'ಪುಟ್ಟಕ್ಕನ ಮಕ್ಕಳು' ಸೀರಿಯಲ್: ಸಂಕಷ್ಟದಲ್ಲಿ ಪುಟ್ಟಕ್ಕ, ಸ್ನೇಹ ಮಾಡ್ತಾಳಾ ಎಡವಟ್ಟು!

ಪುಟ್ಟಕ್ಕನ ಮಕ್ಕಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಮೂರು ಹೆಣ್ಣು ಮಕ್ಕಳಿಗೆ ಪುಟ್ಟಕ್ಕ ಜನ್ಮ ನೀಡಿದ್ದಾಳೆ. ಪ್ರತಿ ದಿನ ಸಂಜೆ ಆಗುತ್ತಲೇ ಪುಟ್ಟಕ್ಕನ ಮಕ್ಕಳು ತಮ್ಮ ಜೀವನದ ಕಥೆಯೊಂದಿಗೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತಾರೆ. ದಿನವೂ ಧಾರಾವಾಹಿಯಲ್ಲಿ ಒಂದಲ್ಲಾ ಒಂದು ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಧಾರಾವಾಹಿಯಲ್ಲಿ ಈಗ ಹೊಸದೊಂದು ಟ್ವಿಸ್ಟ್‌ಗೆ ಮುನ್ಸೂಚನೆ ಸಿಕ್ಕಿದೆ.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಒಂದು ಕಡೆ ಸ್ನೇಹ ಕಂಠಿ ಪ್ರೀತಿ, ಮತ್ತೊಂದು ಕಡೆ ಕಂಠಿ ತಾಯಿ, ಪುಟ್ಟಕ್ಕ ಮಾಡುತ್ತಿರುವ ಸರ್ಕಸ್ ಜೊತೆಗೆ ಪುಟ್ಟಕ್ಕನ ಮನೆ ಖಾಲಿ ಮಾಡಿಸಲು ಪತಿ ಮಾಡುತ್ತಿರುವ ತಂತ್ರಗಳು. ಹೀಗೆ ನಾನಾ ರೋಚಕ ತಿರುವುಗಳು ಈ ಧಾರಾವಾಹಿಯಲ್ಲಿ ಒಟ್ಟಿ ಬರುತ್ತಿವೆ. ಹಾಗಾಗಿ ಸಾಕಷ್ಟು ಕುತೂಹಲವನ್ನೂ ಹುಟ್ಟು ಹಾಕಿದೆ.

ಸದ್ಯ ಪುಟ್ಟಕ್ಕನ ಮನೆ ಖಾಲಿ ಮಾಡಿಸಲು ರಾಜೇಶ್ವರಿ ಮಾಡುತ್ತಿರುವ ಸಾಹಸದ ಬಗ್ಗೆ ಸಂಚಿಕೆಗಳು ಪ್ರಸಾರ ಆಗುತ್ತಿವೆ. ಏನೇ ಮಾಡಿದರು ಪುಟ್ಟಕ್ಕ ಮಾತ್ರ ಮನೆ, ಊರು ಬಿಟ್ಟು ಹೋಗುವ ಹಾಗೆ ಕಾಣಿಸುತ್ತಿಲ್ಲ. ಹಾಗಾಗಿ ರಾಜೇಶ್ವರಿ ನೇರವಾಗಿ ಕಂಠಿ ತಾಯಿ ಬಂಗಾರಮ್ಮನ ಬಳಿಗೆ ಹೋಗಿ, ಆಕೆಗೆ ನ್ಯಾಯ ಕೊಡಿಸುವಂತೆ ಬೇಡಿಕೊಂಡು, ಪುಟ್ಟಕ್ಕನ ಮೆಸ್ ಖಾಲಿ ಮಾಡಿಸಲು ಆಕೆಯನ್ನು ಮೆಸ್‌ಗೆ ಕರೆತಂದಿದ್ದಾಳೆ.

Twist In Puttakkana Makkalu Serial, Puttakka Is In Big Trouble

ಆದರೆ ಪುಟ್ಟಕ್ಕನ ಬಗ್ಗೆ ಈಗಾಗಲೇ ಬಂಗಾರಮ್ಮನಿಗೆ ತಿಳಿದಿದೆ. ಹಾಗಾಗಿ ಬಂಗಾರಮ್ಮ ಪುಟ್ಟಕ್ಕನ ಮನೆ ಖಾಲಿ ಮಾಡುವಂತೆ ಆವಾಜ್ ಬಿಡದೆ, ಪುಟ್ಟಕ್ಕನ ಜೊತೆಗೆ ಮಾತು ಕಥೆ ಮಾಡಲು ಮುಂದಾಗಿದ್ದಾರೆ. ಪುಟ್ಟಕ್ಕ ಬಂಗಾರಮ್ಮನನ್ನು ಹೇಗಾದರು ಮಾಡಿ ಮನ ಒಲಿಸಲು ಮುಂದಾಗಿದ್ದಾರೆ. ಪುಟ್ಟಕ್ಕ ಹೇಗೊ ಈ ಸಮಸ್ಯೆ ಇಂದ ಹೊರ ಬರಲು ಪ್ರಯತ್ನ ಮಾಡ್ತಿದ್ದಾಳೆ.

ಆದರೆ ಇದ್ದಕ್ಕೆ ಪುಟ್ಟಕ್ಕನ ಮಗಳು ಸ್ನೇಹಾನೇ ಅಡ್ಡಿ ಆಗುವ ಹಾಗೆ ಕಾಣುತ್ತಿದೆ. ಯಾಕೆಂದರೆ ಸ್ನೇಹಾಗೆ ರಾಜೇಶ್ವರಿ ಮನೆಗೆ ಬಂದಿರುವ ವಿಚಾರ ಮಾತ್ರ ಗೊತ್ತಾಗಿದೆ. ಹಾಗಾಗಿ ಅವರ ವಿರುದ್ಧ ಸಮರ ಸಾರಲು ಮನೆಗೆ ಹೊರಟಿದ್ದಾಳೆ. ಆದರೆ ಮನೆಯಲ್ಲಿ ಬಂಗಾರಮ್ಮ ಇರೋದು ಆಕೆಗೆ ಗೊತ್ತಿಲ್ಲ. ಒಂದು ವೇಳೆ ಸ್ನೇಹಾ ಮನೆಗೆ ಬಂದರೆ. ಅಲ್ಲಿ ಬಂಗಾರಮ್ಮ ಎದುರಾಗುತ್ತಾಳೆ.

ಮೊದಲೇ ಬಂಗಾರಮ್ಮ ಮತ್ತು ಸ್ನೇಹಾಳಿಗೆ ಜಗಳ ಆಗಿದೆ. ಸ್ನೇಹಾ ಬಗ್ಗೆ ಆಕೆಗೆ ಕೆಟ್ಟ ಅಭಿಪ್ರಾಯ ಇದೆ. ಹಾಗಾಗಿ ಸ್ನೇಹ ಪುಟ್ಟಕ್ಕನ ಮಗಳು ಎಂದು ಗೊತ್ತಾದರೆ, ಬಂಗಾರಮ್ಮ ಪುಟ್ಟನ ಪರ ನಿಲ್ಲುವುದಿಲ್ಲ. ಹಾಗಾಗಿ ಸ್ನೇಹಾಳಿಂದ ಮನೆ ಆಪತ್ತು ಬರುವ ಎಲ್ಲಾ ಸೂಚನೆಗಳು ಸಿಕ್ಕಿವೆ. ಅಲ್ಲದೇ, ಸ್ನೇಹ ಜೊತೆಗೆ ಬಂಗಾರಮ್ಮ ಮಗ ಕಂಠಿ ಕೂಡ ಪುಟ್ಟಕ್ಕನ ಮನೆಗೆ ಹೋಗುತ್ತಿದ್ದಾನೆ. ಅಲ್ಲಿ ಅವನು ಬಂಗಾರಮ್ಮನ ಕಣ್ಣಿಗೆ ಬಿದ್ದರಂತೂ ಕಥೆ ಮುಗಿದೇ ಹೋಯ್ತು. ಹಾಗಾಗಿ ಈ ಒಟ್ಟಿಗೆ ಬಂದಿರುವ ಈ ಮೂರು ಟ್ವಿಸ್ಟ್‌ಗಳು ನಿರೀಕ್ಷೆ ಹೆಚ್ಚುವಂತೆ ಮಾಡಿವೆ.

More from Filmibeat

English summary
Twist In Puttakkana Makkalu Serial, Puttakka Is In Big Trouble What Will Happend,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X