ಅಕ್ರಮ ಸಂಬಂಧ: ಧಾರಾವಾಹಿ ನಟನ ಭೀಕರ ಹತ್ಯೆ

ತಮಿಳು ಟಿವಿ ಧಾರಾವಾಹಿ ನಟ ಸೆಲ್ವರತಿನಮ್ ಎಂಬಾತನನ್ನು ಗುಂಪೊಂದು ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

'ತೇನ್ಮೊಳಿ ಬಿಎ' ತಮಿಳು ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದ ಸೆಲ್ವರತಿನಮ್ ಅನ್ನು ಭಾನುವಾರ ರಾತ್ರಿ ಗುಂಪೊಂದು ಭೀಕರವಾಗಿ ಕೊಲೆಗೈದಿದೆ.

ರಾತ್ರಿ ಗೆಳೆಯನನ್ನು ನೋಡಿ ಬರುತ್ತೇನೆಂದು ರೂಮ್‌ಮೇಟ್ ಬಳಿ ಹೇಳಿ ಸೆಲ್ವರತಿನಮ್ ಹೋಗಿದ್ದ. ಆದರೆ ಆತನನ್ನು ಅನ್ನಾ ನೆದುಮಾಪತೈ ಎಂಬಲ್ಲಿ ಅಡ್ಡಗಟ್ಟಿದ ಗುಂಪೊಂದು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ದೊರಕಿದ್ದು, ಮುಖ್ಯ ಆರೋಪಿಯನ್ನು ಗುರುತಿಸಲಾಗಿದೆ.

ವಿಜಯ್ ಕುಮಾರ್ ಎಂಬಾತನ ಮೇಲೆ ಪೊಲೀಸರ ಗುಮಾನಿ

ವಿಜಯ್ ಕುಮಾರ್ ಎಂಬಾತನ ಮೇಲೆ ಪೊಲೀಸರ ಗುಮಾನಿ

ಕೊಲೆಯ ಮುಖ್ಯ ಆರೋಪಿ ವಿಜಯ್‌ಕುಮಾರ್ ಎನ್ನಲಾಗಿದ್ದು, ವಿಜಯ್‌ಕುಮಾರ್ ನ ಪತ್ನಿಯೊಂದಿಗೆ ನಟ ಸೆಲ್ವರತಿನಮ್ ಗೆ ಅಕ್ರಮ ಸಂಬಂಧ ಇತ್ತು, ಆ ವಿಷಯ ವಿಜಯ್‌ಕುಮಾರ್ ಗೆ ಗೊತ್ತಾದ ಕಾರಣ, ಆತನನ್ನು ಕೊಲೆ ಮಾಡಲಾಗಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಶನಿವಾರ ಪೂರ್ತಿ ತಮ್ಮ ಗೆಳೆಯ ಮಣಿ ಹಾಗೂ ಧಾರಾವಾಹಿಯ ಸಹಾಯಕ ನಿರ್ದೇಶಕರೊಂದಿಗೆ ಇದ್ದ ಸೆಲ್ವರತಿನಮ್, ಭಾನುವಾರ ರಾತ್ರಿ ವೇಳೆಗೆ ಕರೆಯೊಂದು ಬಂದಿದೆ. ಗೆಳೆಯರನ್ನು ನೋಡಿ ಬರುತ್ತೇನೆ ಎಂದು ಮಣಿ ಬಳಿ ಹೇಳಿ ಹೋದ ಸೆಲ್ವರತಿನಮ್, ಅನ್ನಾ ನೆದುಮಾಪತೈ ಬಳಿ ಆಟೊ ಒಂದರ ಬಳಿ ಹೋದಾಗ ಆಟೋದ ಒಳಗಿದ್ದ ಕೆಲ ದುಷ್ಕರ್ಮಿಗಳು ಸೆಲ್ವರತಿನಮ್ ಮೇಲೆ ಕತ್ತಿ ಬೀಸಿದ್ದಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಅಟ್ಟಿಸಿಕೊಂಡು ಹೋಗಿ ಕೊಂದಿದ್ದಾರೆ ದುಷ್ಕರ್ಮಿಗಳು.

ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟನೆ

ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟನೆ

'ತೇನ್ಮೊಳಿ ಬಿಎ' ಧಾರಾವಾಹಿ ಮಾತ್ರವಲ್ಲದೆ ಇನ್ನೂ ಕೆಲವು ಧಾರಾವಾಹಿಗಳಲ್ಲಿ ಸೆಲ್ವರತಿನಮ್ ನಟಿಸಿದ್ದರು. ಜೊತೆಗೆ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದರು. ಸಿನಿಮಾಗಳಲ್ಲಿ ಪೋಷಕ ಪಾತ್ರಕ್ಕಾಗಿ ಪ್ರಯತ್ನಗಳಲ್ಲಿ ತೊಡಗಿದ್ದರು.

Recommended Video

ವಿರೋಧಿಸುವವರಿಗೆ ಟಾಂಗ್ ಕೊಟ್ಟ Rachita Ram | Filmibeat Kannada
ಸಿಸಿಟಿವಿ ವಶಪಡಿಸಿಕೊಂಡಿದ್ದಾರೆ

ಸಿಸಿಟಿವಿ ವಶಪಡಿಸಿಕೊಂಡಿದ್ದಾರೆ

ಸೆಲ್ವರತಿನಮ್‌ ಗೆ ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಘಟನೆಯ ದೃಶ್ಯ ಸೆರೆಯಾಗಿರುವ ಸಿಸಿಟಿವಿ ಫುಟೇಜ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ವಿಜಯ್‌ಕುಮಾರ್ ಸೇರಿ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ.

More from Filmibeat

English summary
Thenmozi BA Tamil TV serial actor Selvarathinam hacked to death in Chennai on Sunday night.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X