»   » ಬಿಗ್ ಬಾಸ್ ವಿನ್ನರ್ ಫಿಕ್ಸಿಂಗ್, ಟ್ವೀಟ್ ಲೋಕ ತೀರ್ಪು

ಬಿಗ್ ಬಾಸ್ ವಿನ್ನರ್ ಫಿಕ್ಸಿಂಗ್, ಟ್ವೀಟ್ ಲೋಕ ತೀರ್ಪು

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಈಟಿವಿ ಕನ್ನಡದ ಬಿಗ್ ಬಾಸ್ ಮನೆಗೆ ಬೀಗ ಬಿದ್ದಿದೆ. ಎಲ್ಲರ ನಿರೀಕ್ಷೆಗಳನ್ನು ಮೀರಿ ಅರುಣ್ ಸಾಗರ್ ಅವರನ್ನು ಪಕ್ಕಕ್ಕೆ ತಳ್ಳಿ ವಿಜಯ್ ರಾಘವೇಂದ್ರ ಬಿಗ್ ಬಾಸ್ ಸೀಸನ್ 1 ರ ವಿಜೇತರಾಗಿ 50 ಲಕ್ಷ ರು. ಬಹುಮಾನ ಗೆದ್ದುಕೊಂಡಿದ್ದಾರೆ. ಆದರೆ, ಸಾಮಾಜಿಕ ಜಾಲ ತಾಣಗಳಲ್ಲಿ ಗೆದ್ದ ಅಭ್ಯರ್ಥಿ ಮೊದಲೇ ಫಿಕ್ಸ್ ಆಗಿತ್ತು ಗುರೂ ಎಂದು ಅಬ್ಬರ ಶುರುವಾಗಿದೆ.

  ಕೋಟಿ ಕನ್ನಡಿಗರಲ್ಲಿ ಸಿಹಿ ಕಹಿ ಭಾವನೆಗಳನ್ನು ಹುಟ್ಟಿಸಿದ, ಜನಪ್ರಿಯ ಕಲಾವಿದರನ್ನು ಇನ್ನಷ್ಟು ಜನರ ಹತ್ತಿರಕ್ಕೆ ತಂದ ಈಟಿವಿ ವಾಹಿನಿಯ ಬಹುಜನಪ್ರಿಯ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಕಾರ್ಯಕ್ರಮದಲ್ಲಿ ನಟ, ಕಲಾ ನಿರ್ದೇಶಕ ಅರುಣ್ ಸಾಗರ್ ವಿಜಯಶಾಲಿಯಾಗಬೇಕಿತ್ತು, ಆದರೆ, ಆಗಿದ್ದೇ ಬೇರೆ.. ವಿಜಯ್ ರಾಘವೇಂದ್ರ ಗೆದ್ದುಕೊಂಡರು.

  'ಏಕ್ ರಾಜ, ಏಕ್ ರಾಣಿ, ಏಕ್ ಬುಡ್ಡಾ ಔರ್ ಏಕ್ ಛೋರ್..' ಎಂಬ ಜನಪ್ರಿಯ ನುಡಿಯನ್ನು ಕಾಳಿಮಠದ ಸ್ವಾಮೀಜಿ ಹೇಳಿಹೋಗಿದ್ದು ಕೊನೆಗೆ ಸತ್ಯವಾಯಿತು. ಏಕ್ ರಾಜ, ಏಕ್ ಛೋರ್ (ವಿಜಯ್, ಅರುಣ್) ಪೈಕಿ ಯಾರು ಯಾರ ಪ್ರಶಸ್ತಿ ಕದ್ದರು ಎಂಬುದು ಪ್ರೇಕ್ಷಕರ ಅರಿವಿಗೆ ಮುಟ್ಟುವ ಮೊದಲು ಹೊತ್ತು ಮುಳುಗಿ ನಕ್ಷತ್ರಗಳು ಕಾಣಿಸತೊಡಗಿತ್ತು.

  ಏನೇ ಇರಲಿ, ಎಲ್ಲಾ ಬಗೆಯ ಜನರನ್ನು ನಿಭಾಯಿಸಿದ ಕೀರ್ತಿಗೆ ಒಳಗಾಗಿರುವ ಕಿಚ್ಚ ಸುದೀಪ್ ಗೆ ಎಲ್ಲಾ ಕಡೆಯಿಂದ ಪ್ರಶಂಸೆಗಳ ಸುರಿಮಳೆ ಹರಿದು ಬಂದಿದೆ. ಸಿಹಿ ಕಹಿ ಟ್ವೀಟ್ ಬಗ್ಗೆ ಗ್ರ್ಯಾಂಡ್ ಫಿನಾಲೆಯಲ್ಲೂ ಪ್ರಸ್ತಾಪವಾಯಿತು. #bbkannada ಜನಪ್ರಿಯತೆ ಜೀವಂತವಾಗಿಸುವಲ್ಲಿ ಟ್ವೀಟ್ ಲೋಕದ ಕೊಡುಗೆಯೂ ಇದೆ.. ಬನ್ನಿ ಟ್ವೀಟರ್ ಗಳ ಪ್ರತಿಕ್ರಿಯೆ ನೋಡೋಣ...

  ಯಾಕ್ರಿ ಅಷ್ಟು ಲೇಟ್

  ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಬರೀ ಜಾಹೀರಾತು ಮಯವಾಗಿತ್ತು. ಪ್ರೇಕ್ಷಕರು ಗೊಣಗಾಟದ ನಡುವೆ ವಿನ್ನರ್ ಯಾರಾದರೂ ಆಗಲಿ ಎಂಬ ಮನಸ್ಥಿತಿ ಉಂಟಾಗಿತ್ತು.

  ಅರುಣ್ ಅಭಿಮಾನ 'ಸಾಗರ'

  ಅರುಣ್ ಸಾಗರ ಪರ ಅಭಿಮಾನಿಗಳ ಟ್ವೀಟ್ ಮಹಾಪೂರವೇ ಹರಿದಿದೆ. ಅರುಣ್ ಶಾಲಾದಿನಗಳಲ್ಲಿ ಬಟ್ಟೆ ಇಲ್ಲದವರಿಗೆ ತನ್ನ ಪ್ಯಾಂಟು ಕೊಟ್ಟು ಚಡ್ಡಿಯಲ್ಲೇ ಮನೆಗೆ ಬಂದಿದ್ದು ಎಂದು ಅವರ ಅಮ್ಮ ಹೇಳಿದ ಕತೆ ಕೇಳಿದ ಅಭಿಮಾನಿಗಳಲ್ಲಿ ಅರುಣ್ ಬಗ್ಗೆ ಅಭಿಮಾನ, ಗೌರವ ಇನ್ನಷ್ಟು ಹೆಚ್ಚಿದೆ.

  ಫಿಕ್ಸಿಂಗ್ ಗುರೂ

  @v_motographer ಎಲ್ಲಾ ಮೊದಲೇ ಫಿಕ್ಸ್ ಆಗಿತ್ತು ಎನ್ನುತ್ತಿದ್ದಾರೆ ಪರಮಾತ್ಮ

  ಕ್ಲೈಮ್ಯಾಕ್ಸ್ ಇಷ್ಟ ಆಗಲಿಲ್ಲ

  ಬಿಗ್ ಬಾಸ್ ಎಂಬ ರಿಯಾಲಿಟಿ ಶೋ/ಮೂವಿ ಕ್ಲೈಮ್ಯಾಕ್ಸ್ ಇಷ್ಟ ಆಗಿಲಿಲ್ಲ @gulaaabi

  ವಿಜಯ್ ಗೆದ್ದಿದ್ದು ಸರಿ

  @r_yermal ಹೇಳ್ತಾರೆ ಫುಲ್ ಎಪಿಸೋಡ್ ನೋಡೋ ಹಾಗೆ ಇದ್ದ ಏಕೈಕ ಶೋ ಇದಾಗಿತ್ತು. ವಿಜಯ್ ಗೆದ್ದಿದ್ದು ಸರಿಯಾಗಿದೆ.

  ಈಗ ಸಮಯ 8 ಗಂಟೆ

  ಬಿಗ್ ಬಾಸ್ ಮುಗಿದು ಹೋಯ್ತು ಈಗ 8 ಗಂಟೆಗೆ ಏನು ನೋಡಲಿ

  CSP ಸೀರಿಯಲ್ ನೋಡಿ

  ಬಿಗ್ ಬಾಸ್ ಮುಗಿದರೆ ಏನಂತೆ ನಮ್ಮ ಸಿಎಸ್ಪಿ ಅಲಿಯಾಸ್ ಟಿಎನ್ ಸೀತಾರಾಮ್ ಅವರ ಮಹಾಪರ್ವ ಆರಂಭಗೊಳ್ಳಲಿದೆ ತಪ್ಪದೇ ನೋಡಿ

  ಈಟಿವಿ, ಸುದೀಪ್ ಗೆ ಬಹುಪರಾಕ್

  ಕನ್ನಡ ಕಿರುತೆರೆ ಕಡೆಗೆ ಕನ್ನಡಿಗರ ಜೊತೆಗೆ ಪರಭಾಷಿಕರನ್ನು ಆಕರ್ಷಿಸಿದ ಬಿಗ್ ಬಾಸ್ ಶೋ ಗೆ ಬಹುಪರಾಕ್

  ಅರುಣ್ ಸೋಲಿನ ರಹಸ್ಯ

  ಅರುಣ್ ಸಾಗರ್ ಗೆಲ್ಲುವ ಹಂತಕ್ಕೆ ಬಂದು ಸೋತಿದ್ದು ಏಕೆ ಎಂಬ ಚರ್ಚೆಗೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ನೋಡಿ

  ಗ್ರ್ಯಾಂಡ್ ಫಿನಾಲೆ ಬಗ್ಗೆ

  ಬಿಗ್ ಬಾಸ್ ಸ್ಪರ್ಧಿಗಳ ನೃತ್ಯ ಹಾಗೂ ಕನ್ನಡೇತರ ಹಾಡುಗಳ ಬಳಕೆ ಬಗ್ಗೆ ಅಪಸ್ವರ

  ಕಾಳಿ ಮಠ ಸ್ವಾಮೀಜಿ

  ಡೈಲಾಗ್ ಕಿಂಗ್ ಕಾಳಿಮಠದ ಸ್ವಾಮೀಜಿ ಗ್ರ್ಯಾಂಡ್ ಫಿನಾಲೆ ದಿನ ಡೈಲಾಗ್ ಜೊತೆಗೆ ನಟನೆ, ನೃತ್ಯ ಪ್ರದರ್ಶನ ನೀಡಿ ಜನರಿಗೆ ಹುಚ್ಚೆಬ್ಬಿಸಿದರು.

  ಶ್ವೇತಾ ಪಂಡಿತ್

  ಅರುಣ್ ಸಾಗರ್-ಸಾಗರದಂಥ ಪ್ರೀತಿ

  ಅವಿನಾಶ್ ಬೇಳೂರು

  ಅರುಣ್ ಸಾಗರ್ ಪರ ಟ್ವೀಟ್ ಲೋಕದಲ್ಲಿ ವಾದ ವಕಾಲತ್ತು ವಹಿಸಿಕೊಂಡಿರುವ ಅಭಿಮಾನಿಗಳ ಮಾತುಗಳು

  ಅವಿನಾಶ್ ಬೇಳೂರು

  ಅರುಣ್ ಸಾಗರ್ ಪರ ಟ್ವೀಟ್ ಲೋಕದಲ್ಲಿ ವಾದ ವಕಾಲತ್ತು ವಹಿಸಿಕೊಂಡಿರುವ ಅಭಿಮಾನಿ ಅವಿನಾಶ್

  ಹಿರಿಯರ ಮಾತು

  ಅರುಣ್ ಸಾಗರ್ ಗೆಲ್ಲಬೇಕಿತ್ತು ಎನ್ನುವ ರತ್ನಾ

  ವೋಟ್ ಎಷ್ಟು ಬಿತ್ತು ಗುರು

  ಸುಳ್ಳಾದರೂ ಸರಿ ಯಾರಿಗೆ ಎಷ್ಟು ವೋಟ್ ಬಿತ್ತು ಎಂದು ಹೇಳಿದ್ದರೆ ಸಾಕಿತ್ತು.

  ಡಾ.ರಾಜ್ ಫ್ಯಾಮಿಲಿ ಬಗ್ಗೆ

  ಅರುಣ್ ಪ್ರತಿಭಾವಂತ ನಿಜ. ಪಂದ್ಯದಲ್ಲಿ ಗೆಲ್ಲಲಿಲ್ಲ ಎಂದು ವಿಜಯ್ ಹಾಗೂ ಡಾ.ರಾಜ್ ಫ್ಯಾಮಿಲಿ ವಿರುದ್ಧ ಕತ್ತಿ ಮಸೆಯಬೇಡಿ

  English summary
  Twitter world abuzz with ETV Kannada's Bigg Boss : Bigg Boss Kannada Winner was fixed and organisers cheated viewers like they did in Chandrika's case shouted Tweople. Twitter world was in favour of Arun Sagar who finished second in the reality show concluded after 98 days of telecast.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more