ಈ ಬಾರಿಯ ಬಿಗ್ ಬಾಸ್ ಟ್ರೋಫಿ ಯಾರ ಮುಡಿಗೆ ? ಡಿಸೆಂಬರ್ 7ಕ್ಕೆ ಬಹಿರಂಗವಾಗಲಿದೆ ಮಹಾರಹಸ್ಯ
ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ....
ಜನಪ್ರಿಯತೆ ಕಡಿಮೆ ಆಗಲಿಲ್ಲ.ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ''ಬಿಗ್ ಬಾಸ್'' ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಮರಾಠಿ ಹೊರತು ಪಡಿಸಿದರೆ ಶುರುವಾಗಿದೆ. ಎಲ್ಲಾ ಭಾಷೆಯಲ್ಲಿಯೂ ಬಹುತೇಕ ಮುಕ್ತಾಯದ ಹಂತಕ್ಕೂ ಬಂದಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ಈ ಬಾರಿ ಎಲ್ಲರಿಗಿಂತ ಮೊದಲು ಮಲಯಾಳಂ ನಲ್ಲಿ ಶುರುವಾದ ಬಿಗ್ ಬಾಸ್ ಕಾರ್ಯಕ್ರಮದ ಫಿನಾಲೆ ಇದೇ ಭಾನುವಾರ (ನವೆಂಬರ್ 9) ನಡೆಯಲಿದೆ. ವಿಶೇಷ ಅಂದರೆ ಮಲಯಾಳಂ ಬೆನ್ನಲ್ಲಿಯೇ ಹಿಂದಿಯ ''ಬಿಗ್ ಬಾಸ್''ನ 19ನೇ ಸೀಸನ್ ಕ್ಲೈಮ್ಯಾಕ್ಸ್ ಗೆ ದಿನಗಣನೆ ಶುರುವಾಗಿದೆ.
ಹೌದು, ನಿಮಗೆ ಗೊತ್ತಿರಲಿ.. ಅಸಲಿಗೆ ಈ ಬಾರಿ ಹಿಂದಿಯಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಮೂರಲ್ಲ ಬದಲಿಗೆ ಐದು ತಿಂಗಳು ನಡೆಯುತ್ತೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ತಕ್ಕಂತೆ ಅದೇ ರೀತಿ ಪ್ರಚಾರವನ್ನು ಕೂಡ ಮಾಡಲಾಗಿತ್ತು.
ಆಗಸ್ಟ್‌ನಲ್ಲಿ ಕಾರ್ಯಕ್ರಮ ಶುರುವಾದ ನಂತರ ಈ ಬಾರಿಯ ''ಬಿಗ್ ಬಾಸ್'' ಕಾರ್ಯಕ್ರಮ ಐದು ತಿಂಗಳು ನಡೆಯುವ ಹಿನ್ನೆಲೆ ಆಗಾಗ ವಾರಾಂತ್ಯದ ಕೆಲ ಎಪಿಸೋಡ್‌ಗಳಲ್ಲಿ ಸಲ್ಮಾನ್ ಖಾನ್ ಕಾಣಿಸುವುದಿಲ್ಲ ಎಂದು ''ಪಿಂಕ್ ವಿಲ್ಲಾ'' ವರದಿ ಮಾಡಿತ್ತು. ಸಲ್ಮಾನ್ ಖಾನ್ ಗೈರು ಹಾಜರಾತಿಯಲ್ಲಿ ಅನಿಲ್ ಕಪೂರ್.. ಕರಣ್ ಜೋಹರ್ ಮತ್ತು ಫರಾ ಖಾನ್ ಕಾರ್ಯಕ್ರಮ ಜವಾಬ್ಧಾರಿ ವಹಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗಿತ್ತು
ಇದಕ್ಕೆ ಪೂರಕವಾಗಿ ಬಾಲಿವುಡ್‌ನ ಖ್ಯಾತ ನೃತ್ಯ ಕೊರಿಯೋಗ್ರಾಫರ್ .. ನಿರ್ದೇಶಕಿ.. ಫರಾ ಖಾನ್ ಸೆಪ್ಟೆಂಬರ್ 13 ರಂದು ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆಯನ್ನು ಸಲ್ಮಾನ್ ಖಾನ್ ಬದಲು ಮಾಡಿದ್ದರು. ಸ್ಫರ್ಧಿಗಳ ಮೈಚಳಿ ಬಿಡಿಸಿದ್ದರು. ಅದರಲ್ಲಿಯೂ ಸ್ಫರ್ಧಿಯ ತಿನ್ನುವ ತಟ್ಟೆಯನ್ನು ಕಿತ್ತುಕೊಂಡ ಹಿರಿಯ ನಟಿ ಕುನಿಕಾ ಸದಾನಂದ್ ಅವರ ಮೇಲೆ ಫರಾ ಖಾನ್ ಕೆಂಡ ಕಾರಿದ್ದರು.

ಹೀಗಾಗಿ ಹಲವರು ಈ ಬಾರಿಯ '' ಬಿಗ್ ಬಾಸ್'' ಬೇಗ ಮುಗಿಯಲ್ಲ ಎಂದೇ ಹಲವರು ಅಂದುಕೊಂಡಿದ್ದರು. ಆದರೆ ಈಗ ಏಕಾಏಕಿ ಈ ಪ್ಪ್ಯಾನ್ ಬದಲಾದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ''ಇಂಡಿಯಾ ಟುಡೇ'' ಈ ಕುರಿತು ವರದಿಯನ್ನು ಮಾಡಿದ್ದು, ''ಬಿಗ್ ಬಾಸ್'' ಹಿಂದಿಯ 19ನೇ ಸೀಸನ್‌ಗೆ ಡಿಸೆಂಬರ್ 7ರಂದು ತೆರೆ ಬೀಳಲಿದೆ ಎಂದು ವರದಿಯನ್ನು ಮಾಡಿದೆ. 15 ವಾರಕ್ಕಿಂತ ಹೆಚ್ಚು ಈ ಬಾರಿಯ ಸೀಸನ್ ಮುಂದುವರೆಸುವ ಯಾವ ಆಲೋಚನೆ ಕೂಡ ''ಬಿಗ್ ಬಾಸ್'' ಆಯೋಜಕರಿಗೆ ಇಲ್ಲ ಎಂದು ಹೇಳಿದೆ. ಇದಕ್ಕೆ ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ''ಬ್ಯಾಟಲ್ ಆಫ್ ಗಲ್ವಾನ್'' ಕಾರಣವೆಂದು ಕೂಡ ''ಇಂಡಿಯಾ ಟುಡೇ'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಚಿತ್ರದ ಚಿತ್ರೀಕರಣ ಇರುವ ಹಿನ್ನೆಲೆ ''ಬಿಗ್ ಬಾಸ್''ಗೆ ಸಮಯ ನೀಡಲು ಸಲ್ಮಾನ್ ಖಾನ್‌ಗೆ ಸಾಧ್ಯವಾಗುತ್ತಿಲ್ಲ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಹೀಗಾಗಿ ಸದ್ಯ ಹಿಂದಿಯ '' ಬಿಗ್ ಬಾಸ್'' ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ. ಒಂದು ವೇಳೆ ಡಿಸೆಂಬರ್ 7ಕ್ಕೆ ಫಿನಾಲೆ ನಡೆದರೆ ಗೌರವ್ ಖನ್ನಾ.. ತಾನ್ಯಾ ಮಿತ್ತಲ್.. ಪ್ರಣಿತ್ ಮೋರೆ.. ಅಮಾಲ್ ಮಲ್ಲಿಕ್.. ಕುನಿಕಾ ಸದಾನಂದ್.. ಇವರಲ್ಲಿ ಗೆಲ್ಲುವರು ಯಾರು..? ''ಬಿಗ್ ಬಾಸ್-19'' ಟ್ರೋಫಿ ಯಾರ ಪಾಲಾಗುತ್ತೆ ಎಂಬ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.


Click it and Unblock the Notifications











