For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆಯಂದೇ ಉದಯ ಟಿವಿಯ 'ಜನನಿ' ಜರ್ನಿ ಆರಂಭ

  |

  ಉದಯ ಟಿವಿಯಲ್ಲಿ ಈಗಾಗಲೇ ಜನಪ್ರಿಯ ಧಾರಾವಾಹಿಗಳು ಪ್ರಸಾರ ಆಗಿವೆ. 'ಸೇವಂತಿ', 'ಸುಂದರಿ', 'ನೇತ್ರಾವತಿ', 'ಗೌರಿಪುರದ ಗಯ್ಯಾಳಿಗಳು', 'ನಯನತಾರಾ', 'ರಾಧಿಕಾ', ಇಂತಹ ಹಲವು ಸೀರಿಯಲ್‌ಗಳು ಪ್ರಸಾರ ಆಗಿವೆ. ಈ ಎಲ್ಲಾ ಧಾರಾವಾಹಿಗಳು ಜನರಿಗೆ ಮನಂಜನೆಯನ್ನು ನೀಡಿವೆ. ಈಗ ಸ್ವಾತಂತ್ರ್ಯ ದಿನಾಚರಣೆಯಂದು ಹೊಚ್ಚ ಹೊಸ ಧಾರಾವಾಹಿಯನ್ನು 'ಜನನಿ' ಪ್ರಸಾರ ಮಾಡಲು ಸಜ್ಜಾಗಿ ನಿಂತಿದೆ.

  ಮನುಷ್ಯನಾಗಿ ಹುಟ್ಟಿದ ಮೇಲೆ ಎಲ್ಲರಿಗೂ ಒಂದೊಂದು ಆಸೆ, ಗುರಿ ಅನ್ನೋದು ಇದ್ದೇ ಇರತ್ತೆ . ಒಂದ್ ಹೆಣ್ಣಿಗು ಅವಳದೇ ಆದ ನೂರೆಂಟು ಕನಸು, ಆಸೆಇರತ್ತೆ. ಆದರೆ ಅವಳ ಕನಸು ಈಡೇರುವುದಕ್ಕೂ, ಅವಳ ಅಂದ್ಕೊಂಡ ಗುರಿ ಮುಟ್ಟುವುದಕ್ಕೆ ಅವಳು ಹುಟ್ಟಿದ ಮನೆಯಿಂದ ಮದುವೆ ಆಗಿ ಹೋದ ಮನೆವರೆಗೂ ಸಪೋರ್ಟ್ ಹೇಗಿರುತ್ತೆ ಇರತ್ತೆ ಅನ್ನೋದು ಮುಖ್ಯ . ಈ ಧಾರಾವಾಹಿ ಅದನ್ನೇ ತೋರಿಸಲು ಹೊರಟಿದೆ.

  'ಮರಳಿ ಮನಸಾಗಿದೆ' & 'ಬೆಟ್ಟದ ಹೂ' ಮಹಾಸಂಚಿಕೆಯಲ್ಲಿ ಒಂದಾಗುತ್ತಾರಾ ಈ ಜೋಡಿಗಳು!'ಮರಳಿ ಮನಸಾಗಿದೆ' & 'ಬೆಟ್ಟದ ಹೂ' ಮಹಾಸಂಚಿಕೆಯಲ್ಲಿ ಒಂದಾಗುತ್ತಾರಾ ಈ ಜೋಡಿಗಳು!

  ಇನ್ನು ತನಗೆ ಎದುರಾದ ಎಲ್ಲಾ ಕಷ್ಟವನ್ನು ಎದುರಿಸಲು ಹೋದರೆ ಈ ಸಮಾಜ ಅವಳನ್ನು ಹೇಗೆ ನಡೆಸಿಕೊಳ್ಳುತ್ತೆ ಅನ್ನುವುದೇ ಜನನಿ ಕಥೆ. ಇಲ್ಲಿ ಬರುವ ಕಥಾನಾಯಕಿ ಜನನಿ ಹಾಗೂ ಅವಳ ಜೊತೆಯಿರುವ ಪಾತ್ರಧಾರಿಗಳ ಮೂಲಕ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಿ, ಹೋರಾಡಿ ಹೇಗೆ ಸಾಧನೆ ಮಾಡುತ್ತಾಳೆ ಎಂಬುದನ್ನು ಧಾರಾವಾಹಿಯಲ್ಲಿ ನೋಡಬಹುದಾಗಿದೆ.

  'ಜನನಿ' ಪಕ್ಕಾ ಕೌಟುಂಬಿಕ ಧಾರಾವಾಹಿ. ಹೀಗಾಗಿ ಈ ಕಥೆಯಲ್ಲಿ ಬರುವ ಕಥಾನಾಯಕಿ ಜನನಿಯನ್ನು ಆಕೆಯ ತಂದೆ ಹೇಗೆ ಬಹಳ ಕಷ್ಟ ಪಟ್ಟು ಬೆಳಿಸಿದ್ರು. ಮಗಳು ದೊಡ್ಡ ಸಾಧಕಿಯಾಗಬೇಕೆಂದು ಕಂಡ ಕನಸು ಏನಾಯ್ತು? ವಿದ್ಯಾಭ್ಯಾಸ ಮುಗಿದ ತಕ್ಷಣವೇ ಕಾರಣಾಂತರಗಳಿಂದ ಅವಳ ಮದುವೆಯಾಗಿ ಗಂಡನ ಮನೆಗೆ ಹೋದಾಗ ಅಲ್ಲಿ ಏನಾಗುತ್ತೆ ಅನ್ನೋದು ಆಗಸ್ಟ್ 15 ರಿಂದ ತಿಳಿಯುತ್ತಾ ಹೋಗುತ್ತೆ.

  Udaya TV launching New Serial Janani From August 15th

  ಜನನಿ ಧಾರಾವಾಹಿಯನ್ನು ಚಿ.ಗುರುದತ್ ನಿರ್ಮಾಣ ಸಂಸ್ಥೆ ಶಾರದಾಸ್ ಸಿನಿಮಾಸ್ ನಿರ್ಮಾಣ ಮಾಡುತ್ತಿದೆ. ಹೊನ್ನೇಶ್ ರಾಮಚಂದ್ರಯ್ಯ ಜನನಿ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಥಾ ನಾಯಕಿಯಾಗಿ ವರ್ಷಿಕಾ ನಟಿಸುತ್ತಿದ್ದಾರೆ. ಹಾಗೆ ನಾಯಕಿಯ ತಂದೆ ಹಾಗೂ ತಾಯಿಯಾಗಿ ಪ್ರದೀಪ್ ತಿಪಟೂರ್ ಮತ್ತು ದಿವ್ಯಾ ಗೋಪಾಲ್ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕನಾಗಿ ಮಂಗಳೂರು ಪ್ರತಿಭೆ ಕಿರಣ್ ಹಾಗೂ ನಾಯಕನ ತಾಯಿಯಾಗಿ ಪುಷ್ಪ ಸ್ವಾಮಿ ಇದ್ದಾರೆ. ಮಾಂಗಲ್ಯ ಧಾರಾವಾಹಿ ಖ್ಯಾತಿಯ ಮುನಿ ಅವರು ನಾಯಕನ ಅಣ್ಣನಾಗಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಣ್ , ಅರುಣ್ , ಶ್ವೇತಾ , ರೂಪ , ಶಿಲ್ಪ ಅಯ್ಯರ್ ನಟಿಸುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಜನನಿ' ಆಗಸ್ಟ್ 15ದ ರಿಂದ ಪ್ರಸಾರ ಆಗುತ್ತಿದೆ.

  English summary
  Udaya TV launching New Serial Janani From August 15th, Know More
  Tuesday, August 9, 2022, 23:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X