ನಿಮ್ಮ ಉದಯ ಟಿವಿಯಲ್ಲಿ ಚಿಣಿಮಿಣಿ ಚಿಂತಾಮಣಿ, ಕಾಮಿಡಿ ಸ್ಟಾರ್
ಯಾವಾಗಲೂ ವಿಭಿನ್ನ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನರನ್ನ ರಂಜಿಸುವ ಉದಯ ಕಾಮಿಡಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಹಾಸ್ಯಪ್ರಿಯರನ್ನ ನಗೆಗಡಲಲ್ಲಿ ತೇಲಿಸಲು ’ಚಿಣಿಮಿಣಿ ಚಿಂತಾಮಣಿ’, ಕಾಮಿಡಿ ಸ್ಟಾರ್ ಎಂಬ ಕಾರ್ಯಕ್ರಮ ರೂಪಿಸಿದೆ.
ಯಾವಾಗಲೂ ವಿಭಿನ್ನ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನರನ್ನ ರಂಜಿಸುವ ಉದಯ ಕಾಮಿಡಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಹಾಸ್ಯಪ್ರಿಯರನ್ನ ನಗೆಗಡಲಲ್ಲಿ ತೇಲಿಸಲು 'ಚಿಣಿಮಿಣಿ ಚಿಂತಾಮಣಿ', ಕಾಮಿಡಿ ಸ್ಟಾರ್ ಎಂಬ ಕಾರ್ಯಕ್ರಮ ರೂಪಿಸಿದೆ.
ಉದಯ ಕಾಮಿಡಿ ಚಾನಲ್ ನಲ್ಲಿ ಇನ್ನು ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 8 ಗಂಟೆಗೆ ಮಧ್ಯಾಹ್ನ 2 ಹಾಗೂ ಸಂಜೆ 4 ಗಂಟೆಗೆ ಪ್ರಸಾರವಾಗಲಿರುವ ಚಿಣಿಮಿಣಿ ಚಿಂತಾಮಣಿ ಎಂಬ ಹೊಸ ಕಾರ್ಯಕ್ರಮ ಜನರನ್ನು ಹೊಸ ಬಗೆಯಲ್ಲಿ ನಗಿಸಲಿದೆ.
"ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದ ಹೈಟೆಕ್ ಕೆಲಸಗಾರ್ತಿ ಭಾರತಕ್ಕೆ ಮರಳಿ ಇಲ್ಲಿ ನವದಂಪತಿಗಳ ಮನೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ನಂತರ ಕೆಲಸಗಾರ್ತಿಯಾದ ಚಿಂತಾಮಣಿ ಆ ನವ ದಂಪತಿಗಳ ಬದುಕಲ್ಲಿ ಆಡುವ ಆಟವನ್ನೇ ಕಥಾ ಹಂದರವಾಗಿ ಹೊಂದಿರುವ ಈ ಹೊಸ ಕಾರ್ಯಕ್ರಮ ಜನರನ್ನ ನಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

--
ಪ್ರತಿದಿನ ನಗಲು ಉದಯ ಕಾಮಿಡಿ ಸ್ಟಾರ್
ಕಿರುತೆರೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜನಸಾಮಾನ್ಯರಿಗೆ ವೇದಿಕೆ ಕಲ್ಪಿಸಿ, ಜನರನ್ನ ನಗೆಗಡಲಲ್ಲಿ ಮುಳುಗಿಸುವ ಕೆಲಸಕ್ಕೆ ಉದಯ ಕಾಮಿಡಿ ಚಾನಲ್ ಮುಂದಾಗಿದೆ. ಪ್ರತಿದಿನ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಉದಯ ಕಾಮಿಡಿ ಚಾನಲ್‍ನಲ್ಲಿ ಮೂಡಿಬರಲಿರುವ "ಉದಯ ಕಾಮಿಡಿ ಸ್ಟಾರ್" ಎಂಬ ಹೊಸ ಹಾಸ್ಯ ಕಾರ್ಯಕ್ರಮ.

ಇವರು ರಘು ರಾಕೆಟ್ಸ್, ಸಾಧೂ ಸುಲ್ತಾನ್ಸ್, ಚಿಕ್ಕು ಪಟಾಕೀಸ್ ಹಾಗೂ ಶರಣ್ ಶಿಷ್ಯಾಸ್ ಎಂಬ ನಾಲ್ಕು ತಂಡಗಳಾಗಿ ಜನರನ್ನು ರಂಜಿಸಲಿದ್ದಾರೆ. ನಟಿ ಭೂಮಿಕಾ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.


Click it and Unblock the Notifications











