Ninaad Harithsa: 'ನಾಗಿಣಿ 2' ಧಾರಾವಾಹಿಯ ನಿನಾದ್ ಬಗ್ಗೆ ನಿಮಗೆಷ್ಟು ಗೊತ್ತು?
ಬಾಲ ಕಲಾವಿದನಾಗಿ ಬಣ್ಣದ ಜರ್ನಿ ಆರಂಭಿಸಿದ ನಟ ನಿನಾದ್ ಹರಿತ್ಸ ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಗಿಣಿ 2 ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ವೀಕ್ಷಕರ ಹೃದಯಕ್ಕೆ ನಿನಾದ್ ತುಂಬಾನೇ ಹತ್ತಿರವಾಗಿದ್ದಾರೆ. ಧಾರಾವಾಹಿಯಲ್ಲಿ ತ್ರಿಶೂಲ್ ಪಾತ್ರಧಾರಿಯಾಗಿ ನಿನಾದ್ ಹರಿಸ್ತಾ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಇವರ ತಾಯಿಯ ಹೆಸರು ಮಾಲಿನಿ ಪಿ ರಾವ್ ತಂದೆಯ ಹೆಸರು ಪ್ರಸನ್ನ ರಾವ್.
Recommended Video

ನಿನಾದ್ ರಂಗಭೂಮಿಯಲ್ಲಿ ಉತ್ತಮ ಅಭಿನಯ ಮಾಡುತ್ತಿದ್ದರು. ತ್ರೀ ರೋಸಸ್ ಎನ್ನುವ ನಾಟಕದಲ್ಲಿ ಅಭಿನಯಿಸಿ ಖ್ಯಾತಿ ಪಡೆದಿದ್ದಾರೆ. ಈ ನಾಟಕಕ್ಕೆ ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ನಿನಾದ್ ತಾಯಿ ಕೂಡ ನಟಿಯಾಗಿದ್ದರು, ಇವರು ಹಲವಾರು ಧಾರವಾಹಿಗಳಲ್ಲಿ ಅಭಿನಯಿಸಿದ್ದರು.
ನಿನಾದ್ ರಂಗಭೂಮಿಯಲ್ಲಿ ತಂದೆ, ತಾಯಿ ಮೊದಲಾದವರ ಅಭಿನಯ ನೋಡಿಕೊಂಡೇ ಬೆಳೆದವರು. ಏಳನೇ ವರ್ಷದವರಿದ್ದಾಗಲೇ ಟೈಮ್ ಪಾಸ್ ತೆನಾಲಿ' ಎನ್ನುವ ಧಾರಾವಾಹಿಯಲ್ಲಿ ಬಾಲನಟನಾಗಿ ರಂಗ ಪ್ರವೇಶಿಸಿದರು. ಬಳಿಕ ಕುಬೇರಪ್ಪ ಆಂಡ್ ಸನ್ಸ್' ಎನ್ನುವ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಹಾಗಾಗಿ ನಟನೆಯ ಕುರಿತಾದ ರುಚಿ ಇವರಿಗೆ ಸಿಕ್ಕಿತ್ತು. ಶಾಲಾ, ಕಾಲೇಜ್‌ಗಳಲ್ಲಿ ಕೂಡ ನಾಟಕಗಳಲ್ಲಿ ಪಾಲ್ಗೊಳ್ಳುತ್ತಿದ್ದರು.
ಒಬ್ಬ ಯುವನಟನಾಗಿ ಕಿರುತೆರೆ ಅಥವಾ ಸಿನಿಮಾ ರಂಗ ಪ್ರವೇಶಿಸುವ ಮುನ್ನ ಅಭಿನಯ ಪಾಠ ಅರಿತುಕೊಂಡೇ ಇರಬೇಕು ಎನ್ನುವುದು ನಿನಾದ್ ಆಶಯವಾಗಿತ್ತು. ಹಾಗಿಯೇ ನಟನೆಯ ಪಟ್ಟುಗಳನ್ನು ಕಲಿಯಲು ರಂಗಭೂಮಿಗೆ ಸೇರಿಕೊಂಡರು. ಅಲ್ಲಿ ನಟನೆಗಿಂತ ಬ್ಯಾಕ್‌ಸ್ಟೇಜ್ ಕೆಲಸಗಳು, ಮೇಕಪ್ ವಿಭಾಗಗಳಲ್ಲಿ ಕೆಲಸ ಮಾಡಿದ್ದೇ ಹೆಚ್ಚಂತೆ. ತ್ರಿ ರೋಸಸ್' ನಾಟಕ ನಟನೆಯಲ್ಲಿ ಇನ್ನೂ ಕೂಡ ಉತ್ತಂಗಕ್ಕೆ ಏರಬಹುದು ಎನ್ನುವ ಧೈರ್ಯ ನೀಡಿತ್ತಂತೆ.

ಭಾರತದಾದ್ಯಂತ ಪರ್ಯಟನೆ ಮಾಡಿದ ನೀನಾದ್
ನಿರ್ದೇಶಕ ಅಕ್ಷಯ್ ಕಾರ್ತಿಕ್ ಅವರು ನೀನಾದ್‌ಗೆ ಮೆಂಟರ್ ಎಂದೇ ಹೇಳಬಹುದು. 'ಗುಲೇಬ ಕಾವಲಿ' ನಾಟಕದಲ್ಲಿ ಎಂ ಎಸ್ ಸತ್ಯು ಅವರೊಂದಿಗೆ ಕೆಲಸ ಮಾಡುವ ಅವಕಾಶ ನಿನಾದ್‌ಗೆ ಲಭಿಸಿತು. ಮುಂದೆ ಸ್ವಪ್ನ ಸಿದ್ಧಿ' ಸೇರಿದಂತೆ ಒಂದಷ್ಟು ನಾಟಕಗಳಲ್ಲಿ ಮಾಡಿದರು. ಹೆಚ್ಚು ನಾಟಕಗಳಲ್ಲಿ ಮಾಡದಿದ್ದರೂ ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು, ಅಸ್ಸಾಮ್, ಷಿಲ್ಲಾಂಗ್ ಹೀಗೆ 'ಥಗ್ಸ್ ಥಿಯೇಟರ್ಸ್' ಜೊತೆಗೆ ಭಾರತದಾದ್ಯಂತ ಕೆಲಸ ಮಾಡುವ ಅವಕಾಶ ಲಭಿಸಿತ್ತು.

ನೂರಾರು ಆಡಿಶನ್‌ಗಳಲ್ಲಿ ಪಾಲ್ಗೊಂಡಿದ್ದರು ನಿನಾದ್
ರಂಗಭೂಮಿಯಲ್ಲಿರುವಾಗಲೇ ಹಲವಾರು ಆಡಿಷನ್‌ಗಳಲ್ಲಿ ಪಾಲ್ಗೊಳ್ಳುತ್ತಿದ್ದರು ನೀನಾದ್. ಆಡಿಷನ್ ಪಡೆದವರು ಧಾರಾವಾಹಿಗಳಲ್ಲಿ ಆಯ್ಕೆ ಮಾಡಿರುವುದಾಗಿ ಹೇಳುತ್ತಿದ್ದರು. ನಂಬಿ ಕುಳಿತಿರುತ್ತಿದ್ದ ಅವರಿಗೆ ಟಿವಿಯಲ್ಲಿ ಆ ಧಾರಾವಾಹಿಗಳ ಪ್ರಸಾರ ಶುರುವಾದಾಗಲೇ ಓಹ್ ಇವರು ನನ್ನನ್ನು ಸೆಲೆಕ್ಟ್ ಮಾಡಿಲ್ಲ' ಎನ್ನುವ ಅರಿವಾಗುತ್ತಿತ್ತಂತೆ. ಆದರೂ ಎರಡು ಒಳ್ಳೆಯ ಧಾರಾವಾಹಿಗಳ ಭಾಗವಾಗಲು ಸಾಧ್ಯವಾಗಿದ್ದು ಅದೃಷ್ಟವೆಂದೇ ಹೇಳುತ್ತಾರೆ ನಿನಾದ್.

ನಿನಾದ್‌ರ ಧಾರಾವಾಹಿ ಜರ್ನಿ
ಐದೂವರೆ ವರ್ಷಗಳ ಹಿಂದೆ ಅರಮನೆ' ಎನ್ನುವ ಧಾರಾವಾಹಿಯೊಂದಿಗೆ ಕೆಲಸ ಶುರು ಮಾಡಿದರು. ಜೈಜಗದೀಶ್ ಅವರ ಪುತ್ರನ ಪಾತ್ರ ದೊರಕಿತು. ಅದರಲ್ಲಿ ಎರಡೂವರೆ ವರ್ಷಗಳ ಕಾಲ ನಟಿಸಿದ ಬಳಿಕ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ' ಧಾರಾವಾಹಿಯಲ್ಲಿ ಸಹ ನಾಯಕನಾಗಿ ಸುಮಾರು ಎರಡು ವರ್ಷ ನಟಿಸಿದರು. ಇದೀಗ ಕಳೆದ ಒಂದೂವರೆ ವರ್ಷಗಳಿಂದ ನಾಗಿಣಿ 2' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

'ನಾಗಿಣಿ 2' ಧಾರವಾಹಿಯ ಮೂಲಕ ತ್ರಿಶೂಲ್ ಕನಸು ನನಸು
ನಾಯಕನಾಗಿ ನಿನಾದ್‌ಗೆ ಇದು ಮೊದಲ ಧಾರಾವಾಹಿ. ಎರಡು ಧಾರಾವಾಹಿಗಳ ಬಳಿಕ, ಇನ್ನು ನಟಿಸಿದರೆ ನಾಯಕ ಪಾತ್ರದಲ್ಲೇ ಎಂದುಕೊಂಡು ಸಣ್ಣ ಪಾತ್ರಗಳನ್ನು ಒಪ್ಪಿಕೊಳ್ಳದೆ ಸುಮ್ಮನಾಗಿದ್ದರಂತೆ. ಆರಂಭದಲ್ಲಿ ಇಬ್ಬರು ನಾಯಕರು ಎಂದಿದ್ದರು. ಇನ್ನು ನಾಯಕನ ಪಾತ್ರವನ್ನಷ್ಟೇ ಮಾಡುತ್ತೇನೆ ಎಂದು ನಿರ್ಧರಿಸಿದ್ದ ನಿನಾದ್‌ಗೆ ಅದೇ ಸಂದರ್ಭದಲ್ಲಿ ಸಿಕ್ಕಂಥ ಅವಕಾಶ ಇದಾಗಿದೆ. ಧಾರಾವಾಹಿ ವೀಕ್ಷಕರಿಗೆ ನನ್ನ ಪಾತ್ರದ ಪ್ರಾಮುಖ್ಯತೆ ತಿಳಿದಿದೆ. ಇದೊಂದು ಫ್ಯಾಂಟಸಿ ಕತೆ ಎಂದಾಗಲೇ ನಿನಾದ್ ಗೆ ಅದು ಚಾಲೆಂಜ್ ಅನಿಸಿತ್ತಂತೆ. ನಾಗಿಣಿ ಧಾರವಾಯಿಯ ಮೂಲಕ ತ್ರಿಶೂಲ್ ಕನಸು ನನಸಾಗಿದೆಯಂತೆ. ನಿನಾದ್ ವೃತ್ತಿ ಬದುಕಿಗೆ ಬ್ರೇಕ್ ತಂದು ಕೊಟ್ಟ ಧಾರಾವಾಹಿ ಇದು. ಹೆಚ್ಚು ಜನ ಗುರುತಿಸಿ ಪ್ರಶಂಸಿಸಿದ್ದಾರೆ. ಇನ್ನು ಏನಿದ್ದರೂ ಮತ್ತಷ್ಟು ಹೆಚ್ಚು ತೃಪ್ತಿ ನೀಡುವಂಥ ಪಾತ್ರಗಳಲ್ಲಿ ನಟಿಸುವ ಆಸೆಯಿದೆಯಂತೆ.


Click it and Unblock the Notifications











