80ರ ದಶಕದ ಬ್ಯೂಟಿ: ಕನಕಪುರ ಬೋಲ್ಡ್ ನಟಿ ಸಿನಿಮಾಗೆ ಬರೋದು ಯಾವಾಗ?

By ಎಸ್ ಸುಮಂತ್

ಅಂಜಲಿ ಅಂದಾಕ್ಷಣ 'ಅನಂತನ ಅವಾಂತರ','ಅವನೇ ನನ್ನ ಗಂಡ', 'ತರ್ಲೆ ನನ್ ಮಗ' ಸಿನಿಮಾ ಕಣ್ಣ ಮುಂದೆ ಹಂಗೆ ಪಾಸಾಗುತ್ತೆ. 80 ರ ದಶಕದಲ್ಲಿ ಬಂದ ಮೋಹಕ ನಟಿ ಅಂಜಲಿ ಎಂದರೆ ತಪ್ಪಾಗುವುದಿಲ್ಲ. ಅಂದಿನ ಬೋಲ್ಡ್ ಪಾತ್ರಗಳ ಮೂಲಕೇ ಸುದ್ದಿಯಲ್ಲಿದ್ದ ನಟಿ ದಿಢೀರನೇ ಸಿನಿಮಾದಿಂದ ಕಣ್ಮರೆಯಾಗಿದ್ದರು. ಸದ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಮತ್ತೆ ಸಿನಿಮಾಗೆ ಯಾವಾಗ ಬರುತ್ತಾರೆ ಎಂಬ ಕುತೂಹಲದಲ್ಲಿಯೇ ಸಿನಿಪ್ರಿಯರು ಕಾಯುತ್ತಿದ್ದಾರೆ.

ಸದ್ಯ ಉದಯ ಟಿವಿಯ 'ನೇತ್ರಾವತಿ' ಮತ್ತು ಖಾಸಗಿ ವಾಹಿನಿಯ 'ರಾಮಚಾರಿ' ಧಾರಾವಾಹಿ ಎಲ್ಲರ ಮನೆ ಮಾತಾಗಿದೆ. ಈ ಎರಡು ಧಾರಾವಾಹಿಯಲ್ಲಿ ಅಂಜಲಿಯನ್ನು ಬೇರೆಯದ್ದೇ ಅವತಾರದಲ್ಲಿ ನೋಡಿದವರು, ಹಳೆ ಚಿತ್ರಕ್ಕೂ ಈಗಿನ ಚಿತ್ರಕ್ಕೂ ಹೊಂದಾಣಿಕೆ ಮಾಡಿಕೊಂಡು ಆಗಾಗ ಕನ್ಫ್ಯೂಷನ್ ಆಗುತ್ತಿರುತ್ತಾರೆ. ಹಿರಿಯ ನಟಿ ಅಂಜಲಿ 21 ವರ್ಷಗಳ ಬಳಿಕ ಶುರುವಾದ ಜರ್ನಿ ಹೇಗಿದೆ ಎಂಬ ಸಣ್ಣ ಝಲಕ್ ಇಲ್ಲಿದೆ.

'ನೇತ್ರಾವತಿ', 'ರಾಮಚಾರಿ'ಯ ಅಮ್ಮನಾದ ಅಂಜಲಿ

'ನೇತ್ರಾವತಿ', 'ರಾಮಚಾರಿ'ಯ ಅಮ್ಮನಾದ ಅಂಜಲಿ

ಅಂದೊಂದಿತ್ತು ಕಾಲ.. ಅಂತಾರಲ್ಲ ಆ ಕಾಲದಲ್ಲಿ ಕಾಶಿನಾಥ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಬಿಗ್ ಸ್ಟಾರ್‌ಗಳ ಜೊತೆಗೆ ನಟಿಸಿ ಸೈ ಎನಿಸಿಕೊಂಡವರು. ಮಡಿವಂತಿಕೆಯ ಕಾಲದಲ್ಲಿ ಮೈಚಳಿಬಿಟ್ಟು ನಟಿಸಿ, ಎಲ್ಲರ ಮನದರಸಿಯಾಗಿದ್ದವರು. ಸೆಕ್ಸಿ ನಟಿ ಎನ್ನುತ್ತಲೇ ಎಲ್ಲರ ಹಾರ್ಟ್ ಮೇಲೆ ಗಾಯ ಮಾಡಿದ್ದವರು. ಆದರೆ ಇದ್ದಕ್ಕಿದ್ದ ಹಾಗೇ ಪರ್ಸನಲ್ ಲೈಫ್‌ಗಾಗಿ ವಿದೇಶಕ್ಕೆ ಹಾರಿದ್ದ ನಟಿ ಮತ್ತೆ ವಾಪಾಸ್ಸಾಗಿದ್ದು, 21 ವರ್ಷಗಳ ಬಳಿಕ. ಭಾರತಕ್ಕೆ ಬಂದ ಮೇಲೆ ಮತ್ತೆ ನಟನೆಯತ್ತ ಒಲವು ತೋರಿದರು. ಅಂದಿನ ಕಾಲದಲ್ಲಿ ಸ್ಯಾಂಡಲ್‌ವುಡ್ ಆಳಿದ ನಟಿ ಸುಮ್ಮ ಸುಮ್ಮನೆ ಹೇಗೇಗೋ ಕಮ್ ಬ್ಯಾಕ್ ಮಾಡಿಸುವ ಹಾಗಿಲ್ಲ. ಅದಕ್ಕೆಂದೆ ಕನ್ನಡ ಕಿರುತೆರೆ ರಂಗ ಕೂಡ ಅವರಿಗಾಗಿ ಒಂದೊಳ್ಳೆ ಪಾತ್ರ ನೀಡಿ, ಒಂದೊಳ್ಳೆ ಎಂಟ್ರಿಯನ್ನು ನೀಡಿದೆ. ಇತ್ತೀಚೆಗೆ ಅವರ ಹುಟ್ಟುಹಬ್ಬವನ್ನು ಧಾರಾವಾಹಿ ತಂಡ ಅದ್ಧೂರಿಯಾಗಿ ಆಚರಣೆ ಮಾಡಿತ್ತು. ನಟಿಯ ಬಗ್ಗೆ ತುಂಬಾ ಗೌರವ ಹೊಂದಿದ್ದು, ಅಷ್ಟೇ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಸದ್ಯ ಟಾಪ್‌ನಲ್ಲಿರುವ ಎರಡು ಧಾರಾವಾಹಿಗಳಲ್ಲಿ ಅಮ್ಮನಾಗಿ ನಿಭಾಯಿಸುತ್ತಿದ್ದಾರೆ.

ಮತ್ತೆ ಸಿನಿಮಾಗೆ ಬರ್ತಾರಾ ಮಾದಕ ನಟಿ?

ಮತ್ತೆ ಸಿನಿಮಾಗೆ ಬರ್ತಾರಾ ಮಾದಕ ನಟಿ?

"ನಟನೆ ಮಾಡುವವರಿಗೆ ಸಿನಿಮಾ, ಸೀರಿಯಲ್ ಎಂಬುದಿಲ್ಲ. ಮಾಡುವ ಪಾತ್ರಕ್ಕೆ ಮಹತ್ವವಿರಬೇಕು ಅಷ್ಟೇ. ಈ ಬಗ್ಗೆ ನಟಿ ಅಂಜಲಿ ಮಾತನಾಡಿದ್ದು, ಅಂದಿನ ಕಾಲದಲ್ಲಿ ಅಂಜಲಿ ಎಂದರೆ ಆ ಗ್ಲಾಮರಸ್ ಪಾತ್ರವೇ ಕಣ್ಣ ಮುಂದೆ ಬರುತ್ತೆ. ಆದರೆ ಆ ಒಂದು ಪಾತ್ರವನ್ನು ಬಿಟ್ಟು ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳಬೇಕಿತ್ತು. ಹೀಗಾಗಿ ಸಮಯ ತೆಗೆದುಕೊಂಡೆ. ವಿದೇಶದಿಂದ ವಾಪಾಸ್ ಬಂದಿದ್ದೀನಿ. ಯಾವುದೋ ಒಂದು ಪಾತ್ರ ಮಾಡಿಬಿಡೋಣಾ ಅಂತ ಮಾಡುವುದಲ್ಲ. ಒಂದು ವರ್ಷ ಕಾದಿದ್ದಕ್ಕೆ ತುಂಬಾ ತುಂಬಾ ನಾನಿಷ್ಟಪಟ್ಟು, ನನಗಿಷ್ಟವಾದ ಪಾತ್ರ ನಂಗೆ ಸಿಕ್ಕಿದೆ. ಒಮ್ಮೆ ಅದೃಷ್ಟ ಬರುತ್ತೆ ಅಂತಾರಲ್ಲ ಹಾಗೇ 'ನೇತ್ರಾವತಿ' ಧಾರಾವಾಹಿಯಿಂದ ಅದೃಷ್ಟ ಬಂದಿದೆ" ಎಂದು ಹೇಳಿಕೊಂಡಿದ್ದಾರೆ.

ನೇತ್ರಾವತಿ ಒಪ್ಪಿಕೊಂಡಿದ್ದು ಈ ಕಾರಣಕ್ಕೆ

ನೇತ್ರಾವತಿ ಒಪ್ಪಿಕೊಂಡಿದ್ದು ಈ ಕಾರಣಕ್ಕೆ

ಆ ಕಾಲದ ಪಡ್ಡೆ ಹೈಕ್ಳು ನೋಡಿ ಮನಸ್ಸೊಳಗೆ ಮಂಡಿಗೆ ತಿಂದಿದ್ದಾರೆ. ವಾವ್ ಎಂಥಾ ಚೆಲುವೆ ಎಂದು ಗುಣಗಾನ ಮಾಡಿದ್ದಾರೆ. ಆದರೆ ಅಂಜಲಿಗೆ ಯಾವ ರೀತಿ ಇರುವುದೆಂದರೆ ಇಷ್ಟ ಗೊತ್ತಾ..? ತುಂಬಾ ಅಂದರೆ ತುಂಬಾ ಸಾಧಾರಣವಾಗಿರಬೇಕಂತೆ. ಅದಕ್ಕಾಗಿಯೇ 'ನೇತ್ರಾವತಿ' ಧಾರಾವಾಹಿಯನ್ನು ಒಪ್ಪಿಕೊಂಡಿದ್ದು. ಆ ಬಗ್ಗೆ ಖಾಸಗಿ ವಾಹಿನಿಯ ಇಂಟರ್‌ವ್ಯೂನಲ್ಲಿ ಮಾತನಾಡಿದ್ದ ಅಂಜಲಿ, "ನನಗೆ ಡೈರೆಕ್ಟರ್ ಕರೆ ಮಾಡಿ, ಒಂದು ತಾಯಿ ಪಾತ್ರ ಇದೆ ಎಂದು ಹೇಳಿದ್ದರು. ಲುಕ್ ಹೇಗಿರುತ್ತೆ ಎಂದು ಕೇಳಿದ್ದೆ. ಒಂದು ಕಾಟನ್ ಸೀರೆ, ಬೊಟ್ಟು ಇಟ್ಟುಕೊಳ್ಳುವುದು. ಹೂ ಮುಡಿಯುವುದು. ಬಳೆ ಹಾಕಿಕೊಳ್ಳುವುದು ಎಂದಾಗ ನನಗೆ ಆದಂತಹ ಸಂತಸ ಅಷ್ಟಿಷ್ಟಲ್ಲ. ನಂಗೆ ಹೂ ಮುಡಿಯೋದು, ಬಳೆ ಹಾಕುವುದು ಎಂದರೆ ತುಂಬಾ ಇಷ್ಟ. ಹೀಗಾಗಿ ತುಂಬಾ ಖುಷಿಯಿಂದ 'ನೇತ್ರಾವತಿ'ಯಲ್ಲಿ ಅಭಿನಯಿಸಿದೆ ಎಂದಿದ್ದಾರೆ.

ಗುರುವಾರ ಎಂದರೆ ಅಂಜಲಿಗೆ ಅದ್ಯಾಕೆ ಅಷ್ಟಿಷ್ಟ?

ಗುರುವಾರ ಎಂದರೆ ಅಂಜಲಿಗೆ ಅದ್ಯಾಕೆ ಅಷ್ಟಿಷ್ಟ?

ಅಂಜಲಿಗೆ ಸಾಯಿ ಬಾಬಾ ಮತ್ತು ರಾಘವೇಂದ್ರ ಸ್ವಾಮಿಗಳ ಮೇಲೆ ಅಪಾರವಾದ ನಂಬಿಕೆ, ಭಕ್ತಿ, ಪ್ರೀತಿ. ಏನೇ ಸಮಸ್ಯೆ ಬಂದರೂ, ಅದನ್ನು ಸಾಯಿ ಬಾಬಾ ಮತ್ತು ರಾಘವೇಂದ್ರ ಸ್ವಾಮಿ ಮುಂದಿಟ್ಟು ಬೇಡಿಕೊಳ್ಳುತ್ತಾರಂತೆ. ಸಾಯಿ ಬಾಬಾ ಮತ್ತು ರಾಘವೇಂದ್ರ ಸ್ವಾಮಿ ಮುಂದೆ ಕುಳಿತರೆ ಮುಗೀತು. ಸ್ನೇಹಿತರ ಜೊತೆ ಮಾತಾಡುವಂತೆ ಮಾತಾಡುತ್ತಾರಂತೆ. 21 ವರ್ಷಗಳ ಬಳಿಕ ಬಣ್ಣ ಹಚ್ಚಿದ್ದು ಗುರುವಾರವೇ. ಜೊತೆಗೆ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದರು.

More from Filmibeat

English summary
Udaya Tv Netravathi Serial Actress Anjali Biography And Life Story. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X