'ಬ್ರಹ್ಮಾಸ್ತ್ರ': ಮದುವೆ ಮನೆಯಿಂದ ಮದುಮಗನೇ ನಾಪತ್ತೆ.!
ಉದಯ ಟಿವಿಯಲ್ಲಿ ಮೂಡಿಬರುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯ ಸಂತು-ಶಿವರಂಜಿನಿ ಮ್ಯಾರೇಜ್ ಸ್ಟೋರಿ ದಿನೇ ದಿನೇ ರೋಚಕ ತಿರುವುಗಳನ್ನು ಪಡೆಯುತ್ತಿದೆ.
ಮದುವೆಯಾಗಲು ತಡೆಯಾಗಿದ್ದ ತಂಗಿ ಖುಷಿಯ ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತು ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಸಂತು ತಂಗಿ ಖುಷಿ ಬದುಕಿದ್ದಾಳೆಂಬ ಸತ್ಯ ಬಯಲಾಗಿದೆ.
ತನ್ನ ತಂಗಿಯನ್ನ ಕಾಪಾಡಲು ಮದುವೆ ಮನೆಯಿಂದಲೇ ಓಡಿ ಹೋಗಿದ್ದಾನೆ ಸಂತು. ಮದುವೆ ಮನೆಯಲ್ಲಿ ಮದುಮಗನೇ ಕಾಣಿಸುತ್ತಿಲ್ಲವೆಂದಾಗ ಅಲಮೇಲಮ್ಮ ಕೋಪಗೊಳ್ಳುತ್ತಾಳೆ. ಸಂತುನ ಹುಡುಕಿಸಲು ಜನರನ್ನ ಕಳುಹಿಸುತ್ತಾಳೆ.

ಅತ್ತ ಬಾಬುರೆಡ್ಡಿಗೆ ಸಂತು ತಪ್ಪಿಸಿಕೊಂಡಿರುವ ಸುದ್ದಿ ಕೇಳಿ ಭಯ ಶುರುವಾಗುತ್ತದೆ. ಏನೂ ತೋಚದೆ ಅವನ ತಂಗಿಯನ್ನ ಸಾಯಿಸುವ ನಿರ್ಧಾರ ಮಾಡುತ್ತಾನೆ.
ಇಂತಹ ಪರಿಸ್ಥಿತಿಯಲ್ಲಿ ಸಂತು ತನ್ನ ತಂಗಿಯನ್ನ ಹೇಗೆ ಕಾಪಾಡುತ್ತಾನೆ.?
ಇದರ ನಡುವೆ ಶಿವರಂಜಿನಿಯನ್ನ ಮದುವೆಯಾದರೇ ಸಂತು ಸತ್ತು ಹೋಗುತ್ತಾನೆ ಎಂಬ ಜ್ಯೋತಿಷಿಯ ನುಡಿಗೆ ಭಯ ಪಡುವ ತಾಯಿ ಕೃಷ್ಣವೇಣಿ ನೇರವಾಗಿ ಮದುವೆ ನಿಲ್ಲಿಸಲು ಬರುತ್ತಿದ್ದಾಳೆ. ಎಲ್ಲಾ ಅಡೆ-ತಡೆಗಳ ಮಧ್ಯೆ ಸಂತು ಶಿವರಂಜಿನಿಯ ಮದುವೆ ನಡೆಯುತ್ತಾ ಅನ್ನೋದೇ ಮುಂದಿನ ಕುತೂಹಲ ಘಟ್ಟ.
ವೀಕ್ಷಿಸಿ 'ಬ್ರಹ್ಮಾಸ್ತ್ರ' ಇಂದು (25.09.18) ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ.


Click it and Unblock the Notifications











