ಕಿರುತೆಗೆ ಬಂದರು ಅಣ್ಣ-ತಂಗಿ: ಹೊಸ ಧಾರಾವಾಹಿಯಲ್ಲಿ ಒಡಹುಟ್ಟಿದವರ ಕಥೆ!

ಕಿರುತೆರೆಯಲ್ಲಿ ಭಿನ್ನ ವಿಭಿನ್ನ ಕಥೆಯಾಧರಿಸಿದ ಧಾರಾವಾಹಿಗಳು, ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ. ಆದರೆ ಹೆಚ್ಚಾಗಿ ಜನ ಇಷ್ಟ ಪಟ್ಟು ನೋಡುವುದು ಧಾರಾವಾಹಿಗಳನ್ನು. ಕೆಲವರು ಕೆಲವು ಧಾರಾವಾಹಿಗಳನ್ನು ತಪ್ಪದೇ ಪ್ರತೀ ದಿನ ವೀಕ್ಷಿಸುತ್ತಾರೆ. ಇನ್ನು ಕೆಲವರ ಮನೆ ಮನದಲ್ಲಿ ಹಲವು ಧಾರಾವಾಹಿಗಳು ನೆಲೆಸಿ ಬಿಟ್ಟಿರುತ್ತವೆ. ಧಾರಾವಾಹಿಯ ಪಾತ್ರಗಳು ಎಷ್ಟೋ ಮಂದಿಯ ಮನೆಗಳಲ್ಲಿ ಜೀವಿಸುತ್ತಾ ಇರುತ್ತವೆ. ಹಾಗಾಗಿ ಧಾರಾವಾಹಿಗಳ ಕಥೆಗಳನ್ನು ಅತಿ ಸೂಕ್ಷ್ಮವಾಗಿ ಆಯ್ಕೆ ಮಾಡಬೇಕಾಗುತ್ತದೆ. ಉದಯ ವಾಹಿನಿಯ ಸಾಕಷ್ಟು ವರ್ಷಗಳಿಂದ ಧಾರಾವಾಹಿಗಳ ಮೂಲಕವೆ ಜನರ ಮನ ಗೆದ್ದಿದೆ. ಸಾಕಷ್ಟು ಹಿಟ್ ಧಾರಾವಾಹಿಗಳನ್ನ ಪ್ರಸಾರ ಮಾಡಿದೆ. ಈಗ ಈ ಸಾಲಿಗೆ ಮತ್ತೊಂದು ಹೊಸ ಧಾರಾವಾಗಿ ಸೇರಿ ಕೊಳ್ಳುತ್ತಾ ಇದೆ.

ಮನರಂಜನೆಯ ಭಿನ್ನ ಪ್ರಯತ್ನಕ್ಕೆ ಹೊಸದೊಂದು ಧಾರಾವಾಹಿ ಸೇರಿಕೊಳ್ಳಲಿದೆ. ಯಾರಿವಳು, ಸೇವಂತಿ, ಸುಂದರಿ, ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ನಯನತಾರ, ಮನಸಾರೆ, ಕಾವ್ಯಾಂಜಲಿ, ಕಸ್ತೂರಿ ನಿವಾಸದಂತಹ ಹಲವಾರು ವಿಭಿನ್ನ ಕೂತೂಹಲಕಾರಿ ಕಥೆಗಳನ್ನು ಉದಯಾ ವಾಹಿನಿ ನಿಡುತ್ತಿದೆ. ಈಗ ಈ ಸಾಲಿಗೆ ಹೊಸ ಕಥೆ ಸೇರಿಕೊಳ್ಳುತ್ತಿದೆ. ಒಡಹುಟ್ಟಿದವರ ಕಥೆಯನ್ನು ಜನರ ಮುಂದೆ ಇಡಲು ಉದಯಾ ವಾಹಿನಿ ತಯಾರಾಗಿದೆ.

 Udaya Tv New Fiction Show Anna Thangi From November 22nd

ಒಡಹುಟ್ಟಿದವರ ಕತೆಯನ್ನು ಹೇಳಲು "ಅಣ್ಣ-ತಂಗಿ" ಎಂಬ ಹೆಸರಿನ ಹೊಚ್ಚ ಹೊಸ ಧಾರಾವಾಹಿಯು ವೀಕ್ಷಕರ ಮನೆ ಬಾಗಿಲಿಗೆ ಬರಲಿದೆ. ʼಅಣ್ಣ-ತಂಗಿʼ ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಕಥೆ, ಚಿತ್ರಕಥೆ, ಮೇಕಿಂಗ್ ಹಾಗೂ ತಾರಾಬಳಗವನ್ನು ಕಥೆ ಒಳಗೊಂಡಿದೆ. ತುಳಸಿ ಮತ್ತು ಶಿವರಾಜು ಆದರ್ಶ ಅಣ್ಣ ತಂಗಿ, ಅಪ್ಪ ಅಮ್ಮ ಇಲ್ಲದಿರುವ ಇವರಿಬ್ಬರಿಗೂ ಇವರಿಬ್ಬರೆ ಆಸರೆ ಎನ್ನುವ ಕತೆಯನ್ನು ಒಳಗೊಂಡಿದೆ ಈ ಧಾರಾವಾಹಿ.

 Udaya Tv New Fiction Show Anna Thangi From November 22nd

ಅಣ್ಣಾ-ತಂಗಿ ಕಥೆ ನಿಮ್ಮ ಮನೆಯಂಗಳಕ್ಕೆ!

ಕಿರುತೆರೆಗೆ ಬರುತ್ತಾ ಇದ್ದಾರೆ ಅಣ್ಣ-ತಂಗಿ!

ತುಳಸಿಗೆ ಕೂಡು ಕುಟುಂಬದ ಪ್ರೀತಿ ಸಿಕ್ಕಿರುವುದಿಲ್ಲ. ಹೆತ್ತವರ ಸ್ಥಾನದಲ್ಲಿರುವ ಶಿವಣ್ಣ, ಬೆಳೆದ ತಂಗಿಯನ್ನು ಎಲ್ಲ ಬಂಧುಗಳು ತುಂಬಿ ತುಳುಕುತ್ತಿರುವ ಒಂದು ದೊಡ್ಡ ಕುಟುಂಬಕ್ಕೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಆದರೆ ತಂಗಿಯ ಜಾತಕದ ಪ್ರಕಾರ ಭವಿಷ್ಯದಲ್ಲಿ ಅವಳಿಗೆ ಮದುವೆಯಾದರೆ ತನ್ನ ಊಸಿರಿನಂತಿರುವ ಅಣ್ಣನ ಸಂಬಂಧವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎನ್ನುವ ಸತ್ಯ ಗೊತ್ತಾಗುತ್ತದೆ. ಅಣ್ಣನನ್ನು ಒಂಟಿ ಮಾಡಿ ಬಿಟ್ಟು ಹೋಗಲು ತಂಗಿಗೆ ಮನಸಿಲ್ಲ. ಚಿಕ್ಕ ವಯಸ್ಸಿನಿಂದ ಒಗ್ಗಟ್ಟಿನಿಂದ ಬೆಳೆದು ಬಂದ ಇವರಿಬ್ಬರ ಬಂಧನ ತುಳಸಿಗೆ ಬರುವ ಗಂಡಿನ ಕಡೆಯವರಿಂದ ಅಥವಾ ಅತ್ತಿಗೆಯ ಕುಟುಂಬದಿಂದ ಮುರಿದು ಬೀಳುತ್ತಾ ಅನ್ನೋದೆ "ಅಣ್ಣ ತಂಗಿ"ಯ ಮೂಲ ಕಥೆ.

 Udaya Tv New Fiction Show Anna Thangi From November 22nd

ಕೆ.ಎಮ್. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್ ನಿರ್ಮಾಣದ ಅಣ್ಣ-ತಂಗಿ

ಅಣ್ಣ- ತಂಗಿ ಧಾರವಾಹಿಯಲ್ಲಿ ಕಲಾವಿದರ ದಂಡು!

ಧಾರವಾಹಿಯ ನಿರ್ಮಾಣದ ಹೊಣೆಯನ್ನು ಚೈತನ್ಯ ಹರಿದಾಸ್‌ ಸಿನಿಮಾಸ್ ಹೊತ್ತಿದೆ. "ಆಕೃತಿ" ಯಂತಹ ಥ್ರಿಲ್ಲರ್‌ ಧಾರಾವಾಹಿಯನ್ನು ಕೊಟ್ಟ ಕನ್ನಡದ ಖ್ಯಾತ ನಿರ್ದೇಶಕರಾದ ಕೆ.ಎಮ್. ಚೈತನ್ಯ ಮತ್ತು ಹರಿದಾಸ್ ಕೆ.ಜಿ.ಎಫ್ ರವರು ನಿರ್ಮಿಸುತ್ತಿದ್ದಾರೆ. ನಿರ್ದೇಶನ ಮತ್ತು ಛಾಯಗ್ರಾಹಣ ಎಮ್. ಕುಮಾರ್ ವಹಿಸಿಕೊಂಡಿದ್ದಾರೆ. ರಾಘವ ದ್ವಾರ್ಕಿ ಅವರ ಚಿತ್ರಕತೆ, ತುರುವೆಕರೆ ಪ್ರಸಾದ್‌ ಸಂಭಾಷಣೆ ಬರೆಯುತ್ತಿದ್ದಾರೆ. ಸಂಕಲನ ಗುರುರಾಜ್ ಬಿ.ಕೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

 Udaya Tv New Fiction Show Anna Thangi From November 22nd

ತಂಗಿ ತುಳಸಿ ಪಾತ್ರವನ್ನು ಅಖಿಲಾ ಪ್ರಕಾಶ್ ಹಾಗು ಅಣ್ಣನ ಪಾತ್ರವನ್ನು ಮಧು ಸಾಗರ್, ನಿರ್ವಹಿಸುತ್ತಿದ್ದಾರೆ. ಮಾನಸ ಜೋಷಿ, ರಾಜೇಶ್ ದೃವ, ಸ್ವರಾಜ್‌, ರೋಹಿತ್‌ನಾಗೇಶ್, ಶರ್ಮಿತಾ, ಹಿರಿಯ ಕಲಾವಿದರಾದ ರಾಧಾ ರಾಮಚಂದ್ರ, ಗಿರಿಶ್‌ ಜತ್ತಿ, ತನುಜಾ ರಂತ ಹಲವಾರು ತಾರೆಯರ ಗುಂಪು ಒಳಗೊಂಡ ಈ ಧಾರವಾಹಿ ನವೆಂಬರ್ 22 ರಿಂದ ಸೋಮವಾರದಿಂದ ಶನಿವಾರದ ತನಕ ಸಂಜೆ 7 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Udaya Tv New Fiction Show Anna Thangi Will Telecast From November 22nd
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X