ಈ ವರ್ಷ ಉದಯ ಟಿವಿಯಲ್ಲಿ ಯುಗಾದಿ ಸಂಭ್ರಮ ಬಲು ಜೋರು

ಉದಯ ಟಿವಿ ಈ ಸಲ ಯುಗಾದಿ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಿಕೊಂಡಿದೆ. ಯುಗಾದಿ ಹಬ್ಬ ಹೊಸ ಸಂವತ್ಸರದ ಜೊತೆಜೊತೆಗೆ ಬದುಕಲ್ಲು ಹೊಸ ಚೈತನ್ಯ ತುಂಬುವ ಹಬ್ಬ. ಭೂಮಿಯ ಮೇಲಿನ ಪ್ರತಿ ಜೀವಿಗು ಹೊಸತರ ಆರಂಭ. ಹಾಗಾಗಿಯೇ ಬದುಕು ಸಿಹಿಕಹಿಗಳ ಸಮ್ಮಿಲನವಾಗಲಿ ಎಂದು ಯುಗಾದಿ ಹಬ್ಬದ ದಿನ ಬೇವು ಬೆಲ್ಲವನ್ನು ಕೊಡುತ್ತಾರೆ.

ಈ ಯುಗಾದಿಯನ್ನ ಉದಯ ಟಿವಿ ಮಜುಬೂತಾಗಿಯೇ ಆಚರಿಸಿದೆ ಶಿವಮೊಗ್ಗೆಯಲ್ಲಿ. ಹೌದು ಉದಯ ಟಿವಿಯ ತಾರೆಯರು ಹಾಡುತ್ತಾ, ಕುಣಿಯುತ್ತಾ, ನಲಿಯುತ್ತಾ , ನಲಿಸುತ್ತಾ ಹೊಸ ಸಂವತ್ಸರಕ್ಕೆ ಸ್ವಾಗತವನ್ನು ಕೋರಿದ್ದಾರೆ. ನಿತ್ಯಾರಾಮ್ ಮತ್ತು ಜಯಶ್ರಿಯವರ ಪರ್ಫಾಮೆನ್ಸ್ ಅಂತು ವೀಕ್ಷಕರ ನಾಡಿಬಡಿತವನ್ನು ಜಾಸ್ತಿ ಮಾಡಿದ್ದರಲ್ಲಿ ಸುಳ್ಳಿಲ್ಲ ಇವರ ಜೊತೆ ದನಿಯಾದವರು ಕನ್ನಡದ ಹೆಮ್ಮೆಯ ಗಾಯಕ ರಾಜೇಶ್ ಕೃಷ್ಣನ್ ಮತ್ತು ಗಾಯಕಿ ಅನುರಾಧಾ ಭಟ್.

Udaya tv celebrates ugadi festival

70ರ ದಶಕದ ಗೋಲ್ಡನ್ ಹಿಟ್ಸ್ ಹಾಡನ್ನು ಹಾಡುತ್ತಾ ವೀಕ್ಷಕರನ್ನು ಸಂಗೀತ ಸಾಗರದಲ್ಲಿ ತೇಲಿಸಿದರು. ಇವರೆಲ್ಲರ ಜೊತೆಜೊತೆಯಲಿ ಕಿಸ್ ತಂಡದ ಕಲಾವಿದರು ಕೂಡ ಹೆಜ್ಜೆ ಹಾಕಿದ್ದಾರೆ. ಇದಿಷ್ಟೇ ಅಲ್ಲ ಶನಿವಾರ ಬೆಳಿಗ್ಗೆ ಹನ್ನೊಂದಕ್ಕೆ 'ಹಳ್ಳಿಯಲ್ಲಿ ಯುಗಾದಿ' ಸ್ಪೆಷಲ್ ಪ್ರೋಗ್ರಾಮ್ ಕೂಡ ಪ್ರಸಾರವಾಗಲಿದೆ.

Udaya tv celebrates ugadi festival

ಹಳ್ಳಿಗರ ಜೊತೆ ಉದಯ ತಾರೆಯರ ಗ್ರಾಮೀಣ ಕ್ರೀಡೆಗಳ ಟಾಸ್ಕ್ ಮತ್ತು ರೈತರ ಜೊತೆ ವನಭೋಜನ ಹೀಗೆ ಸಾಕಷ್ಟು ರೋಚಕತೆಯಿಂದ ಕೂಡಿದ ಕಾರ್ಯಕ್ರಮ ಇದಾಗಿದೆ. ಇಷ್ಟೆಲ್ಲ ರಸದೌತಣವಿರುವ ಯುಗಾದಿ ಸಂಭ್ರಮ ಕಾರ್ಯಕ್ರಮ ಇದೇ ಶನಿವಾರ ಮಧ್ಯಾಹ್ನ 12:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

More from Filmibeat

English summary
Kannada popular channel udaya tv celebrates ugadi festival very grandly. here is the special moments of celebration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X