'ಅಣ್ಣ-ತಂಗಿ' ಧಾರಾವಾಹಿಯ ಅಭಿಷೇಕ್ ಅಲಿಯಾಸ್ ರಾಜೇಶ್ ಧ್ರುವ ಕಿರುತೆರೆ ಜರ್ನಿ

By ಪ್ರಿಯಾ ದೊರೆ

ರಾಜೇಶ್ ಧ್ರುವ ಕಳೆದ 12 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಧಾರಾವಾಹಿ, ರಿಯಾಲಿಟಿ ಶೋಗಳಲ್ಲಿ ರಾಜೇಶ್ ಧ್ರುವ ಬಣ್ಣ ಹಚ್ಚಿದ್ದಾರೆ. ನಟಿಸುವ ಆಸೆಯಿಂದ ರಾಜೇಶ್ ಧ್ರುವ ಅವರು ದೂರದೂರಿನಿಂದ ಬೆಂಗಳೂರಿಗೆ ಬಂದು ಇಂದು ತಮ್ಮ ಆಸೆಯನ್ನು ನೆರವೇರಿಸಿಕೊಂಡಿದ್ದಾರೆ. ಮಧ್ಯಮವರ್ಗದ ರಾಜೇಶ್ ಧ್ರುವ ಅವರ ಕಿರುತೆರೆಯ ಪಯಣ ಸುಲಭವಾಗಿರಲಿಲ್ಲ.

'ಬದುಕು' ಹೆಸರಿನ ಧಾರಾವಾಹಿಯಲ್ಲಿ ರಾಜೇಶ್ ಧ್ರುವ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದ್ದರು. ಇದಾದ ಬಳಿಕ ರಾಜೇಶ್ ಧ್ರುವ ಹಿಂತಿರುಗಿ ನೋಡಿದ್ದೇ ಇಲ್ಲ. ಇನ್ನು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ರಾಜೇಶ್ ಧ್ರುವ ಅವರಿಗೆ ಹೆಸರು ತಂದು ಕೊಟ್ಟಿತ್ತು.

ರಾಜೇಶ್ ಧ್ರುವ ಅವರಿಗೆ ಮೊದಲಿನಿಂದಲೂ ನಟನೆಯ ಮೇಲೆ ಒಲವಿಟ್ಟುಕೊಂಡಿದ್ದರು. ಹಾಗಾಗಿ ತಮ್ಮೂರು ಶಿರಸಿಯಿಂದ ಬೆಂಗಳೂರಿಗೆ ಬಂದರು. 2010ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ ಹೀರೋ ನಂಬರ್ 1 ಎಂಬ ಶೋನಲ್ಲಿ ಭಾಗವಹಿದರು. ಅಲ್ಲಿಂದ ಕಿರುತೆರೆಯ ಪಯಣವನ್ನು ಆರಂಭಿಸಿದರು.

ಶ್ರುತಿ ಅವರನ್ನು ವಿವಾಹವಾದ ರಾಜೇಶ್

ಶ್ರುತಿ ಅವರನ್ನು ವಿವಾಹವಾದ ರಾಜೇಶ್

'ಬದುಕು' ಎಂಬ ಧಾರಾವಾಹಿಯಲ್ಲಿ ಮೊದಲ ಬಾರಿಗೆ ರಾಜೇಶ್ ಧ್ರುವ ನಟಿಸಿದರು. ಇದಾದ ಬಳಿಕ ಬ್ರೇಕ್ ಇಲ್ಲದಂತೆ ಒಂದಾದ ಮೇಲೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ರಾಜೇಶ್ ಧ್ರುವ ಅವರು ಶೃತಿ ಎಂಬುವರನ್ನು ಪ್ರೀತಿಸಿದ್ದರು. ಕೆಲ ಸಮಯದ ಬಳಿಕ ಮನೆಯವರ ಬಳಿ ವಿಚಾರ ತಿಳಿಸಿ ಎಲ್ಲರ ಸಮ್ಮುಖದಲ್ಲಿ 2017ರಲ್ಲಿ ವಿವಾಹವಾಗಿದ್ದರು.

ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ ಧ್ರುವ

ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ ಧ್ರುವ

'ಬದುಕು' ಧಾರಾವಾಹಿಯ ಬಳಿಕ ರಾಜೇಶ್ ಧ್ರುವ ಅವರು ಸಾಲು ಸಾಲು ಸೀರಿಯಲ್ ಗಳಲ್ಲಿ ನಟಿಸಿದರು. ಆಕಾಶದೀಪ, ಒಂದೇ ಗೂಡಿನ ಹಕ್ಕಿಗಳು, ಪ್ರೀತಿ ಎಂದರೇನು, ಸರಯೂ ಧಾರಾವಾಹಿಗಳಲ್ಲಿ ಮಿಂಚಿದರು. ಬಳಿಕ ರಾಜೇಶ್ ಅವರನ್ನು ಹುಡುಕಿಕೊಂಡು ಬಂದ ಧಾರಾವಾಹಿಯೇ ಅಗ್ನಿಸಾಕ್ಷಿ. ಈ ಧಾರಾವಾಹಿಯಲ್ಲಿ ಅಖಿಲ್ ಪಾತ್ರದಲ್ಲಿ ರಾಜೇಶ್ ಧ್ರುವ ನಟಿಸಿದರು. ಈ ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಪಡೆದರು. ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ಮೇಲೆ ಇಮದಿಗೂ ರಾಜೇಶ್ ಧ್ರುವ ಅವರನ್ನು ಅಖಿಲ್ ಎಂದೇ ಜನ ಗುರುತಿಸುತ್ತಾರೆ.

ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟ

ಕಿರುತೆರೆಯಲ್ಲಿ ಸಕ್ರಿಯರಾಗಿರುವ ನಟ

ಕಳೆದ 12 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ರಾಜೇಶ್ ಧ್ರುವ ಅವರು, ಮಿಲನ, ನಂದಿನಿ, ಅರಮನೆ ಗಿಳಿ, ನನ್ನರಸಿ ರಾಧೆ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ ಅಣ್ಣ ತಂಗಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಯಕಿ ತುಳಸಿಗೆ ಜೋಡಿಯಾಗಿ ನಾಯಕ ಅಭಿಷೇಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟನೆಯನ್ನು ಇಷ್ಟ ಪಟ್ಟು ಬಂದ ರಾಜೇಶ್ ಅವರು ಕಿರುತೆರೆಯಲ್ಲೇ ಮುಂದುವರೆಯುವ ಆಸೆಯನ್ನು ಇಟ್ಟುಕೊಂಡಿದ್ದಾರೆ.

ಡ್ಯಾನ್ಸ್ ಕ್ಲಾಸ್ ತೆರೆದಿದ್ದ ರಾಜೇಶ್

ಡ್ಯಾನ್ಸ್ ಕ್ಲಾಸ್ ತೆರೆದಿದ್ದ ರಾಜೇಶ್

ರಾಜೇಶ್ ಧ್ರುವ ಅವರು ಡ್ಯಾನ್ಸರ್ ಕೂಡ ಹೌದು. ರಾಜೇಶ್ ಧ್ರುವ ಅವರು ತಮ್ಮದೇ ಡ್ಯಾನ್ಸ್ ಕ್ಲಾಸ್ ಅನ್ನು ಕೂಡ ತೆರೆದಿದ್ದರು. ಸ್ಮೈಲ್ ಗುರು ಡ್ಯಾನ್ಸ್ ಗ್ಯಾರೇಜ್ ಎಂಬ ಡ್ಯಾನ್ಸ್ ಕ್ಲಾಸ್ ಅನ್ನು ಕೂಡ 2019ರಲ್ಲಿ ಪ್ರಾರಂಭಿಸಿದ್ದರು. ರಾಜೇಶ್ ಧ್ರುವ ನಟನೆಯ ಜೊತೆಗೆ ಡ್ಯಾನ್ಸ್ ಮಾಡುವುದು ಕೂಡ ಇಷ್ಟ. ಆದರೆ ಕೊರೊನಾ ಲಾಕ್ ಡೌನ್ ನಿಮದಾಗಿ ಡ್ಯಾನ್ಸ್ ಕ್ಲಾಸ್ ಅರ್ಧಕ್ಕೆ ನಿಂತಿತ್ತು ಎನ್ನಲಾಗಿದೆ. ಇನ್ನು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಕಿರುಚಿತ್ರವನ್ನು ಸಹ ನಿರ್ಮಿಸಿದ್ದರು. ಆ ಸಂದರ್ಭದಲ್ಲಿ ಅವರು ಅನುಭವಿಸಿದ ಕಷ್ಟಗಳ ಬಗ್ಗೆ ಮಾಧ್ಯಮದಲ್ಲಿ ಹೇಳಿಕೊಂಡಿದ್ದರು ಕೂಡ.

More from Filmibeat

English summary
small screen actor Rajesh Dhruva serial journey and her family details are here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X