ಕರ್ಣನ ನಾಯಕಿಯಾದವರು ಒಬ್ಬರಲ್ಲ.. ಇಬ್ಬರು; ಗೀತಾ ಅಷ್ಟೇ ಅಲ್ಲ.. ನಾಗಿಣಿಯೂ ಬಂದಳು!

By ಪ್ರಿಯಾ ದೊರೆ

'ಕರ್ಣ' ಧಾರಾವಾಹಿ ಬಗ್ಗೆ ಈಗಾಗಲೇ ಸಾಕಷ್ಟು ಕುತೂಹಲಗಳು ಮೂಡಿವೆ. ಪ್ರಸಾರವಾಗಿರುವ ಒಂದೇ ಒಂದು ಪ್ರೊಮೋದಿಂದಲೇ ನಟ ಕಿರಣ್ ರಾಜ್ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಹೊಸ ಧಾರಾವಾಹಿ ಕರ್ಣನ ಜೊತೆಗೆ 'ಜಾಕಿ 42' ಸಿನಿಮಾ ಬಗ್ಗೆಯೂ ನಟ ಕಿರಣ್ ರಾಜ್ ಅನೌನ್ಸ್ ಮಾಡಿ, ತನ್ನ ಅಭಿಮಾನಿಗಳಿಗೆ ಡಬಲ್ ಖುಷಿ ಕೊಟ್ಟಿದ್ದಾರೆ. 'ಜಾಕಿ 42' ಸಿನಿಮಾ ಚಿತ್ರೀಕರಣದ ಜೊತೆಗೆ ಕಿರಣ್ ರಾಜ್ ಈಗ 'ಕರ್ಣ' ಧಾರಾವಾಹಿಯ ಶೂಟಿಂಗ್ ಅನ್ನು ಕೂಡ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಹೊಸ ಧಾರಾವಾಹಿಯು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ನಿರ್ಮಾಪಕಿ ಕಮ್ ನಿರ್ದೇಶಕಿ ಆಗಿರುವ ಶೃತಿ ನಾಯ್ಡು 'ಕರ್ಣ' ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.

Two heroines for Kiranraj s Karna new Kannada serial

'ಕರ್ಣ' ಧಾರಾವಾಹಿಗೆ ನಟ ಕಿರಣ್ ರಾಜ್ ಅವರು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ನಿರ್ದೇಶಕ, ನಿರ್ಮಾಪಕ, ನಟ, ರಂಗಕರ್ಮಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ನಟಿ ವರಲಕ್ಷ್ಮೀ ಶ್ರೀನಿವಾಸ್, ನಟ ಸುಂದರ್ ವೀಣಾ, ನಟಿ ವೀಣಾ ರಾವ್, ನಟ ಶ್ಯಾಮ್ ಸಿಮ್ರನ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಕರ್ಣನಿಗೆ ಬೇಕಿದೆ ಪ್ರೀತಿಯ ಹೆಗಲು

ಮೊದಲ ಪ್ರೊಮೋದಲ್ಲೇ 'ಕರ್ಣ' ಹೀರೋ ಸೆಂಟ್ರಿಕ್ ಧಾರಾವಾಹಿ ಎಂಬುದು ಎಲ್ಲರಿಗೂ ಗೊತ್ತಾಗಿದೆ. ಇದರಲ್ಲಿ ಕರ್ಣ ವೈದ್ಯನಾಗಿದ್ದು, ಮನೆಯವರಿಗೆ ಆಳಿಗಿಂತಲೂ ಕಡೆಯವನಾಗಿದ್ದಾನೆ ಎಂಬುದು ಪಕ್ಕಾ ಆಗಿದೆ. ನೂರಾರು ರೋಗಿಗಳಿಗೆ ಚಿಕಿತ್ಸೆ ಕೊಟ್ಟು, ಜೀವ ಉಳಿಸಿ ಎಲ್ಲರ ಮನದಲ್ಲೂ ಕರ್ಣನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಕರ್ಣನ ಕುಟುಂಬದಲ್ಲಿ ಮಾತ್ರವೇ ಅವನಿಗೆ ಎಳ್ಳಷ್ಟೂ ಪ್ರೀತಿ ಇಲ್ಲ. ಒಂಟಿಯಾಗಿರುವ ಕರ್ಣನಿಗೆ ಜೋಡಿ ಯಾರಾಗಬಹುದು ಎಂಬುದು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಭವ್ಯ ಗೌಡ, ಮೋಕ್ತಿತಾ ಪೈ ಇಲ್ಲವೇ ರಂಜನಿ ರಾಘವನ್ ನಾಯಕಿಯಾಗಬೇಕು ಎಂಬ ಬೇಡಿಕೆಯೂ ಇತ್ತು.

ನೆರವೇರಿತಾ ಅಭಿಮಾನಿಗಳ ಆಸೆ ..?

ಅಭಿಮಾನಿಗಳ ಆಸೆಯಂತೆ 'ಕರ್ಣ' ಧಾರಾವಾಹಿಯಲ್ಲಿ ನಾಯಕನಿಗೆ ಜೋಡಿಯಾಗಿ ನಟಿ ಭವ್ಯ ಗೌಡ ಅವರು ಕಾಣಿಸಿಕೊಂಡಿದ್ದಾರೆ. ಮಳೆಯಲ್ಲಿ ಹಾಡೊಂದಕ್ಕೆ ನಟ ಕಿರಣ್ ರಾಜ್ ಮತ್ತು ನಟಿ ಭವ್ಯ ಗೌಡು ಹೆಜ್ಜೆ ಹಾಕಿರುವ ವೀಡಿಯೋ ಕ್ಲಿಪಿಂಗ್ ಒಂದು ವೈರಲ್ ಆಗಿದ್ದು, ಭವ್ಯ ಗೌಡ ಅವರು ಕಿರಣ್ ರಾಜ್‌ಗೆ ಜೋಡಿಯಾಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಎಂಬುದು ಸುದ್ದಿಯಾಗಿದೆ. ಕಳೆದ ವಾರ ಅಭಿಮಾನಿಗಳು ಈ ವಿಚಾರಕ್ಕೆ ಫುಲ್ ಹ್ಯಾಪಿ ಆಗಿದ್ದರು. ವೀಕೆಂಡ್ ಗೂ ಮುನ್ನವೇ ಈ ಸಿಹಿ ಸುದ್ದಿ ಕೇಳಿ ಹಲವರು ಪಾರ್ಟಿ ಮಾಡಿದ್ದೂ ಉಂಟು. ಇದೀಗ ಕರ್ಣ ಧಾರಾವಾಹಿಯ ಬಗ್ಗೆ ಹೊಸ ಅಪ್ ಡೇಟ್ ಒಂದು ಬಂದಿದೆ.

ಇಬ್ಬರು ನಾಯಕಿಯರು

ಅದೇನೆಂದರೆ ಕರ್ಣನಿಗೆ ಇಬ್ಬರು ನಟಿಯರು ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈಗಾಗಲೇ 'ನಾಗಿಣಿ-2' ಧಾರಾವಾಹಿ ಮೂಲಕ ಫೇಮಸ್ ಆಗಿ, ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ನಟಿ ನಮ್ರತಾ ಗೌಡ. ಆಕೆ ಕರ್ಣನಿಗೆ ಜೋಡಿಯಾಗಿ ನಟಿಸಲಿದ್ದಾರೆ ಎಂಬುದು ಎಲ್ಲೆಡೆ ಕೇಳಿ ಬರುತ್ತಿದೆ. ಈ ಬಗ್ಗೆ ನಟಿ ನಮ್ರತಾ ಆಗಲೀ ಅಥವಾ ಧಾರಾವಾಹಿಯ ತಂಡವಾಗಲಿ ಯಾವುದೇ ಮಾಹಿತಿಯನ್ನು ರಿವೀಲ್ ಮಾಡಿಲ್ಲ. ಒಟ್ನಲ್ಲಿ ಕರ್ಣ ಧಾರಾವಾಹಿ ಮೊದಲ ಪ್ರೊಮೋವೇ ಇಷ್ಟೊಂದು ಕುತೂಹಲಗಳನ್ನು ಹುಟ್ಟು ಹಾಕಿದ್ದು, ಧಾರಾವಾಹಿಯ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ ಎಂಬುದಂತೂ ಪ್ರೂವ್ ಆಗಿದೆ.

More from Filmibeat

English summary
Zee kannada channel new serial karna two heroines;
Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X