Jyothi Rai: 'ಜೋಗುಳ'ದ ಅಮ್ಮ 'ಪ್ರೆಟಿ ಗರ್ಲ್' ಆಗಿ ಅಭಿಮಾನಿಗಳ ಕಣ್ಣು ಕುಕ್ಕುತ್ತಿರುವ ಸುಂದರಿ
ಇತ್ತೀಚೆಗೆ ಬಣ್ಣದ ಲೋಕದಲ್ಲಿ ದಶಕಗಳ ಕಾಲದಿಂದಲೂ ಇರುವ ನಟಿಯರ ವಯಸ್ಸು ಕಡಿಮೆ ಆಗುತ್ತಾ ಬಂದಿದೆ ಅಂದ್ರೆ ತಪ್ಪಾಗಲ್ಲ. ಕಿರುತೆರೆಯಲ್ಲಿ ಸೀರೆಯುಟ್ಟು ಮಿಂಚಿದ್ದ ನಟಿಯರು ಇಂದು ಫ್ರಾಕ್ ಧರಿಸಿ ಎಲ್ಲರ ಕಣ್ಣು ಕುಕ್ಕುವಂತೆ ಕಾಣುತ್ತಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ನಟಿಸಿದ ನಟಿ ಜ್ಯೋತಿ ರೈ ಅವರು ಕಳೆದ ಕೆಲ ತಿಂಗಳಿನಿಂದ ಮಾಡ್ರನ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಜ್ಯೋತಿ ರೈ ಅವರ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೊನ್ನೆ ಮೊನ್ನೆ ಕೂಡ ಜ್ಯೋತಿ ರೈ ಅವರು ತಾಯಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈಗ ದಿಢೀರನೆ ತುಂಡು ಬಟ್ಟೆಯಲ್ಲಿ ಗ್ಲಾಮರಸ್ ಆಗಿ ತುಂಬಾ ಯಂಗ್ ಆಗಿ ಕಾಣುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಓದು ಮುಗಿಯುತ್ತಿದ್ದಂತೆ ಮದುವೆಯಾಗಿ ಬೆಂಗಳೂರಿಗೆ ಬಂದ ನಟಿ ಜ್ಯೋತಿ ರೈ. ಇಂದಿಗೂ ಇವರನ್ನು ಜನ ದೇವಕಿ ಎಂದೇ ಗುರುತಿಸುತ್ತಾರೆ.

ಮಂಗಳೂರು, ಮಡಿಕೇರಿಯಲ್ಲಿ ಓದಿ ಬೆಳೆದ ಜ್ಯೋತಿ ಅವರಿಗೆ ಈಗ 11 ವರ್ಷದ ಒಬ್ಬ ಮಗನಿದ್ದಾನೆ. ವಿನು ಬಳಂಜ ಅವರ 'ಬಂದೇ ಬರತಾವ ಕಾಲ' ಎಂಬ ಧಾರಾವಾಹಿ ಮೂಲಕ ಜ್ಯೋತಿ ರೈ ಅವರು ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ಇದಾದ ಮೇಲೆ ಬ್ಯಾಕ್ ಟು ಬ್ಯಾಕ್ ಧಾರಾವಾಹಿಗಳಲ್ಲಿ ನಟಿಸಿದರು. 'ಜೋಗುಳ', 'ಜೋ ಜೋ ಲಾಲಿ', 'ಗೆಜ್ಜೆಪೂಜೆ', 'ಶುಭಮಂಗಳ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಸಿಲ್ಲಿ ಲಲ್ಲಿ', 'ಸವಾಲಿಗೆ ಸೈ', 'ಮೂರು ಗಂಟು', ''ಶಾಂತಲಾ', 'ಕನ್ಯಾದಾನ', 'ಕಸ್ತೂರಿ ನಿವಾಸ' ಹೀಗೆ ನಟಿಸಿದ ಜ್ಯೋತಿ ಅವರು ಸಿನಿಮಾಗಳಲ್ಲೂ ಕಾಣಿಸಿಕೊಂಡರು. 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ ಜ್ಯೋತಿ ರೈ ತಮ್ಮ 18ನೇ ವಯಸ್ಸಿಗೆ ಬಣ್ಣ ಹಚ್ಚಿದವರು. ಅಲ್ಲದೇ, ತುಳು, ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯಲ್ಲೂ ನಟಿಸಿದರು.
ಕಲಾತ್ಮಕ ಸಿನಿಮಾಗಳಲ್ಲಿ ನಟನೆ
'ಸೀತಾರಾಮ ಕಲ್ಯಾಣ', 'ಗಂಧದ ಗುಡಿ', '99', 'ದಿಯಾ ವರ್ಣಪಟಲ' ಸಿನಿಮಾಗಳಲ್ಲಿ ನಟಿಸಿದ್ದು, ಈಗ ವೆಬ್ ಸಿರೀಸ್‌ಗಳತ್ತ ಮುಖ ಮಾಡಿದ್ದಾರೆ. ಜ್ಯೋತಿ ರೈ ಅವರು ನಿರೂಪಕಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಇನ್ನು 'ಕಾಲೇಜ್ ಕುಮಾರ' ಸಿನಿಮಾದ ತೆಲುಗು ಹಾಗೂ ತಮಿಳು ಅವತರಣಿಕೆಯಲ್ಲಿ ಜ್ಯೋತಿ ಅವರು ನಟಿಸಿದ್ದಾರೆ. ಜ್ಯೋತಿ ಅವರು ಓದಿದ್ದು ಕಂಪ್ಯೂಟರ್ ಸೈನ್ಸ್ ಬಿಎಸ್ಸಿ ಪದವಿ ಪಡೆದಿದ್ದಾರೆ. ಮದುವೆಯಾಗಿ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುವಾಗ ವಿನು ಬಳಂಜ ಅವರ ಕಣ್ಣಿಗೆ ಬಿದ್ದು, ನಟನೆಗೆ ಎಂಟ್ರಿ ಕೊಟ್ಟರು. ಕರ್ಮಷಿಯಲ್ ಚಿತ್ರಗಳಿಗಿಂತ ಕಲಾತ್ಮಕ ಸಿನಿಮಾಗಳ ಕಡೆಗೆ ಜ್ಯೋತಿ ಅವರ ಒಲವಿದೆ.
ಜ್ಯೋತಿ ಅವರ ವೈಯಕ್ತಿಕ ಜೀವನ
ನೆಟ್ ವರ್ಕಿಂಗ್ ಎಂಜಿನಿಯರ್ ಆಗಿರುವ ಜ್ಯೋತಿ ಅವರ ಪತಿ ಪದ್ಮನಾಭ ರೈ ಅವರು ನಟನೆಗೆ ತುಂಬಾ ಸಪೋರ್ಟ್ ಮಾಡುತ್ತಾರಂತೆ. ಜ್ಯೋತಿ ಅವರಿಗೆ ಒಬ್ಬ ಮಗನಿದ್ದು, ಮಗನ ಹೆಸರು ಊರ್ವೇಶ್. ಮಗನಿಗೆ ಆಟಿಸಂ ರೋಗ ಕೊಂಚ ಬಾಧಿಸಿದ್ದು, ಆದರೂ ಕೂಡ ಊರ್ವೇಶ್ ಲಂಡನ್ ಮಾದರಿಯಲ್ಲಿ ಇಂಗ್ಲೀಷ್ ಮಾತನಾಡುತ್ತಾನೆ. ತುಂಬಾ ಚೆನ್ನಾಗಿ ಈಜುವ ಊರ್ವೇಶ್ ಬಗ್ಗೆ ದೇವಕಿ ಅವರಿಗೆ ಹೆಮ್ಮೆ ಇದೆ. ಊರ್ವೇಶ್ ಕೇವಲ ಟಿವಿ ನೋಡಿಯೇ ಬರೋಬ್ಬರಿ ಐದು ಭಾಷೆಗಳಲ್ಲಿ ಮಾತನಾಡುವುದನ್ನು ಕಲಿತಿದ್ದಾನಂತೆ. ಇನ್ನು ಆಟಿಸಂ ಇರುವ ಕಥೆ 'ವರ್ಣಪಟಲ' ಎಂಬ ಸಿನಿಮಾದಲ್ಲಿ ಜ್ಯೋತಿ ರೈ ಅವರು ತಾಯಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.
'ಪ್ರೆಟಿ ಗರ್ಲ್' ಆದ ಜ್ಯೋತಿ ರೈ
ತೆಲುಗಿನ 'ಎ ಮಾಸ್ಟರ್ ಪೀಸ್' ಎಂಬ ಚಿತ್ರದಲ್ಲಿ ಜ್ಯೋತಿ ಅವರು ಪೋಷಕ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ವೆಬ್ ಸೀರೀಸ್‌ನಲ್ಲೂ ನಟಿಸುತ್ತಿದ್ದಾರೆ. 'ಪ್ರೆಟ್ಟಿ ಗರ್ಲ್' ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿರುವ ಜ್ಯೋತಿ ರೈ ಅವರು ಯಂಗ್ ಆಗಿ ಮಿಂಚುತ್ತಿದ್ದಾರೆ. ಇದು ತೆಲುಗು, ಹಿಂದಿ, ಇಂಗ್ಲಿಷ್ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಬಗ್ಗೆ ಅವರೇ ಸೋಶಿಯಲ್ ಮೀಡಿಯಾ ವಿಚಾರವನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಕ್ರೈಂ, ಲವ್, ರೊಮ್ಯಾನ್ಸ್, ಕಥೆಯುಳ್ಳ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿರುವ ಜ್ಯೋತಿ ರೈ ಅವರು ಮುಂದೆಯೂ ವೆಬ್ ಸಿರೀಸ್ ಹಾಗೂ ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ.


Click it and Unblock the Notifications











