For Quick Alerts
  ALLOW NOTIFICATIONS  
  For Daily Alerts

  ನಟಿ ಸಂಜನಾ ಬುರ್ಲಿ ಫಿಟ್‌ನೆಸ್ ಗುಟ್ಟೇನು ಗೊತ್ತಾ..?

  By ಪ್ರಿಯಾ ದೊರೆ
  |

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಘಾಟಿ ನಾಯಕಿ ಸ್ನೇಹಾ ನಿಮಗೆಲ್ಲರಿಗೂ ಗೊತ್ತೇ ಇದೆ. ಸ್ನೇಹಾ ನಿಜವಾದ ಹೆಸರು ಸಂಜನಾ ಬುರ್ಲಿ. ನಿಜ ಜೀವನದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಸಂಜನಾಗೆ 'ಪುಟ್ಟಕ್ಕನ ಮಕ್ಕಳು ಸೀರಿಯಲ್' ಮೊದಲ ಧಾರಾವಾಹಿಯಲ್ಲ. ಈ ಹಿಂದೆಯೂ ಒಂದು ಧಾರಾವಾಹಿಯಲ್ಲಿ ನಟಿಸಿದ್ದರು.

  ಸಂಜನಾ ಬುರ್ಲಿ ಹಲವು ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಜನಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕೇವಲ ಕನ್ನಡ ಅಷ್ಟೇ ಅಲ್ಲದೇ ತಮಿಳಿನಲ್ಲಿಯೂ ನಟಿಸಿದ್ದಾರೆ.

  Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!Comedy Khiladigalu 4: ಅರ್ಜುನ್ ಜನ್ಯಾ ಮಾತು ಕೇಳಿ ಗಳಗಳನೇ ಕಣ್ಣೀರಿಟ್ಟ ಅನುಶ್ರೀ..!

  ಇನ್ನು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಮನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು, ಕೆಎಎಸ್ ಆಗುವ ಕನಸಿನ ಹಾದಿಯಲ್ಲಿದ್ದಾಳೆ. ಊರಿನಲ್ಲೆಲ್ಲಾ ನ್ಯಾಯ ಮಾತಾಡುತ್ತಾಳೆ. ಎಲ್ಲರಿಗೂ ಇವಳನ್ನು ಕಂಡರೆ ಸ್ವಲ್ಪ ಭಯವೇ. ತನ್ನ ಜೋರು ಬಾಯಿಂದಲೇ ಪ್ರೇಕ್ಷಕರ ಮನಗೆದ್ದಿದ್ದಾಳೆ.

   ಓದಿಕೊಂಡೇ ನಟಿಸುತ್ತಿದ್ದ ಚೆಲುವೆ

  ಓದಿಕೊಂಡೇ ನಟಿಸುತ್ತಿದ್ದ ಚೆಲುವೆ

  ಸಂಜನಾ ಬುರ್ಲಿ ಬೆಂಗಳೂರಿನಲ್ಲೇ ಓದಿ ಬೆಳೆದ ಚೆಲುವೆ. ಇವರ ತಂದೆ ಅಜಿತ್ ಬುರ್ಲಿ ಮತ್ತು ತಾಯಿ ಭಾರತಿ. ಎಂಜಿನಿಯರ್ ಆಗಿರುವ ಸಂಜನಾ ಬುರ್ಲಿ ಎಂಜಿನಿಯರ್ ಓದುವಾಗ ಶೂಟಿಂಗ್ ಹಾಗೂ ಕಾಲೇಜು ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು. ರ್ಯಾಂಕ್ ಸ್ಟುಡೆಂಟ್ ಆಗಿರುವ ಸಂಜನಾಗೆ ಓದುವುದು ದೊಡ್ಡ ಕನಸಾದರೆ, ನಟನೆ ಪ್ಯಾಷನ್ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಎಂಜಿನಿಯರ್ ಓದಿ ಈಗ ನಟನೆಯನ್ನೇ ತಮ್ಮ ವೃತ್ತಿ ಬದುಕನ್ನಾಗಿ ಆರಿಸಿಕೊಂಡಿದ್ದಾರೆ.

   ಸಿನಿಮಾಗಳಲ್ಲೂ ನಟಿಸಿರುವ ಸಂಜನಾ ಬುರ್ಲಿ

  ಸಿನಿಮಾಗಳಲ್ಲೂ ನಟಿಸಿರುವ ಸಂಜನಾ ಬುರ್ಲಿ

  ಸಂಜನಾ ಅವರು 'ಪತ್ತೆದಾರಿ ಪ್ರತಿಭಾ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟರು. ಬಳಿಕ 'ಲಗ್ನಪತ್ರಿಕೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಆದರೆ ಇದು ಅರ್ಧಕ್ಕೆ ನಿಂತು ಹೋಗಿದ್ದಕ್ಕೆ ಬೇಸರಗೊಂಡಿದ್ದರು. ಇನ್ನು ಸಂಜನಾ ಅವರು ಸಿನಿಮಾಗಳಲ್ಲೂ ನಟಿಸಿದ್ದು, 'ಸ್ನೇಹರ್ಷಿ' ಸಿನಿಮಾ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್' ಎಂಬ ಚಿತ್ರದಲ್ಲೂ ನಟಿಸಿದರು. ಬಳಿಕ ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಅವರ ಜೊತೆಗೆ 'ವೀಕೆಂಡ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು 'ನಾನ್ ವೆಜ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

   ಶೂಟಿಂಗ್ ಸಮಯದಲ್ಲೂ ವ್ಯಾಯಾಮ

  ಶೂಟಿಂಗ್ ಸಮಯದಲ್ಲೂ ವ್ಯಾಯಾಮ

  ನಟಿ ಸಂಜನಾ ಬುರ್ಲಿ ಅವರು ಮೊದಲು ಬ್ಯಾಡ್ಮಿಟನ್, ಈಜು ಹಾಗೂ ಕೆಲ ಆಟಗಳನ್ನು ಆಡುತ್ತಿದ್ದರಂತೆ. ಆದರೆ, ಈಗ ನಿತ್ಯ ಒಂದು ಗಂಟೆಯ ಕಾಲ ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾರೆ. ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುವ ಸಂಜನಾ ಅವರು ಹೆಚ್ಚು ವ್ಯಾಯಾಮ ಮಾಡದೆ, ಅವಶ್ಯಕತೆಗೆಷ್ಟು ಬೇಕೋ ಅಷ್ಟೇ ಮಾಡುವುದು ಒಳ್ಳೆಯದು ಎನ್ನುತ್ತಾರೆ. ಇನ್ನು ಬಿಡುವು ಸಿಕ್ಕರೆ ಶೂಟಿಂಗ್ ಮಾಡುವ ವೇಳೆಯಲ್ಲಿ ಸಮಯ ಸಿಕ್ಕರೆ, ಅಲ್ಲೂ ಕೂಡ ಸಂಜನಾ ಅವರು ಸಣ್ಣ-ಪುಟ್ಟ ವ್ಯಾಯಾಮವನ್ನು ಮಾಡುತ್ತಾರಂತೆ. ಆಗಾಗ ಟ್ರಕ್ಕಿಂಗ್ ಹೋಗುತ್ತಾರಂತೆ.

   ಪ್ರೊಟೀನ್‌ಯುಕ್ತ ಆಹಾರ ಸೇವಿಸುವುದು ಉತ್ತಮ

  ಪ್ರೊಟೀನ್‌ಯುಕ್ತ ಆಹಾರ ಸೇವಿಸುವುದು ಉತ್ತಮ

  ಸಸ್ಯಹಾರಿಯಾಗಿರುವ ಸಂಜನಾ ಅವರು ತಮ್ಮ ಫಿಟ್‌ನೆಸ್ ಕಾಪಾಡಲು ಮಿತ ಆಹಾರವನ್ನು ಸೇವಿಸುತ್ತಾರಂತೆ. ಹೊರಗಡೆ ಹೋದಾಗ, ಟ್ರಾವೆಲಿಂಗ್‌ನಲ್ಲಿದ್ದಾಗ ಕರಿದಿರುವ ಪದಾರ್ಥಗಳನ್ನು ಅವಾಯ್ಡ್ ಮಾಡುತ್ತಾರಂತೆ. ಮೈದಾ ಹಿಟ್ಟು ಹಾಗೂ ಸಿಹಿ ಪದಾರ್ಥಗಳನ್ನು ಆದಷ್ಟು ದೂರವಿಡುವ ಸಂಜನಾ ಅವರು ನಿತ್ಯ 7 ಗಂಟೆಗಳ ಕಾಲ ನಿದ್ದೆಯನ್ನು ಮಾಡುತ್ತಾರಂತೆ. ಇನ್ನು ಹೆಚ್ಚು ಪ್ರೊಟೀನ್ ಇರುವ ಆಹಾರವನ್ನು ಸೇವಿಸುವುದಾಗಿ ಸಂಜನಾ ಹೇಳಿದ್ದಾರೆ.

  ಮನೆಯವರನ್ನೆಲ್ಲಾ ಇಂಪ್ರೆಸ್ ಮಾಡಿದ ಸತ್ಯಗೆ ಕಾರ್ತಿಕ್ ತಂದ ಗಿಫ್ಟ್ ಏನು..?ಮನೆಯವರನ್ನೆಲ್ಲಾ ಇಂಪ್ರೆಸ್ ಮಾಡಿದ ಸತ್ಯಗೆ ಕಾರ್ತಿಕ್ ತಂದ ಗಿಫ್ಟ್ ಏನು..?

  English summary
  TV Serial Actress Sanjana Burli Biography and Career. sanjana burli acted in many films. Puttakkana makkalu is not her first serial. sanjana burli fitness secret.
  Monday, October 10, 2022, 19:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X