»   » ಇನ್ನೂರು ಸಿನಿಮಾಗಳು ಒಂದೇ ದಿನ ಮಾರಾಟಕ್ಕಿವೆ

ಇನ್ನೂರು ಸಿನಿಮಾಗಳು ಒಂದೇ ದಿನ ಮಾರಾಟಕ್ಕಿವೆ

By: ಜೀವನರಸಿಕ
Subscribe to Filmibeat Kannada

ಇನ್ನೂರು ಸಿನಿಮಾಗಳು ಮಾರ್ಕೆಟ್ ಗೆ ಬರ್ತಿವೆ. ನೀವು ನೋಡಿರೋ, ನೋಡಿರದ 200ಕ್ಕೂ ಹೆಚ್ಚು ಸಿನಿಮಾಗಳು ಮಾರಾಟಕ್ಕೆ ರೆಡಿಯಾಗ್ತಿವೆ. ಇದು ಸ್ಯಾಂಡಲ್ ವುಡ್ ನ ಬಹುದೊಡ್ಡ ಸೇಲ್ ಅಂದ್ರೆ ತಪ್ಪಾಗಲಾರದು.

ಇಷ್ಟಕ್ಕೂ 200 ಸಿನಿಮಾಗಳ ಮಾರಾಟ ಶುಭ ಸುದ್ದಿ ಕೇಳಿ, ಅಬ್ಬಾ ಕನ್ನಡ ಚಿತ್ರರಂಗದ 200 ಸಿನಿಮಾಗಳ ಸೇಲ್ ಅಂದ್ರೆ ವಿ ಆರ್ ಗ್ರೇಟ್ ಅನ್ಕೋಬೇಡಿ.
ಇಲ್ಲಿ ಸೇಲಾಗ್ತಿರೋದು, ಸೇಲಾಗದೇ ಉಳಿದ ಸಿನಿಮಾಗಳು. ದಯನೀಯ ಸೋಲುಕಂಡ ಸಿನಿಮಾಗಳು.

Two hundred Kannada movies for sale

ಅಂದಹಾಗೆ ಈ ಸಿನಿಮಾಗಳನ್ನ ಕೊಳ್ಳೋ ಗ್ರಾಹಕರು ಕನ್ನಡದ ಮನರಂಜನಾ ವಾಹಿನಿಗಳು. ಕೊಳ್ಳೋ ಗ್ರಾಹಕರು ಅಂದಕೂಡ್ಲೇ 200 ಸಿನಿಮಾಗಳೂ ಬಿಸಿಬಿಸಿ ದೋಸೆ ತರಹ ಕೊಂಡುಕೊಳ್ಳೋಕೆ ಯಾರೂ ಮುಗಿಬಿದ್ದು ಬರೋದಿಲ್ಲ.

ಅಳಿದುಳಿದ ಈ ಸಿನಿಮಾಗಳನ್ನ ಎಂಟರ್ ಟೈನ್ ಮೆಂಟ್ ಚಾನಲ್ ಗಳಿಗೆ ಮಾರಾಟ ಮಾಡೋಕೆ ಸಾಲಗಾರ ನಿರ್ಮಾಪಕರು ಕಾದಿದ್ದಾರಂತೆ. ಕೋಟಿ ಖರ್ಚು ಮಾಡಿ ಸಿನಿಮಾ ರಿಲೀಸೂ ಆಗದೆ ಇತ್ತ ಕಡೆ ಟಿ ವಿ ರೈಟ್ಸೂ ಬರದೆ ಹೈರಾಣಾಗಿದ್ದಾರೆ.

ಜೊತೆಗೆ ನಿರ್ಮಾಪಕರಿಗೆ ಬಡ್ಡಿ ಕಟ್ಟೋಕೆ ಪ್ರತಿ ತಿಂಗಳೂ ಹೊರೆಯಾಗ್ತಿರೋ ಸಿನಿಮಾಗಳನ್ನ ಹೇಗೆ ಸೇಲ್ ಮಾಡೋದು ಅಂತ ಚಿಂತನೆ ಮಾಡೋಕೆ ನಿರ್ಮಾಪಕರು ಸಭೆ ಕರೆದಿದ್ದಾರೆ. ಈ ಸಭೆ ಜೂನ್ 2 ಕ್ಕೆ ಗಾಂಧಿನಗರದ ಚೇತನ್ ಇಂಟರ್ ನ್ಯಾಶನಲ್ ಹೊಟೆಲ್ ನಲ್ಲಿ ನಡೆಯಲಿದೆಯಂತೆ.

English summary
About 200 Kannada movies are waiting for sale. This is biggest sale ever seen in Sandalwood. Kannada General Entertainment Channels are buying the satellite rights for all the movies. The action held on 2nd June at Chetan International Hotel, Bangalore.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada