For Quick Alerts
ALLOW NOTIFICATIONS  
For Daily Alerts

ನಿಮ್ಮ ಉದಯ ಟಿವಿಯಲ್ಲಿ ಚಿಣಿಮಿಣಿ ಚಿಂತಾಮಣಿ, ಕಾಮಿಡಿ ಸ್ಟಾರ್

By Mahesh
|

ಯಾವಾಗಲೂ ವಿಭಿನ್ನ ಹಾಸ್ಯ ಕಾರ್ಯಕ್ರಮಗಳ ಮೂಲಕ ಜನರನ್ನ ರಂಜಿಸುವ ಉದಯ ಕಾಮಿಡಿ ಈಗ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಹಾಸ್ಯಪ್ರಿಯರನ್ನ ನಗೆಗಡಲಲ್ಲಿ ತೇಲಿಸಲು 'ಚಿಣಿಮಿಣಿ ಚಿಂತಾಮಣಿ', ಕಾಮಿಡಿ ಸ್ಟಾರ್ ಎಂಬ ಕಾರ್ಯಕ್ರಮ ರೂಪಿಸಿದೆ.

ಉದಯ ಕಾಮಿಡಿ ಚಾನಲ್ ನಲ್ಲಿ ಇನ್ನು ಪ್ರತಿ ಶನಿವಾರ ಹಾಗೂ ಭಾನುವಾರ ಬೆಳಗ್ಗೆ 8 ಗಂಟೆಗೆ ಮಧ್ಯಾಹ್ನ 2 ಹಾಗೂ ಸಂಜೆ 4 ಗಂಟೆಗೆ ಪ್ರಸಾರವಾಗಲಿರುವ ಚಿಣಿಮಿಣಿ ಚಿಂತಾಮಣಿ ಎಂಬ ಹೊಸ ಕಾರ್ಯಕ್ರಮ ಜನರನ್ನು ಹೊಸ ಬಗೆಯಲ್ಲಿ ನಗಿಸಲಿದೆ.

"ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದ ಹೈಟೆಕ್ ಕೆಲಸಗಾರ್ತಿ ಭಾರತಕ್ಕೆ ಮರಳಿ ಇಲ್ಲಿ ನವದಂಪತಿಗಳ ಮನೆಗೆ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ನಂತರ ಕೆಲಸಗಾರ್ತಿಯಾದ ಚಿಂತಾಮಣಿ ಆ ನವ ದಂಪತಿಗಳ ಬದುಕಲ್ಲಿ ಆಡುವ ಆಟವನ್ನೇ ಕಥಾ ಹಂದರವಾಗಿ ಹೊಂದಿರುವ ಈ ಹೊಸ ಕಾರ್ಯಕ್ರಮ ಜನರನ್ನ ನಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

--

ಪ್ರತಿದಿನ ನಗಲು ಉದಯ ಕಾಮಿಡಿ ಸ್ಟಾರ್

ಕಿರುತೆರೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜನಸಾಮಾನ್ಯರಿಗೆ ವೇದಿಕೆ ಕಲ್ಪಿಸಿ, ಜನರನ್ನ ನಗೆಗಡಲಲ್ಲಿ ಮುಳುಗಿಸುವ ಕೆಲಸಕ್ಕೆ ಉದಯ ಕಾಮಿಡಿ ಚಾನಲ್ ಮುಂದಾಗಿದೆ. ಪ್ರತಿದಿನ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಉದಯ ಕಾಮಿಡಿ ಚಾನಲ್‍ನಲ್ಲಿ ಮೂಡಿಬರಲಿರುವ "ಉದಯ ಕಾಮಿಡಿ ಸ್ಟಾರ್" ಎಂಬ ಹೊಸ ಹಾಸ್ಯ ಕಾರ್ಯಕ್ರಮ.

ಈ ಕಾರ್ಯಕ್ರಮ ಈಗ ಎಲ್ಲರ ಕೇಂದ್ರಬಿಂದುವಾಗಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಸಾವಿರಾರು ಹಾಸ್ಯ ಕಲಾವಿದರನ್ನು ಆಡಿಷನ್ ಮಾಡಲಾಗಿದ್ದು ಅದರಲ್ಲಿ ಆಯ್ದ 24 ಕಲಾವಿದರಿಗೆ ವೇದಿಕೆ ಕಲ್ಪಿಸಲಾಗಿದೆ.

ಇವರು ರಘು ರಾಕೆಟ್ಸ್, ಸಾಧೂ ಸುಲ್ತಾನ್ಸ್, ಚಿಕ್ಕು ಪಟಾಕೀಸ್ ಹಾಗೂ ಶರಣ್ ಶಿಷ್ಯಾಸ್ ಎಂಬ ನಾಲ್ಕು ತಂಡಗಳಾಗಿ ಜನರನ್ನು ರಂಜಿಸಲಿದ್ದಾರೆ. ನಟಿ ಭೂಮಿಕಾ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.

English summary
Udaya TV is now back with two new comedy shows Chinimini Chintamani and Udaya Comedy Stars. Chinimini will be telecasted thrice in a day during the weekend.Comedy stars is scheduled for Monday to Friday 10PM.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more