ಟಿವಿ9 ಕಾರ್ಯಾಚರಣೆ; ವೇಶ್ಯಾ ದಂಧೆಯಲ್ಲಿ ನಟಿ

By ಅನಂತರಾಮು, ಹೈದರಾಬಾದ್

Actress Kinnera
ಟಿವಿ9 ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಕಿರುತೆರೆ ನಟಿಯೊಬ್ಬರ ರಾತ್ರಿ ಕಾರ್ಯಕಲಾಪಗಳು ಬಟಾ ಬಯಲಾಗಿವೆ. ಈಕೆ ಕಿರುತೆರೆಯಲ್ಲಿ ನಟಿಸುತ್ತಾ ವೇಶ್ಯಾ ದಂಧೆ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಆಂಧ್ರಪ್ರದೇಶದಲ್ಲಿ ಟಿವಿ9 ತೆಲುಗು ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆ ವಿವರಗಳು ಹೀಗಿವೆ.

ಕಿರುತೆರೆ ಧಾರಾವಾಹಿ ಹಾಗೂ ಕೆಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದ ಈ ನಟಿಯ ಹೆಸರು ಕಿನ್ನೆರ. ಸಿನಿಮಾದಲ್ಲಿ ಅವಕಾಶ ಕೊಡಿಸುವಂತೆ ಈಕೆಯ ಬಳಿಗೆ ಹಲವಾರು ಹದಿಹರೆಯದ ಹುಡುಗಿಯರು ಹೋಗುತ್ತಿದ್ದರು. ನಿರ್ದೇಶಕರ, ನಿರ್ಮಾಪಕರ ಜೊತೆ ಹಾಸಿಗೆ ಹಂಚಿಕೊಳ್ಳುವಂತಿದ್ದರೆ ಖಂಡಿತ ಛಾನ್ಸ್ ಕೊಡುಸುತ್ತೇನೆ ಎಂದು ಕಿನ್ನೆರ ಆಮಿಷ ಒಡ್ಡುತ್ತಿದ್ದರು.

ಈಕೆಯ ಆಮಿಷಕ್ಕೆ ಬಲಿಯಾದ ಅದೆಷ್ಟೋ ನತದೃಷ್ಟ ಹೆಣ್ಣು ಮಕ್ಕಳ ಜೀವನ ಬಾಡಿ ಹೋದ ಬಳ್ಳಿಯಂತಾಗಿದೆ ಎಂಬ ಅಂಶ ಬಯಲಾಗಿದೆ. ಅವಕಾಶ ಹುಡುಕಿಕೊಂಡು ಬಂದವರನ್ನು ಕಿನ್ನೆರ ಹಾಗೂ ಆಕೆಯ ಪತಿ ಇಬ್ಬರೂ ಬಲೆಗೆ ಬೀಳಿಸುತ್ತಿದ್ದರು. ಪ್ರಭಾವಿ ವ್ಯಕ್ತಿಗಳು, ನಿರ್ಮಾಪಕರು ಹಾಗೂ ನಿರ್ದೇಶಕರ ಕಾಮ ವಾಂಛಲ್ಯವನ್ನು ತಣಿಸುವಂತೆ ಕಂಡೀಷನ್ ಹಾಕುತ್ತಿದ್ದರು.

ಸಿನಿಮಾಗಳಲ್ಲಿ ಅವಕಾಶ ಬೇಕಾದರೆ ನಾವು ಹೇಳಿದಂತೆ ಕೇಳಬೇಕು. ಟೈಟ್ ಜೀನ್ಸ್, ಟೀ ಶರ್ಟ್ಸ್ ಹಾಕಿಕೊಂಡು ಬರಬೇಕು. ಗ್ಲಾಮರ್ ಆಗಿ ಕಾಣುವಂತೆ ಡ್ರೆಸ್ ಮಾಡಿಕೊಳ್ಳಬೇಕು. ಹಾಗೆ ಹೀಗೆ ಎಂದು ಪುಸಲಾಯಿಸಿ ಇವರನ್ನು ಹಾಸಿಗೆ ತಳ್ಳುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಟಿವಿ 9 ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಗೆ "ಆಪರೇಷನ್ ಡರ್ಟಿ ಪಿಕ್ಚರ್" ಎಂದು ಹೆಸರಿಡಲಾಗಿದೆ. ಈ ರಹಸ್ಯ ಕಾರ್ಯಾಚರಣೆಯಲ್ಲಿ ಟಿವಿ9 ವರದಿಗಾರ್ತಿ ಸಿನಿಮಾದಲ್ಲಿ ಅವಕಾಶ ಕೊಡಿಸುವಂತೆ ಕಿನ್ನೆರ ಬಳಿಗೆ ಹೋಗಿ ಆಕೆಯ ರಾತ್ರಿ ಕಲಾಪಗಳನ್ನು ಬಯಲು ಮಾಡಿದ್ದಾರೆ. (ಏಜೆನ್ಸೀಸ್)

More from Filmibeat

English summary
TV9 Telugu channels has telecasts a sting operation, "Operation Dirty Picture" exposing TV Serial actress Kinnera. Kinnera has acted in many Telugu serials and movies like Chettu Kinda Pleader, Simha etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X