ಕಿರುತೆರೆಯ ಕ್ಯೂಟ್ ಕಪಲ್ ಚಂದನ್- ಕವಿತಾ ಗೌಡ ಜಾಲಿ ಬೈಕ್ ರೈಡ್; ಹೋಗಿದ್ದೆಲಿಗೆ?
ಕಿರುತೆರೆಯ ಕ್ಯೂಟ್ ಕಪಲ್ ಎಂದೇ ಕರೆಯಲ್ಪಡುವ ಜೋಡಿಗಳಲ್ಲಿ ಕವಿತಾ ಹಾಗೂ ಚಂದನ್ ಕುಮಾರ್ ಜೋಡಿಗೆ ಮೊದಲ ಸ್ಥಾನ. ಇವರು ಹಲವು ವರುಷಗಳಿಂದ ಪ್ರೀತಿ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದವರು. ಪ್ರೀತಿ ಮಾಡಿದ ಜೋಡಿಗಳು ಇಷ್ಟೊಂದು ಸುಂದರವಾಗಿ ಬಾಳಿ ಬದುಕಬಹುದು ಎಂದು ಇವರಿಬ್ಬರೂ ತೋರಿಸಿಕೊಟ್ಟಿದ್ದಾರೆ. ಇದೀಗ ಇವರು ಜಾಲಿ ರೈಡ್ ಮೂಡ್‌ನಲ್ಲಿದ್ದಾರೆ.
ಹೌದು.. ಕಿರುತೆರೆ, ಸಿನಿಮಾ ಸ್ಟಾರ್ ಗಳು ಕಾರಿನಲ್ಲಿ ಟ್ರಿಪ್ ಹೋಗುವುದನ್ನು ಕೇಳಿದ್ದೇವೆ. ಆದರೆ ಕೇರಳದವರೆಗೆ ಬೈಕ್ ಡ್ರೈವ್ ಮಾಡಿಕೊಂಡು ಹೋದ ಇವರಿಬ್ಬರನ್ನು ನೋಡಿದ ಅಭಿಮಾನಿಗಳು ಬಹಳ ಖುಷಿಪಟ್ಟಿದ್ದಾರೆ. ಇನ್ನೂ ಇವರಿಬ್ಬರೂ ಈ ಟ್ರಿಪ್ ಅನ್ನು ಬಹಳ ಎಂಜಾಯ್ ಮಾಡುತ್ತಾ ಇದ್ದಾರೆ. ಹಲವು ದಿನಗಳಿಂದ ಇವರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಇದೀಗ ಸಣ್ಣ ಬ್ರೇಕ್ ಇರಲಿ ಎಂಬ ನಿಟ್ಟಿನಲ್ಲಿ ಇವರಿಬ್ಬರೂ ಟ್ರಿಪ್ ಹೊರಟಿದ್ದಾರೆ.

ಬೈಕ್ ರೈಡ್ ಮಾಡಿಕೊಂಡು ಅದು ಕೂಡ ಚಂದನ್ ಪತ್ನಿ ಕವಿತಾ ಹಿಂದೆ ಕುಳಿತುಕೊಂಡು ಜಾಲಿ ರೈಡ್ ಮಾಡಿದ ವಿಡಿಯೋದ ಸಣ್ಣ ತುಣಕನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕವಿತಾ ಸೆಲ್ಫಿಗೆ ಪೋಸ್ ಕೊಟ್ಟುಕೊಂಡು ಜಾಲಿಯಾಗಿ ಬೈಕ್ ರೈಡ್ ಮಾಡಿ ಖುಷಿ ಪಟ್ಟಿದ್ದಾರೆ. ಅವರಿಬ್ಬರೂ ಕೇರಳದ 'ಕಡಮಕ್ಕುಡಿ ಐಲ್ಯಾಂಡ್ಸ್'ಗೆ ಹೋಗಿದ್ದಾರಂತೆ. ಹೌದು ಇವರಿಬ್ಬರೂ ಕೇರಳಕ್ಕೆ ಬೈಕ್ ರೈಡ್ ಮಾಡಿಕೊಂಡು ತೆರಳಿದ್ದಾರೆ.
ಬೈಕ್ ರೈಡ್ ಎಂಜಾಯ್ ಮಾಡುತ್ತಿರುವ ದಂಪತಿ
ಇವರಿಬ್ಬರನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.ಇನ್ನೂ ಕೆಲವರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಕವಿತಾ ಗೌಡ ಮೊಟ್ಟ ಮೊದಲ ಬಾರಿಗೆ ಕಿರುತೆರೆಗೆ ಆಗಮಿಸಿದ್ದು ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ. ಇವರ ನಟನೆಗೆ ಅಭಿಮಾನಿಗಳು ಇವರನ್ನು ಮೆಚ್ಚಿಕೊಂಡು ಪ್ರೋತ್ಸಾಹಿಸಿದ್ದಾರೆ. ಇದೀಗ ಕವಿತಾ ಪುಣ್ಯವತಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದಾರೆ .
ಸಿನಿಮಾಗಳಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡ ನಟಿ
ಹಾಗೆಯೇ ಕವಿತಾ ಗೌಡ ಸಿನಿಮಾಗಳಲ್ಲೂ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. 'ಗೋವಿಂದ ಗೋವಿಂದ', ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹಾಗೂ ದ್ವಿ ಮುಖ' ಚಿತ್ರದಲ್ಲಿ ನಟಿಸಿದ್ದಾರೆ. ಇನ್ನೂ ಚಂದನ್ ಗೌಡ ಕೂಡ ಕಿರುತೆರೆಗೆ ಮೊದಲು ಎಂಟ್ರಿ ನೀಡಿ ಆ ಬಳಿಕ ಹಿರಿತೆರೆಯಲ್ಲಿ ಮಿಂಚಿದ್ದಾರೆ. ಚಂದನ್ ನಟನೆ ಮತ್ತು ಫಿಟ್‌ನೆಸ್‌ಗೆ ಬಹಳ ಜನರು ಫಿದಾ ಆಗಿದ್ದರು . ಲಕ್ಷ್ಮೀ ಬಾರಮ್ಮ ಸೀರಿಯಲ್ ಇವರಿಗೆ ಬಹಳ ಹೆಸರನ್ನು ತಂದುಕೊಟ್ಟಿತು.

ಸಿನಿಮಾದಲ್ಲಿ ಬ್ಯುಸಿ ಆಗಿದ್ದ ಚಂದನ್
ರಾಧ ಕಲ್ಯಾಣ ಧಾರವಾಹಿ ಚಂದನ್ ಅವರಿಗೆ ಒಂದು ಟರ್ನಿಂಗ್ ಪಾಯಿಂಟ್ ಎಂದರೆ ತಪ್ಪಾಗದು. ಅಷ್ಟರವರೆಗೆ ಇವರು ಅದ್ಬುತ ನಟನೆಯನ್ನು ಮಾಡಿ ಮಿಂಚಿದ್ದರು. ಕಟ್ಟೆ, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023, ಪರಿಣಯ, ಪ್ರೇಮ ಬರಹ ಮುಂತಾದ ಕನ್ನಡ ಚಿತ್ರಗಳಲ್ಲಿ ಸಹ ನಟ ಚಂದನ್ ಅಭಿನಯಿಸಿದ್ದಾರೆ.


Click it and Unblock the Notifications











