For Quick Alerts
  ALLOW NOTIFICATIONS  
  For Daily Alerts

  ತನ್ನನ್ನು ತಾನೇ ಮದುವೆಯಾದ ಕಿರುತೆರೆ ನಟಿ: ಭಾರತದಲ್ಲಿದು ಎರಡನೇ ಕೇಸ್!

  |

  ಭಾರತದಲ್ಲಿ ಮದುವೆಗೆ ಸಾಂಸ್ಕೃತಿಕ ಹಿನ್ನೆಲೆಯಿದೆ. ಭಾರತದ ಮೂಲೆ ಮೂಲೆಯಲ್ಲಿ ಒಂದೊಂದು ಸಮೂಹ ಒಂದೊಂದು ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮ ನಡೆಸುತ್ತೆ. ಸಂಪ್ರದಾಯ, ನಂಬಿಕೆ ಏನೇ ಇದ್ದರೂ ಹೆಣ್ಣು ಗಂಡನ್ನೇ ಮದುವೆಯಾಗುತ್ತಿತ್ತು. ಇದೀಗ ಕಾಲ ಬದಲಾದಂತೆ. ಒಂದೇ ಲಿಂಗದವರು ಕಾನೂನಿನ ಅನುಮತಿ ಪಡೆದು ವಿವಾಹವಾಗಿದ್ದಾರೆ.

  ಗಂಡು ಗಂಡನ್ನೇ ಮದುವೆ ಆಗೋದು.. ಹೆಣ್ಣು ಹೆಣ್ಣನ್ನೇ ಮದುವೆ ಆಗುವುದನ್ನು ಸಮಾಜ ನಿಧಾನವಾಗಿ ಸ್ವೀಕರಿಸುವುದಕ್ಕೆ ಮುಂದಾಗಿದೆ. ಇದರ ಹಿಂದೆನೇ ಕೆಲವರು ಸೊಲೊಗಾಮಿ ಅಥವಾ ಸೆಲ್ಫ್ ಮ್ಯಾರೇಜ್‌ಗೆ ಮುಂದಾಗುತ್ತಿದ್ದಾರೆ. ಸದ್ಯ ಭಾರತದಲ್ಲೂ ಇದು ಹೆಚ್ಚಾಗುತ್ತಿದೆ.

  'ಸನ್ನಿ ಬರ್ತ್‌ಡೇ ದಿನ ಪರೀಕ್ಷೆ ಬರೆಯದ ವಿದ್ಯಾರ್ಥಿ': ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರು, ಸನ್ನಿ ಶಾಕ್!'ಸನ್ನಿ ಬರ್ತ್‌ಡೇ ದಿನ ಪರೀಕ್ಷೆ ಬರೆಯದ ವಿದ್ಯಾರ್ಥಿ': ಉತ್ತರ ಪತ್ರಿಕೆ ನೋಡಿ ಮೌಲ್ಯಮಾಪಕರು, ಸನ್ನಿ ಶಾಕ್!

  ಇತ್ತೀಚೆಗೆ ಗುಜರಾತಿನ ಕ್ಷಮಾ ಬಿಂದು ಅನ್ನೋರು ತನ್ನನ್ನು ತಾನೇ ವಿವಾಹವಾಗಿದ್ದರು. ಈಗ ಹಿಂದಿ ಕಿರುತೆರೆಯ ನಟಿಯೊಬ್ಬರು ತನ್ನನ್ನು ತಾನೇ ಮದುವೆಯಾಗಿದ್ದಾರೆ. ಸದ್ಯ ಇಡೀ ದೇಶದಲ್ಲಿ ಈ ವಿಚಿತ್ರ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಯಾಕಂದ್ರೆ, ಭಾರತದಲ್ಲಿ ಹೀಗೆ ತನ್ನನ್ನು ತಾನೇ ಮದುವೆಯಾಗುತ್ತಿರುವುದು ಎರಡನೇ ಕೇಸ್.

  ಕಿರುತೆರೆ ನಟಿಯ ಸೊಲೊಗಾಮಿ ಮದುವೆ

  ಕಿರುತೆರೆ ನಟಿಯ ಸೊಲೊಗಾಮಿ ಮದುವೆ

  ಹಿಂದಿ ಕಿರುತೆರೆ ನಟಿಯೊಬ್ಬರು ತನ್ನನ್ನು ತಾನೇ ಮದುವೆಯಾಗಿ ಬಾಲಿವುಡ್‌ಗೆ ಶಾಕ್ ಕೊಟ್ಟಿದ್ದಾರೆ. ಕಾನಿಷ್ಕಾ ಸೋನಿ ಅನ್ನೊ ನಟಿಯೊಬ್ಬರು ಇನ್‌ಸ್ಟಗ್ರಾಂನಲ್ಲಿ ತನ್ನನ್ನು ತಾನು ಮದುವೆ ಆಗಿರೋ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಮದುವೆಯಾಗುವುದಕ್ಕೆ ನನಗೆ ಗಂಡಿನ ಅವಶ್ಯಕತೆಯಿಲ್ಲ ಎಂದು ನಟಿ ಹೇಳಿಕೆ ಕೂಡ ಕೊಟ್ಟಿದ್ದಾರೆ. ಈ ಮೂಲಕ ಕಾನಿಷ್ಕಾ ಸೋನಿ 'ಸೊಲಗಾಮಿ' ವಿವಾಹಕ್ಕೆ ಮುಂದಾದ ಎರಡನೇ ಮಹಿಳೆ ಎನಿಸಿಕೊಂಡಿದ್ದಾರೆ.

  ಕಾನಿಷ್ಕಾ ಸೋನಿ ಹೇಳಿದ್ಧೇನು?

  ಕಾನಿಷ್ಕಾ ಸೋನಿ ಹೇಳಿದ್ಧೇನು?

  ಕಾನಿಷ್ಕಾ ಸೋನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನನ್ನು ತಾನೇ ವಿವಾಹವಾದ ಸಂಗತಿಯನ್ನು ಶೇರ್ ಮಾಡಿಕೊಂಡಿದ್ದಾರೆ. " ನನ್ನನ್ನು ನಾನೇ ಮದುವೆಯಾಗಿದ್ದೇನೆ. ನಾನು ನನ್ನ ಎಲ್ಲಾ ಕನಸುಗಳನ್ನು ಪೂರೈಸಿಕೊಂಡಿದ್ದೇನೆ. ಈಗ ನಾನು ಕೇವಲ ನನ್ನನ್ನು ಮಾತ್ರ ಪ್ರೀತಿಸುತ್ತೇನೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕಂಡುಕೊಂಡ ನನಗೆ ಮುಂದೆ ಪುರುಷನ ಅಗತ್ಯವಿರುವುದಿಲ್ಲ. ನಾನು ಒಬ್ಬಂಟಿಯಾಗಿಯೇ ಆರಾಮಾಗಿದ್ದೇನೆ. ಶಿವ ಮತ್ತು ಶಕ್ತಿ ಎರಡೂ ನನ್ನೊಳಗೆ ಇದೆ." ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಕ್ಷಮಾ ಬಿಂದು ಮೊದಲ ಮಹಿಳೆ

  ಕ್ಷಮಾ ಬಿಂದು ಮೊದಲ ಮಹಿಳೆ

  ಕೆಲವು ತಿಂಗಳುಗಳ ಹಿಂದಷ್ಟೇ ಗುಜರಾತಿನ 24 ವರ್ಷದ ಮಹಿಳೆಯೊಬ್ಬರು ತನ್ನನ್ನು ತಾನೇ ಮದುವೆಯಾಗುತ್ತೇನೆ ಎಂದು ಹೇಳಿಕೆ ನೀಡಿದ್ದರು. ಗುಜರಾತಿನ ವಡೋದರಾ 24 ವರ್ಷದ ಮಹಿಳೆ ಕ್ಷಮಾ ಬಿಂದು ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಕ್ಷಮಾ ಬಿಂದು ಕೊಟ್ಟ ಹೇಳಿಕೆ ಬಳಿಕ ದೇಶದಲ್ಲಿ ವಾದ-ವಿವಾದಗಳಾಗಿತ್ತು. ಹೀಗಾಗಿ ಅಂದುಕೊಂಡಿದ್ದಕ್ಕಿಂತ ಮೂರು ದಿನ ಮುನ್ನವೇ ಗುಜರಾತಿನ ಮನೆಯಲ್ಲಿ ಸೆಲ್ಫ್ ಮ್ಯಾರೇಜ್ ಆಗಿದ್ದರು.

  ಕಾನಿಷ್ಕಾ ಸೋನಿ ಹಿನ್ನೆಲೆಯೇನು?

  ಕಾನಿಷ್ಕಾ ಸೋನಿ ಹಿನ್ನೆಲೆಯೇನು?

  ಭಾರತದಲ್ಲಿ ಸೆಲ್ಫ್ ಮ್ಯಾರೇಜ್ ಆಗಿರೋ ಎರಡನೇ ಮಹಿಳೆ ಕೂಡ ಗುಜರಾತಿನವರೇ. ಮುಂಬೈನಲ್ಲಿ ನಲೆ ಕಂಡುಕೊಂಡಿರೋ ಕಾನಿಷ್ಕಾ ಸೋನಿ ಧಾರಾವಾಹಿ ಹಾಗೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಪವಿತ್ರಾ ರಿಶ್ತಾ' ಅನ್ನೋ ಹಿಂದಿಯ ಮೆಗಾ ಧಾರಾವಾಹಿಯಲ್ಲಿ ನಟಿಸಿದ್ದರು. 2007 ರಿಂದ 2020ರವರೆಗೂ ಕಾನಿಷ್ಕಾ ಸೋನಿ ಕಿರುತೆರೆಯಲ್ಲಿ ಆಕ್ಟಿವ್ ಆಗಿದ್ದಾರೆ. 34 ವರ್ಷದ ಕಾನಿಷ್ಕಾ ಸೋನಿಯ ಈ ನಿರ್ಧಾರ ಬಾಲಿವುಡ್‌ ಸೇರಿದಂತೆ ಭಾರತದಾದ್ಯಂತ ಚರ್ಚೆಯ ವಿಷಯವಾಗಿದೆ.

  English summary
  TV Show Pavitra Rishta Actor Kanishka Soni Got Married To Herself, Know More.
  Sunday, August 21, 2022, 12:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X