'ಬ್ರಹ್ಮಾಸ್ತ್ರ': ಅಣ್ಣನ ಮನೆಯಲ್ಲಿ ಸಂಭ್ರಮಿಸಬೇಕಾಗಿದ್ದ ತಂಗಿ ಸತ್ತು ಹೋದಳೇ.?
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿ ದಿನೇ ದಿನೇ ಕುತೂಹಲ ಕೆರಳಿಸುತ್ತಿದೆ. ಇನ್ನೇನು 'ಸಂತು-ಶಿವರಂಜನಿ' ಮದುವೆ ಸಂತಸದಿಂದ ನಡೆದೇ ಹೋಯ್ತು ಎನ್ನುವಷ್ಟರಲ್ಲಿ ರೋಚಕ ತಿರುವು ಲಭಿಸಿದೆ.
ಸಂತು-ಶಿವರಂಜಿನಿಯ ಪ್ರೀತಿಗೆ ನಾಯಕನ ಮನೆಯವರು ಒಪ್ಪಿದರೂ ನಾಯಕಿಯ ಮನೆಯವರು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕಾರಣ ನಾಯಕಿಯ ಮನೆಯಲ್ಲಿ ಪ್ರೀತಿ ಪ್ರೇಮಕ್ಕೆ ಜಾಗವಿಲ್ಲ.
ಇವೆಲ್ಲದರ ನಡುವೆ ಸಂತು ಕೆಲಸದವನಾಗಿ ಬಂದು ಎಲ್ಲರ ಮನಗೆದ್ದು ಶಿವರಂಜಿನಿಯನ್ನ ಅವರೇ ಇವನಿಗೆ ಮದ್ವೆ ಮಾಡಿಸಿಕೊಡುವಷ್ಟರ ಮಟ್ಟಿಗೆ ಸುಳ್ಳುಗಳ ಕಥೆಯನ್ನೇ ಕಟ್ಟಿರುತ್ತಾನೆ. ಇದರ ಪರಿಣಾಮವಾಗಿ ಸಂತು ಕಷ್ಟದಲ್ಲಿ ಸಿಲುಕಿದ್ದಾನೆ. ಮುಂದೆ ಓದಿರಿ...

ಸತ್ಯ ಹೇಳುವ ಹಾಗಿಲ್ಲ.!
ಈ ಹಿಂದೆ ಪ್ರೀತಿಸಿ ಓಡಿ ಹೋಗಿರುವ ಅವನ ತಾಯಿ ಮೇಲೆ ಅಲಮೇಲಮ್ಮನಿಗೆ ಸಿಟ್ಟು ಇರುವ ಕಾರಣ, ‘ಶಿವರಂಜಿನಿ ತನ್ನ ಸೋದರ ಅತ್ತೆಯ ಮಗಳೆಂದು' ಸಂತು ಹೇಳುವಂತಿಲ್ಲ.

ಸಂತುಗೆ ಆತಂಕ
ಸಂತು ಜೊತೆ ಮಾರುವೇಷದಲ್ಲಿ ಬಂದಿರುವ ಖುಷಿ ಮತ್ತು ಆನಂದ್ ತನ್ನ ಒಡಹುಟ್ಟಿದವರೆಂಬ ಸತ್ಯ ಯಾರಿಗೂ ಗೊತ್ತಾಗುವಂತಿಲ್ಲ. ಹೀಗಿರುವಾಗ ಖುಷಿ ಕಾಣೆಯಾಗಿದ್ದಾಳೆ. ಈ ಸಮಯದಲ್ಲಿ ತಾನು ಶಿವರಂಜಿನಿಯನ್ನ ಮದುವೆಯಾಗುವುದು ಹೇಗೆ ಎಂಬ ಆತಂಕ ಸಂತುಗೆ ಕಾಡುತ್ತಿದೆ.

ಖುಷಿ ಸತ್ತು ಹೋದಳೇ.?
ಖುಷಿಯನ್ನ ಅಪಹರಿಸಿರೋದು ಯಾರೆಂಬುದೇ ಗೊತ್ತಿಲ್ಲ. ಆದರೆ ಹೇಗೋ ಪಾಪಿಗಳ ಕೈಯಿಂದ ತಪ್ಪಿಸಿಕೊಂಡು ಬಂದಿರುವ ಖುಷಿಗೆ ಆಕ್ಸಿಡೆಂಟ್ ಆಗುತ್ತದೆ. ಅಣ್ಣನ ಮದುವೆ ಮನೆಯಲ್ಲಿ ಸಂಭ್ರಮಿಸಬೇಕಾಗಿದ್ದ ತಂಗಿ ಮಸಣ ಸೇರುವಳೇ?

ಏನು ಅನಾಹುತ ಕಾದಿದ್ಯೋ.?
ಮೊದಲೇ ಒದ್ದಾಡುತ್ತಿರುವ ಸಂತು ಈಗ ಶಾಶ್ವತವಾಗಿ ತಂಗಿಯನ್ನು ಕಳ್ಕೊಂಡಿರೋ ಸುದ್ದಿ ಕಿವಿಗೆ ಬಿದ್ದರೆ ಅವನು ಏನು ಅನಾಹುತ ಮಾಡಿಕೊಳ್ಳುತ್ತಾನೋ? ಇಲ್ಲಿಯವರೆಗೂ ನಾಟಕ ಮಾಡಿ ಎರಡು ಮನೆಯವರನ್ನ ಸೇರಿಸಿ ಜೊತೆಯಾಗಿ ಬಾಳೋಣ ಅಂತಿದ್ದ ಶಿವರಂಜಿನಿ ಕನಸು ಕನಸಾಗಿಯೇ ಉಳಿಯುವುದೇ?

ರೋಚಕ ಘಟ್ಟದಲ್ಲಿ ಧಾರಾವಾಹಿ
ರೋಚಕ ಘಟ್ಟದಲ್ಲಿ ಇರುವ 'ಬ್ರಹ್ಮಾಸ್ತ್ರ' ಧಾರಾವಾಹಿ ಇಂದು ರಾತ್ರಿ 8 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಇಂದು ಇನ್ನೇನು ತಿರುವು ಕಾದಿದ್ಯೋ, ನೀವೇ ನೋಡಿ...


Click it and Unblock the Notifications











