»   » ಅವಳಿ-ಜವಳಿ ಆಯುಷಿ-ಖುಷಿಯಿಂದ 'ಅಗ್ನಿಸಾಕ್ಷಿ'ಗೆ ಹೊಸ ತಿರುವು

ಅವಳಿ-ಜವಳಿ ಆಯುಷಿ-ಖುಷಿಯಿಂದ 'ಅಗ್ನಿಸಾಕ್ಷಿ'ಗೆ ಹೊಸ ತಿರುವು

Posted By:
Subscribe to Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಗ್ನಿಸಾಕ್ಷಿ' ಕೂಡ ಒಂದು. ಸದಾ ಒಂದಲ್ಲೊಂದು ಕುತೂಹಲ ಸೃಷ್ಟಿಸುತ್ತಲೇ ಸಾಗುತ್ತಿರುವ 'ಅಗ್ನಿಸಾಕ್ಷಿ' ಧಾರಾವಾಹಿಗೆ ಈಗ ಹೊಸ ತಿರುವು ಸಿಕ್ಕಿದೆ.

ವರ್ಷಗಟ್ಟಲೆ ಕಾಣಿಸಿಕೊಳ್ಳದ ಗೌತಮನ ಪತ್ನಿ ರಾಧಿಕಾ ಮತ್ತೆ ಪರದೆಯ ಮೇಲೆ ಕಾಣಿಸಿಕೊಂಡದ್ದು ವೀಕ್ಷಕರಲ್ಲಿ ಸಂತಸ ಮೂಡಿಸಿತ್ತು. ರಾಧಿಕಾ-ಗೌತಮ್ ಮಗಳು ಆಯುಷಿ. ಆಕೆ ಮಾತು ಬಾರದ ಮೂಗಿ ಎಂಬ ವಿಷಯವೂ ತಿಳಿದಿತ್ತು.

twist-in-colors-kannada-s-agni-sakshi-serial

ಜೀವಂತವಾಗಿರುವ ಅಮ್ಮ-ಮಗಳ ಭೇಟಿ ಯಾವಾಗ ಇರಬಹುದು ಎಂಬ ವೀಕ್ಷಕರ ಕಾತರಕ್ಕೆ ಮತ್ತೊಂದು ಕುತೂಹಲ ಹುಟ್ಟುಹಾಕಿದ್ದು, ರಾಧಿಕಾಳಿಗೆ ಮತ್ತೊಬ್ಬ ಮಗಳೂ ಇದ್ದಾಳೆ ಎಂಬ ವಿಷಯ. ಅವಳೇ ಖುಷಿ.!

ಖುಷಿ ಮತ್ತು ಆಯುಷಿ ಅವಳಿ-ಜವಳಿ. ವಿಶೇಷ ಎಂದರೆ ಆಯುಷಿ ಮಾತು ಬಾರದ ಮುಗ್ಧ ಹುಡುಗಿ. ಆದರೆ ಖುಷಿ ಪಟಪಟ ಅಂತ ಮಾತನಾಡುವ ಗಟವಾಣಿ. ಖುಷಿಯನ್ನು ನೋಡಿದವರು ಆಯುಷಿ ಮೂಗಿಯಲ್ಲ ಎಂದು ವಾದ ಮಾಡಿದರೆ, ಮುಗ್ಧೆಯ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎನ್ನುವುದು ಇನ್ನೊಬ್ಬರ ವಾದ.

twist-in-colors-kannada-s-agni-sakshi-serial

ಒಂದೇ ತಾಯಿಯ ಈ ಅವಳಿ-ಜವಳಿ ಮಕ್ಕಳು ಯಾವಾಗ ಭೇಟಿಯಾಗುತ್ತಾರೆ? ಅವರಿಬ್ಬರ ಪ್ರತಿಕ್ರಿಯೆ ಹೇಗಿರುತ್ತದೆ? ಮುಂದೆ ಕತೆ ಯಾವ ತಿರುವು ಪಡೆಯುತ್ತದೆ ಎಂಬ ಕಾತುರಕ್ಕೆ 'ಅಗ್ನಿಸಾಕ್ಷಿ'ಯನ್ನು ತಪ್ಪದೇ ನೋಡಿ...

English summary
There is a twist in Colors Kannada's 'Agni Sakshi' serial. Don't miss to watch 'Agni Sakshi' in Colors Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada