'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?
ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಬ್ರಹ್ಮಾಸ್ತ್ರ' ಧಾರಾವಾಹಿಯಲ್ಲಿ ರೋಚಕ ತಿರುವು ಸಿಗುವ ಸೂಚನೆ ಸಿಕ್ಕಿದೆ.
ಪ್ರೀತಿಸುತ್ತಿರುವ ಶಿವರಂಜಿನಿಗಾಗಿ ಮನೆಗೆಲಸದವನಾಗಿ ಬಂದು, ಎಲ್ಲರ ಮನವೊಲಿಸಿ ಹಲವಾರು ಕಥೆ ಕಟ್ಟಿ, ಸಂತು ಕೊನೆಗೂ ಅವಳನ್ನ ಮದುವೆಯಾಗಲು ಮುಂದಾಗುತ್ತಾನೆ.
ಆದರೆ ಅಷ್ಟರಲ್ಲೇ ತಂಗಿ ಖುಷಿಯ ಕಿಡ್ನ್ಯಾಪ್ ಆಗಿ ಸಂಭ್ರಮವನ್ನ ಸಂಭ್ರಮಿಸಲಾಗದೇ ಒದ್ದಾಡುತ್ತಿರುತ್ತಾನೆ. ಮದುವೆ ಮನೆಯಂತೆ ಅಲಂಕಾರಗೊಂಡಿರುವ ರೂಮು, ಒಬ್ಬ ಪುರೋಹಿತ, ಹೋಮಕುಂಡ ಇವೆಲ್ಲವನ್ನ ನೋಡಿ ಬಂಧಿಯಾಗಿರುವ ಖುಷಿ ಗಾಬರಿಯಾಗುತ್ತಾಳೆ.
ತಾನೆಲ್ಲಿರುವೆ ಎಂಬ ಗೊಂದಲದ ನಡುವೆ ಮಂತ್ರ ಹೇಳುತ್ತಿರುವ ಪುರೋಹಿತನಲ್ಲಿ ಕೇಳಿದಾಗ ಇದು ತನ್ನದೇ ಮದುವೆ ಎಂಬ ಆಘಾತ ಅವಳಿಗೆ ಆಗುವುದು. ಅವಳನ್ನ ಅಪಹರಿಸಿರುವುದು ಯಾರು?

ಗೊಂದಲದಲ್ಲಿ ಸಂತು
ಖುಷಿ ಎಲ್ಲಿರುವಳೆಂದು ಸಂತು ಗೊಂದಲದಲ್ಲಿ ಕಂಗಾಲಾಗಿದ್ದಾನೆ. ಅವನ ದುಗುಡ ಬೇಸರವನ್ನ ಕಂಡ ವೀರ ಪ್ರತಾಪನಿಗೆ ಈ ಮದುವೆ ನಿಂತು ಹೋಗಿ ಅಲಮೇಲಮ್ಮನ ಮಾನ ಮರ್ಯಾದೆ ಹೋಗುವುದೆಂಬ ಆತಂಕ. ಹಾಗಾಗಿ ಸಂತು ಬಳಿ ಬಂದು ಮದುವೆ ನಡೆಯದೇ ಹೋದರೆ ಕೊಲೆ ಮಾಡುವುದಾಗಿ ಅವನನ್ನ ಅಲಮೇಲಮ್ಮ ಬೆದರಿಸುತ್ತಾಳೆ.

ಫಜೀತಿಗೆ ಸಿಕ್ಕಿಬಿದ್ದ ಸಂತು
ಸಾವಿರ ಸುಳ್ಳು ಹೇಳಿ ಮದುವೆ ಮಾಡು ಎಂಬಂತೆ ಇಲ್ಲಿ ಸಂತು ಹಲವಾರು ಕಥೆ ಕಟ್ಟಿ ಇವಾಗ ಫಜೀತಿಗೆ ಸಿಕ್ಕಿಬಿದ್ದಿದ್ದಾನೆ. ಈ ಎಲ್ಲ ಆಘಾತಕಾರಿ ಬೆಳವಣಿಗೆ ಕಂಡು, ಇಲ್ಲಿಯವರೆಗೂ ಆಡಿದ ನಾಟಕವನ್ನೆಲ್ಲ ಅಲಮೇಲಮ್ಮನಿಗೆ ಹೇಳಿ ಈ ಮದುವೆ ಮುರಿದು ತಂಗಿನ ಹುಡುಕುವ ನಿರ್ಧಾರ ಮಾಡುತ್ತಾನೆ ಸಂತು.

ಅಲಮೇಲಮ್ಮ ಸುಮ್ಮನೆ ಬಿಡ್ತಾಳಾ.?
ತನ್ನ ಬದ್ಧ ವೈರಿ ಕೃಷ್ಣವೇಣಿಯ ಮಗ ಸಂತು ಎಂದು ಗೊತ್ತಾದರೆ ಅಲಮೇಲಮ್ಮ ಅವನನ್ನ ಸುಮ್ಮನೆ ಬಿಡುವಳೇ? ಸಂತು ಈ ಇಲ್ಲ ಚಕ್ರವ್ಯೂಹದಿಂದ ಹೇಗೆ ಹೊರಬರುತ್ತಾನೆ ಅನ್ನೋದೇ ಸದ್ಯದ ಕುತೂಹಲ.

ಪ್ರಸಾರ ಯಾವಾಗ.?
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಬ್ರಹ್ಮಾಸ್ತ್ರ' ಸಂಚಿಕೆಯಲ್ಲಿ ಇಂದು ದೊಡ್ಡ ತಿರುವು ಸಿಗಲಿದೆ. ವೀಕ್ಷಿಸಿ ಇಂದು ರಾತ್ರಿ 8 ಗಂಟೆಗೆ


Click it and Unblock the Notifications











