For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಬಾರಿಸಿದ 'ಕ್ಷಮಾ' ಧಾರಾವಾಹಿಯ ಪ್ರಸಾರದ ಸಮಯ ಬದಲಾವಣೆ

  |

  ಆಸೆಗೆ ಜಗ್ಗದವಳು, ಸಹನೆಗೆ ಪ್ರತಿರೂಪ ಇವಳು, ನೊಂದರೂ ನಗುವನ್ನೇ ಹಂಚುವವಳು ಕ್ಷಮಾ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕ್ಷಮಾ ಧಾರಾವಾಹಿ 100 ಸಂಚಿಕೆಗಳನ್ನು ಪೂರೈಸಿ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

  ಗಂಡನಿಲ್ಲದ ಹೆಣ್ಣೊಬ್ಬಳು ಸಮಾಜದಲ್ಲಿ ಹೇಗೆಲ್ಲಾ ಪರಿಪಾಟಲುಗಳನ್ನು ಅನುಭವಿಸುತ್ತಾಳೆ ತನ್ನ ಮಕ್ಕಳನ್ನು ಬೆಳೆಸಲು ಎಷ್ಟೆಲ್ಲ ತ್ಯಾಗಗಳನ್ನು ಮಾಡುತ್ತಾಳೆ ಎನ್ನು ಕಥಾಹಂದರವನ್ನು ಹೊಂದಿರುವ ಧಾರಾವಾಹಿ ಕ್ಷಮಾ. ಈ ಧಾರಾವಾಹಿ ಉದಯ ಟಿವಿಯಲ್ಲಿ ಗಂಟೆಗೆ ಪ್ರಸಾರವಾಗುತ್ತಿದ್ದು ಈಗ ಸಮಯ ಬದಲಾಗಿದೆ.

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಕ್ಷಮಾ' ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಕ್ಷಮಾ'

  ಅಂದರೆ, ಇದೇ ಆಗಸ್ಟ್ 5 ರಿಂದ 8 ಗಂಟೆಯ ಬದಲಾಗಿ 9.30ಕ್ಕೆ ಪ್ರಸಾರವಾಗುತ್ತದೆ. ಬಿ.ಸುರೇಶ್ ಬರವಣಿಗೆಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ರಾತ್ರಿ 9.30ಕ್ಕೆ ಪ್ರಸಾರ ಆಗುವ ಕಾರಣ ವೀಕ್ಷಕ ಬಳಗವನ್ನು ಹೆಚ್ಚು ಆಗಲಿದೆ.

  ಮುಖ್ಯ ಭೂಮಿಕೆಯಲ್ಲಿ 'ಕ್ಷಮಾ' ಪಾತ್ರಧಾರಿಯಾಗಿ ಶ್ವೇತಾ ರಾವ್ ಮಾಡುತ್ತಿದ್ದು ಇತರ ತಾರಾಗಣದಲ್ಲಿ ವಿಶ್ವಾಸ್ ಭಾರದ್ವಾಜ್, ಲತಾ, ವಿಕ್ಕಿ ಮತ್ತು ಮಾಲತಿ ಮೈಸೂರು ಇದ್ದಾರೆ.

  English summary
  Udaya TV Kshama serial completes 100 episodes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X