ್ದರು ಈ ಫಲಿತಾಂಶದಿಂದ ಸಂತಸಪಟ್ಟರು. ಆದರೆ, ಅಸೀಮ್ ರಿಯಾಜ್ ಬೆಂಬಲಿಗರು ಫೆರಿಹಾ ಅವರ ಟ್ವೀಟ್ ಮುಂದಿಟ್ಟು ಶೋ ವಿರುದ್ಧ ಟೀಕಿಸಿದರು. ಇದು ಫಿಕ್ಸ್ ಎಂದು ಕಾಲೆಳೆದರು.

  ಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿಕಳೆದೆಲ್ಲ ಸೀಸನ್ ವಿನ್ನರ್ ಗಿಂತ ಹೆಚ್ಚು ಬಹುಮಾನ ಪಡೆದ 'ಬಿಗ್ ಬಾಸ್-7' ವಿನ್ನರ್ ಶೈನ್ ಶೆಟ್ಟಿ

  'ಇದು ಫಿಕ್ಸಿಂಗ್ ಅಲ್ಲ'- ಅಸೀಮ್

  'ಇದು ಫಿಕ್ಸಿಂಗ್ ಅಲ್ಲ'- ಅಸೀಮ್

  ಬಿಗ್ ಬಾಸ್ ಫೈನಲ್ ನಲ್ಲಿ ರನ್ನರ್ ಅಪ್ ಆದ ಅಸೀಮ್ ರಿಯಾಜ್ ಕೂಡ ಶೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ''ಇದು ಫಿಕ್ಸಿಂಗ್ ಅಲ್ಲ. ನಾನು ಇಲ್ಲಿಯವರೆಗೂ ಬಂದಿದ್ದು ಹಾಗೂ ಸಿದ್ಧಾರ್ಥ್ ಫೈನಲ್ ಗೆದ್ದಿದ್ದು ಜನರ ಪ್ರೀತಿಯಿಂದ. ಬಿಗ್ ಬಾಸ್ ಫಿಕ್ಸಿಂಗ್ ಅಲ್ಲ'' ಎಂದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

  ಸ್ಪಷ್ಟನೆ ನೀಡಿದ ವಾಹಿನಿ

  ಸ್ಪಷ್ಟನೆ ನೀಡಿದ ವಾಹಿನಿ

  ಇನ್ನು ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಬಿಟ್ಟೆ ಎಂದು ಹೇಳಿಕೊಂಡಿರುವ ಯುವತಿ ಬಗ್ಗೆ ವಾಹಿನಿ ಸ್ಪಷ್ಟನೆ ನೀಡಿದೆ. ''ಬಿಗ್ ಬಾಸ್ ಆರೋಪ ಮಾಡಿರುವ ಆ ಯುವತಿ ನಮ್ಮ ಚಾನಲ್ ಹಾಗೂ ಶೋನಲ್ಲಿ ಯಾವುದೇ ಕೆಲಸದಲ್ಲಿ ಇಲ್ಲ ಹಾಗೂ ಯಾವುದೇ ಸಂಬಂಧ ಹೊಂದಿಲ್ಲ. ಆಕೆಯೆ ಆರೋಪ ಸುಳ್ಳು. ದಯವಿಟ್ಟು ವೀಕ್ಷಕರು ಅಂತಹ ಸುದ್ದಿಗಳನ್ನು ನಂಬಬೇಡಿ'' ಎಂದು ಅಧಿಕೃತವಾಗಿ ತಿಳಿಸಿದ್ದಾರೆ.

  English summary
  Famous tv channel has clarified about bigg boss season 13 final. this show has not fixed, result will decide with vote of audience said channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X