twitter
    For Quick Alerts
    ALLOW NOTIFICATIONS  
    For Daily Alerts

    'ಉದಯ ಉಡುಗೊರೆಗಳ ಉತ್ಸವ': ಕೋಟಿ ಮೌಲ್ಯದ ಉಡುಗೊರೆ ಗೆಲ್ಲಲು ಉದಯ ಟಿವಿ ನೋಡಿ

    By ಫಿಲ್ಮಿಬೀಟ್ ಡೆಸ್ಕ್
    |

    ಹಬ್ಬಗಳಿಗೂ ಸಿನಿಮಾ, ಟಿವಿಗೂ ಇರುವ ನಂಟನ್ನು ವಿಶೇಷವಾಗಿ ಹೇಳಬೇಕಿಲ್ಲ. ಹಬ್ಬಗಳಿಗೆ ಹೊಸ ಸಿನಿಮಾ ಬಿಡುಗಡೆ ಆಗುವುದು, ಜನಪ್ರಿಯ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾಗುವುದು. ಟಿವಿಗಳಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುವುದು ಬಹು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಈ ಬಾರಿ ಕೋವಿಡ್ ಕಾರಣಕ್ಕೆ ಚಿತ್ರಮಂದಿರಗಳು ಪೂರ್ಣ ತೆರೆದಿಲ್ಲವಾದ್ದರಿಂದ ಹಬ್ಬದ ಸಂದರ್ಭದಲ್ಲಿ ಮನರಂಜನೆಗೆ ಟಿವಿಗಳನ್ನು ನೆಚ್ಚಿಕೊಂಡಿದ್ದಾರೆ ಪ್ರೇಕ್ಷಕರು.

    ಹಬ್ಬಗಳಿಗೆ ವಿಶೇಷ ಕಾರ್ಯಕ್ರಮ ಕಟ್ಟಿಕೊಡುವುದರಲ್ಲಿ ಉದಯ ಟಿವಿ ಮುಂದಿದ್ದು, ಬಹು ವರ್ಷಗಳಿಂದಲೂ ಹಬ್ಬದ ಸಂಚಿಕೆಗಳನ್ನು ಆಕರ್ಷಣೀಯವಾಗಿ, ಕುಟುಂಬಗಳು ಮೆಚ್ಚುವಂತೆ ರೂಪಿಸುತ್ತಾ ಬಂದಿದೆ. ಈ ಕಾರ್ಯವನ್ನು ಅದು ಕಳೆದ 27 ವರ್ಷಗಳಿಂದಲೂ ಮಾಡುತ್ತಾ ಬಂದಿರುವುದು ವಿಶೇಷ.

    ಪ್ರತಿವರ್ಷದಂತೆ ಈ ವರ್ಷವೂ ಉದಯ ಟಿ.ವಿ. ಧಾರಾವಾಹಿಗಳಲ್ಲಿ ಭಕ್ತಿ ಭಾವದ, ರಂಗುರಂಗಿನ, ಸಾಮಾಜಿಕ ಸಂದೇಶ ಸಾರುವ ಗಣೇಶೋತ್ಸವ ಯೋಜಿಸಲಾಗಿದೆ. ಕೊರೊನಾ ಸಂಕ್ರಮಣ ಕಾಲವನ್ನು ಗಮನದಲ್ಲಿ ಇರಿಸಿಕೊಂಡು ಗೌರಿ-ಗಣೇಶ ಹಬ್ಬ ಆಚರಿಸಿ ಮನರಂಜನೆಯ ಜೊತೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ.

     Udaya Tv Bringing Special Programs For Ganesha Festival

    ಸಂಜೆ 6 ಗಂಟೆಗೆ ಪ್ರಸಾರವಾಗುವ ʻಯಾರಿವಳುʼ ಧಾರಾವಾಹಿಯಲ್ಲಿ ಕಷ್ಟದಲ್ಲಿರುವ ನಿಜ ಭಕ್ತರಿಗೆ ಭಗವಂತ ಯಾವುದೋ ರೂಪದಲ್ಲಿ ಬಂದು ಸಹಾಯ ಮಾಡುತ್ತಾನೆ ಎಂಬ ಸಂದೇಶವಿದೆ. ನಾಯಕಿ ಮಾಯಾಳ ಪರಿಸ್ಥಿತಿಯನ್ನು ಈ ಸಂದರ್ಭದಲ್ಲಿ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

    ಸಂಜೆ 6:30ಕ್ಕೆ ಪ್ರಸಾರವಾಗುವ ʻಗೌರಿಪುರದ ಗಯ್ಯಾಳಿಗಳುʼ ಧಾರಾವಾಹಿಯಲ್ಲಿ ಪರಿಸರ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದ್ದೂರಿತನ ಆಡಂಬರಕ್ಕಿಂತ ನಂಬಿಕೆಗೆ ದೇವರು ಒಲಿಯುತ್ತಾನೆ ಎಂಬ ಸಂದೇಶ ಇರಲಿದೆ. ಬೋರೇಗೌಡನ ವಿಸ್ಮೃತಿ ಸರಿಹೋಗುವುದೇ ಇದಕ್ಕೆ ಸಾಕ್ಷಿಯಾಗುತ್ತದೆ.

    ಸಂಜೆ 7 ಗಂಟೆಯ ʻಕಸ್ತೂರಿ ನಿವಾಸʼ ಧಾರಾವಾಹಿ ಕೂಡು ಕುಟುಂಬವೆಲ್ಲ ಸೇರಿ ಹಬ್ಬ ಮಾಡುವುದರಲ್ಲಿ ಇರುವ ಖುಷಿಯನ್ನು ವೀಕ್ಷಕರಿಗೆ ಹಂಚಲಿದೆ. ಹೊಸದಾಗಿ ಮದುವೆಯಾಗಿ ಬಂದಿರುವ ಕಿರೀ ಸೊಸೆ ಖುಷಿ ಈ ಸಲ ಹಬ್ಬದ ಸಾರಥ್ಯ ವಹಿಸುವುದು ವಿಶೇಷ.

    ಸಂಜೆ 7:30ರ ʻನೇತ್ರಾವತಿʼಯಲ್ಲಿ ನೇತ್ರಾ ತನ್ನ ಅಕ್ಕನ ಒಳಿತಿಗಾಗಿ ಗೌರಿಪೂಜೆ ಮಾಡಿಸುತ್ತಾಳೆ. ಸುಖ-ದುಃಖದಲ್ಲಿ ಅಕ್ಕ-ತಂಗಿಯರೇ ಒಬ್ಬರಿಗೊಬ್ಬರು ಆಸರೆ ಆಗಬೇಕಿದೆ ಎಂಬುದು ಗೌರಿ ಹಬ್ಬದ ಮೂಲಕ ಬಿಂಬಿತವಾಗಲಿದೆ.

    ರಾತ್ರಿ ೮:೦೦ ಗಂಟೆಯ ʻಸುಂದರಿʼಯಲ್ಲಿ ಸುಂದರಿ ತನ್ನ ಸವತಿಗಾಗಿ ಗಣೇಶನಲ್ಲಿ ಪ್ರಾರ್ಥಿಸುವ ಮೂಲಕ, ತ್ಯಾಗವೇ ಜೀವನದ ಸಾರ್ಥಕತೆ ಎಂಬ ಸಂಕೇತ ಗಣೇಶನ ಹಬ್ಬದ ಸಂದರ್ಭ ಪ್ರತಿಧ್ವನಿಸಲಿದೆ.

    ರಾತ್ರಿ 8:30ರ ʻಕಾವ್ಯಾಂಜಲಿʼಯಲ್ಲಿ ಕಾವ್ಯ ಹಾಗೂ ಅಂಜಲಿಯರ ಸ್ನೇಹದ ಸಂಕೇತವಾಗಿ ಗಣೇಶೋತ್ಸವ ಮೂಡಿಬರಲಿದೆ. ಸಾವೇ ಬಂದರೂ ಸ್ನೇಹ ಸಾಯದು ಎಂಬ ಸಂದೇಶ ಗಣೇಶನ ಹಬ್ಬದಲ್ಲಿ ವ್ಯಕ್ತವಾಗಲಿದೆ.

    ರಾತ್ರಿ 9ಗಂಟೆಗೆ ಪ್ರಸಾರವಾಗುವ ʻಮನಸಾರೆʼಯಲ್ಲಿ ತಂದೆಯ ಪ್ರೀತಿಗೋಸ್ಕರ ಹಂಬಲಿಸುವ ನಾಯಕಿ ಪ್ರಾರ್ಥನಾ ಅಂತಿಮವಾಗಿ ಗಣೇಶನ ಮೊರೆ ಹೋಗುತ್ತಾಳೆ. ಅಪ್ಪ-ಮಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

    ರಾತ್ರಿ 9:30ರ ʻನಯನತಾರಾʼದಲ್ಲಿ ನಾಯಕಿ ನಯನಾ ಗಣೇಶನ ಹಬ್ಬದ ಆಚರಣೆ ಹೇಳಿಕೊಟ್ಟು ರೌಡಿಗಳ ಮನಃಪರಿವರ್ತನೆ ಮಾಡುತ್ತಾಳೆ. ಕ್ರೌರ್ಯವೇ ಜೀವನವಲ್ಲ; ಸಾಮರಸ್ಯವೇ ಜೀವನ ಎಂಬ ಸಂದೇಶ ಮೂಡಿಬರಲಿದೆ.

    ಇನ್ನೊಂದು ವಿಶೇಷವೆಂದರೆ, ಈ ಸಲ ಹಬ್ಬದ ಋತುವಿನಲ್ಲಿ ಉದಯ ಟಿ.ವಿ. ವೀಕ್ಷಕರಿಗಾಗಿ ಕೋಟಿ ಮೌಲ್ಯದ ಉಡುಗೊರೆಗಳನ್ನೂ ನೀಡುತ್ತಿದೆ. ಧಾರಾವಾಹಿಗಳ ಕುರಿತು ಕೇಳಲಾಗುವ ಸರಳ ಪ್ರಶ್ನೆಗಳಿಗೆ ಸರಿ ಉತ್ತರ ಕಳಿಸುವ ವೀಕ್ಷಕರಲ್ಲಿ ಪ್ರತಿ ದಿನ 100 ಅದೃಷ್ಟಶಾಲಿಗಳಿಗೆ ನಗದು ಬಹುಮಾನ, ಚಿನ್ನದ ನಾಣ್ಯಗಳು, ವಜ್ರದ ಉಂಗುರಗಳು ದೊರೆಯಲಿವೆ. ಇದು ವೀಕ್ಷಕರು ವಾಹಿನಿಯ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕೃತಜ್ಞತೆ ತೋರುವ ಸಂಕೇತವಾಗಿದೆ. ಈ ʻಉದಯ ಉಡುಗೊರೆಗಳ ಉತ್ಸವʼ ಸೆಪ್ಟೆಂಬರ್ 6 ರಿಂದ ನಾಲ್ಕು ವಾರಗಳ ಕಾಲ ನಡೆಯಲಿರುವುದು ವಿಶೇಷ. ಈ ಉಡುಗೊರೆಗಳು ಉದಯ ವೀಕ್ಷಕರಿಗೆ ಹಬ್ಬದ ಋತುವನ್ನು ಸ್ಮರಣೀಯವಾಗಿಸಲಿದೆ.

    English summary
    Udaya Tv bringing special programs for this Ganesha festival. Udaya Tv conducting a quiz where it is giving away prizes worth 1 crore rs.
    Thursday, September 2, 2021, 9:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X