Nisha Lifestyle: ಮಾತಿನಲ್ಲೇ ಮೋಡಿ ಮಾಡೋ ಸುಂದರಿ ನಿಶಾಳ ರಿಯಲ್ ಲೈಫ್ ಹೇಗಿದೆ?

By ಪೂರ್ವಾ

ಕನ್ನಡ ಕಿರುತೆರೆಯ ಜನಪ್ರಿಯ 'ಗಟ್ಟಿಮೇಳ' ಧಾರಾವಾಹಿಯ ನಾಯಕಿ ಅಮೂಲ್ಯ ಅವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ ಅವರು ನಟಿ ಮಾತ್ರ ಅಲ್ಲ ಸಿಂಗರ್ ಜೊತೆಗೆ ಅತ್ಯುತ್ತಮ ಡ್ಯಾನ್ಸರ್ ಕೂಡ ಹೌದು.

ನಿಶಾ ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಮಕ್ಕಳ ಖಾಸಗಿ ಚಾನೆಲ್ ಒಂದರಲ್ಲಿ ಆಂಕರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದರು. ನಿಶಾ ಅವರೇ ಖುದ್ದು ಪ್ರೋಗ್ರಾಂ ಅನ್ನು ಪ್ಲಾನ್ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸುತ್ತಿದ್ದರು. ''ಓದಿಗೆ ತೊಂದರೆ ಮಾಡಿಕೊಂಡಿಲ್ಲ ನಾನು ಎಲ್ಲವನ್ನೂ ಸಮಾನಾಗಿ ಬ್ಯಾಲೆನ್ಸ್ ಮಾಡಿದ್ದೇನೆ'' ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯಾ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ಅಮೂಲ್ಯಾ ಧಾರಾವಾಹಿಯಲ್ಲಿ ವೇದಾಂತ್ ಪಾತ್ರಕ್ಕೆ ಬಯ್ಯುವ ಸ್ಟೈಲ್‌ನ್ನು ಹಲವರು ಇಷ್ಟಪಟ್ಟಿದ್ದಾರೆ. ನಿಶಾ ರವಿಕೃಷ್ಣನ್ ಧಾರಾವಾಹಿಯಲ್ಲಿ ಪಕ್ಕಾ ಸಾಂಪ್ರದಾಯಿಕ ಹುಡುಗಿಯಾಗಿ ಲಂಗ-ದಾವಣಿಯಲ್ಲಿ, ಸೀರೆಯಲ್ಲಿ ಮಿಂಚುತ್ತಿದ್ದಾರೆ.

Tv Story: Gattimela Serial Heroin Nisha Life Style

ಈಗಾಗಲೇ 'ಗಟ್ಟಿ ಮೇಳ' ಸೀರಿಯಲ್‌ನ ಪಾತ್ರ ನಿಶಾಗೆ ಸಾಕಷ್ಟು ಹೆಸರು ಮಾಡಲು ಸಹಾಯ ಮಾಡಿದೆ. 'ಸರ್ವಮಂಗಳ ಮಾಂಗಲ್ಯೆ' ಎಂಬ ಧಾರಾವಾಹಿಯಲ್ಲಿ ನಿಶಾ ನಟಿಸಿದ್ದರು. ಆದರೆ ನಿಶಾಗೆ ಗುರುತು ನೀಡಿದ್ದು ಹೆಸರು ತಂದುಕೊಟ್ಟಿದ್ದು ಮಾತ್ರ 'ಗಟ್ಟಿ ಮೇಳ' ಧಾರಾವಾಹಿ. ಸದ್ಯಕ್ಕೆ ಕಿರುತೆರೆಯೇ ನನ್ನ ಮನೆ, ಮುಂದೊಂದು ದಿನ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯಿದೆ ಎಂದು ನಿಶಾ ಹೇಳಿದ್ದಾರೆ.

ನಿಶಾವರಿಗೆ ಚಾಕೋಲೇಟ್ ಎಂದರೆ ಬಹಳ ಇಷ್ಟ. ಶ್ವಾನ ಪ್ರಿಯರಾದ ನಿಶಾ ಮನೆಯಲ್ಲಿ ನಾಯಿಯನ್ನು ಸಾಕಿ ಅದಕ್ಕೆ ಬಾನಿ ಎಂಬ ಹೆಸರನ್ನು ಇಟ್ಟಿದ್ದಾರೆ. ಗಟ್ಟಿ ಮೇಳ ಧಾರಾವಾಹಿಯಲ್ಲಿ ಅಮೂಲ್ಯ ಎಂಬ ರೌಡಿ ಬೇಬಿ ಪಾತ್ರಕ್ಕೂ ಅವರ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸವಿದೆ. ನಿಜ ಜೀವನದಲ್ಲಿ ಬಹಳ ಸೌಮ್ಯ ಸ್ವಭಾವದ ಹುಡುಗಿ ನಿಶಾ.

More from Filmibeat

English summary
Gattimela serial Nisha real life. Hear is more details about her.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X