For Quick Alerts
  ALLOW NOTIFICATIONS  
  For Daily Alerts

  ಉದಯ ಟಿವಿಯಲ್ಲಿ ಇದೇ ಸೋಮವಾರದಿಂದ ಮಹಾಸಂಚಿಕೆಗೆಳ ಮಹಾವಾರ.!

  By Harshitha
  |

  ಜೂನ್ ತಿಂಗಳಿನಲ್ಲಿ ಮನರಂಜನೆಯ ಪಾಕವನ್ನೇ ಉಣಬಡಿಸುತ್ತಿದೆ ನಿಮ್ಮ ನೆಚ್ಚಿನ ಉದಯ ಟಿವಿ. ಇದೇ ಸೋಮವಾರದಿಂದ ಶುಕ್ರವಾರದವರೆಗೂ ಮಹಾ ಸಂಚಿಕೆಯ ರೂಪದಲ್ಲಿ ವೀಕ್ಷಕರಿಗೆ ಧಾರಾವಾಹಿಗಳು ರಸದೌತಣ ನೀಡಲಿವೆ.

  'ಜೋ ಜೋ ಲಾಲಿ', 'ಕಾವೇರಿ', 'ನಂದಿನಿ', 'ಜೀವನದಿ' ಮತ್ತು 'ಮಾನಸ ಸರೋವರ' ಧಾರಾವಾಹಿಗಳ ಮಹಾಸಂಚಿಕೆ ಒಂದು ವಾರ ಕಾಲ ಪ್ರಸಾರ ಆಗಲಿದೆ.

  'ಜೋ ಜೋ ಲಾಲಿ' ಮಹಾಸಂಚಿಕೆ (ಜೂನ್ 18 ಸೋಮವಾರ ಸಂಜೆ 6:30ಕ್ಕೆ)

  ಪ್ರೀತಂ ಮಾಧವನ ಮನೆಗೆ ಹೋಗಿ ರಾಧಾಳ ಗಂಡ ಯಾರೆಂದು ವಿಚಾರಿಸುತ್ತಾನೆ. ರಾಧಾ ದುಃಖದಲ್ಲಿರುವುದನ್ನು ನೋಡಲಾರದೆ ರುಕ್ಮಿಣಿ - ಮಾಧವ ಅವಳನ್ನು ಪಿಕ್ನಿಕ್ ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ರಾಧಾ ಚೇತನ್ ನ ಆಕಸ್ಮಿಕವಾಗಿ ನೋಡುತ್ತಾಳೆ. ರುಕ್ಮಿಣಿ ಚೇತನ್ ಮತ್ತು ರಾಧಾರನ್ನು ಒಂದು ಮಾಡಲು ಪ್ರಯತ್ನಿಸುತ್ತಾಳೆ. ರುಕ್ಮಿಣಿಯ ಈ ಉಪಾಯ ಸಫಲವಾಗತ್ತಾ? ವೀಕ್ಷಿಸಿ 'ಜೋ ಜೋ ಲಾಲಿ' ಮಹಾಸಂಚಿಕೆ.

  ಉದಯ ಕಾಮಿಡಿಯಲ್ಲಿ ಪಂಚುಗಳ ಮಿಂಚು 'ಕಾಮಿಡಿ ಜಂಕ್ಷನ್'ಉದಯ ಕಾಮಿಡಿಯಲ್ಲಿ ಪಂಚುಗಳ ಮಿಂಚು 'ಕಾಮಿಡಿ ಜಂಕ್ಷನ್'

  'ಕಾವೇರಿ' ಮಹಾಸಂಚಿಕೆ (ಜೂನ್ 19 ಮಂಗಳವಾರ ರಾತ್ರಿ 7ಕ್ಕೆ )

  ಮನೆಯಲ್ಲಿ ಸಂತೋಷ್-ಅಮೂಲ್ಯ ಮದುವೆಯ ಅಂಗವಾಗಿ ದೇವರ ಪೂಜೆ ಏರ್ಪಡಿಸಿರುತ್ತಾರೆ. ಆದರೆ ಪೂಜೆ ಶುರುವಾಗಬೇಕು ಎನ್ನುವಷ್ಟರಲ್ಲಿ ಅಮೂಲ್ಯ ಕಾಣೆಯಾಗುತ್ತಾಳೆ. ಅನಾಮಿಕ ಕರೆಯಿಂದ ಅಮೂಲ್ಯಾಳನ್ನು ಯಾರೋ ಅಪಹರಿಸಿದ್ದಾರೆ ಎಂದು ತಿಳಿಯುತ್ತದೆ. ಕಾವೇರಿ ತಾನು ಹೋಗಿ ಅವಳನ್ನು ದುಷ್ಟರ ಕೈಯಿಂದ ಬಿಡಿಸಿಕೊಂಡು ಬರುವುದಾಗಿ ಹೊರಡುತ್ತಾಳೆ. ಕಾವೇರಿ ಈ ಸಮಸ್ಯೆಗಳ ಮಧ್ಯೆ ತನ್ನ ಪ್ರಾಣಕ್ಕೆ ಕುತ್ತು ತಂದ್ಕೊತಾಳಾ? ವೀಕ್ಷಿಸಿ ಕಾವೇರಿ ಮಹಾಸಂಚಿಕೆ.

  ಉದಯ ಟಿವಿಗೆ 24ರ ಹರೆಯ: 4 ಧಾರಾವಾಹಿಗಳಲ್ಲಿ ದಾಖಲೆಯ ಸಂಭ್ರಮಉದಯ ಟಿವಿಗೆ 24ರ ಹರೆಯ: 4 ಧಾರಾವಾಹಿಗಳಲ್ಲಿ ದಾಖಲೆಯ ಸಂಭ್ರಮ

  'ನಂದಿನಿ' ಮಹಾಸಂಚಿಕೆ (ಜೂನ್ 20 ಬುಧವಾರ ರಾತ್ರಿ 8:30ಕ್ಕೆ )

  ದೇವಿಯಿಂದ ತಯಾರಿಸಲ್ಪಟ್ಟ ಕಾಲಚಕ್ರ ಒಂದು ತಪಸ್ಸಿನ ಅದ್ಭುತ ಶಕ್ತಿಯಾಗಿದ್ದು ಅದರಿಂದ ದೈವೀ ಶಕ್ತಿ ಒಲಿಯುತ್ತದೆ ಹಾಗೂ ಸತ್ತು ಹೋಗಿರೋ ತನ್ನ ತಂಗಿ ಸಿಗುತ್ತಾಳೆ ಎಂಬ ಆಸೆಯಲ್ಲಿರುತ್ತಾಳೆ ಭೈರವಿ. ಈ ಕಾಲಚಕ್ರಕ್ಕಾಗಿ ಅರುಣನ ವೇಷ ಹಾಕಿಕೊಂಡು ಮಾಂತ್ರಿಕ ಭೈರವಿ ಅರಮನೆಗೆ ಬಂದಿದ್ದಾಳೆ. ಮಾರುವೇಷದಲ್ಲಿ ಬಂದಿರೋ ಈಕೆಗೆ ಕಾಲಚಕ್ರ ಸಿಗುತ್ತಾ? ವೀಕ್ಷಿಸಿ ನಂದಿನಿ ಮಹಾಸಂಚಿಕೆ.

  'ಜೀವನದಿ' ಮಹಾಸಂಚಿಕೆ (ಜೂನ್ 21 ಗುರುವಾರ ರಾತ್ರಿ 9ಕ್ಕೆ)

  ಜ್ಯೋತಿ ತಾನು ಕೇಸ್ ನ ಸ್ವತಂತ್ರವಾಗಿ ನಿಭಾಯಿಸುವುದಾಗಿ ರಾಮ್ ಜೊತೆ ವಾದ ಮಾಡುತ್ತಾಳೆ. ಮುಖ್ಯ ಕೇಸ್ ಆದ್ರಿಂದ ರಾಮ್ ಅದಕ್ಕೆ ಒಪ್ಪಲ್ಲ. ಜ್ಯೋತಿ ತನ್ನ ಸ್ವಶಕ್ತಿಯಿಂದ ಹಗಲಿರುಳು ಶ್ರಮವಹಿಸಿ ಗೆಲ್ಲಲೇ ಬೇಕೆಂದು ಪಣತೊಡುತ್ತಾಳೆ. ಜ್ಯೋತಿ ಗೆಲ್ತಾಳಾ ಅನ್ನೋದು ನಿಮಗೆ ಗೊತ್ತಾಗ್ಬೇಕು ಅಂದ್ರೆ ನೀವು ನೋಡಿ 'ಜೀವನದಿ' ಮಹಾಸಂಚಿಕೆ.

  'ಮಾನಸ ಸರೋವರ' ಮಹಾಸಂಚಿಕೆ (ಜೂನ್ 22 ಶುಕ್ರವಾರ ರಾತ್ರಿ 9:30ಕ್ಕೆ)

  ಅಚಾನಕ್ಕಾಗಿ ಸುನಿಧಿ ಆಸ್ಪತ್ರೆಯಿಂದ ಕಾಣೆಯಾಗುತ್ತಾಳೆ. ಆನಂದ ಸುನಿಧಿಯನ್ನು ಕಾಪಾಡಲು ತಾವೇ ಯಾರಿಗೂ ತಿಳಿಯದಂತೆ ರಸ್ತೆಯಲ್ಲೆಲ್ಲ ಸುನಿಧಿಗಾಗಿ ಹುಡುಕಲು ಶುರುವಿಡುತ್ತಾರೆ. ಚಿಂತನ್ ತನ್ನ ಬುದ್ಧಿಶಕ್ತಿಯನ್ನೆಲ್ಲ ಉಪಯೋಗಿಸಿ ಸುನಿಧಿಯನ್ನು ಎಲ್ಲೆಡೆ ಹುಡುಕುತ್ತಾನೆ. ಅಷ್ಟರಲ್ಲಿ ಸುನಿಧಿಗೆ ಚಿತ್ರಹಿಂಸೆ ಕೊಡುತ್ತಿರುವ ವೀಡಿಯೋ ಸಿಗುತ್ತದೆ. ಸುನಿಧಿಯನ್ನು ಉಳಿಸಿಕೊಳ್ಳುವುದರಲ್ಲಿ ಚಿಂತನ್ ಸಮಸ್ಯೆಯನ್ನ ಎದುರಿಸುತ್ತಾನಾ? ಸುನಿಧಿಯನ್ನ ಅಪಹರಿಸಿರೋದಾದ್ರು ಯಾರು? ವೀಕ್ಷಿಸಿ 'ಮಾನಸ ಸರೋವರ' ಮಹಾಸಂಚಿಕೆ ಜೂನ್ 22 ರಾತ್ರಿ 9.30 ಕ್ಕೆ ನಿಮ್ಮ ಉದಯ ಟಿವಿಯಲ್ಲಿ

  ಹೀಗೆ ಒಂದೊಂದು ಧಾರಾವಾಹಿಯ ಮಹಾಸಂಚಿಕೆಗಳು ಈ ಎಲ್ಲಾ ಕುತೂಹಲಕಾರಿ ತಿರುವುಗಳೊಂದಿಗೆ ನಿಮ್ಮ ಮನೆಯಂಗಳಕ್ಕೆ ಬರುತ್ತಿದೆ.

  English summary
  Udaya TV is coming up Mega Episodes for a week from 18th of June.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X