Sreeleela and Virat: ಸವಾಲ್ ಗೆ ಸೈ ಎನ್ನುತ್ತಲೇ ಸಖತ್ ಮಜಾ ಕೊಟ್ಟ 'ಕಿಸ್' ಜೋಡಿ
ಸವಾಲ್ ಗೆ ಸೈ.. ಯಾವುದಕ್ಕೂ ಜಗ್ಗಲ್ಲ ಈ ಕಿಸ್ ಜೋಡಿ.. ಈ ಡೈಲಾಗ್ ಅನ್ನೊಮ್ಮೆ 'ಪುಷ್ಪ' ರೀತಿ ಓದಿಕೊಂಡು ಬಿಡಿ. ಆಗ ಸಖತ್ ಮಜಾ ಎನಿಸದೆ ಇರಲ್ಲ. ನಾವೀಗ ಹೇಳೋಕೆ ಹೊರಟ ವಿಚಾರವೂ ಅಷ್ಟೇ ಮಜಭೂತವಾಗಿದೆ.
ಉದಯ ಟಿವಿಯಲ್ಲಿ 'ಸವಾಲ್ ಗೆ ಸೈ' ಅನ್ನೋ ರಿಯಾಲಿಟಿ ಶೋ ಬರ್ತಿದೆ. 2018ರಲ್ಲಿ ಶುರುವಾದ ಈ ಕಾರ್ಯಕ್ರಮ ಇನ್ನೂ ಪ್ರಸಾರವಾಗುತ್ತಲೆ ಇದೆ. ಎಲ್ಲಿಯೂ ಬೋರ್ ಎನಿಸದೆ, ನಿರಂಜನ್ ಬಹಳ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದಾರೆ.
ಇದು ಹೆಸರಿಗೆ ತಕ್ಕಂತೆ ಸವಾಲ್‌ಗೆ ಸೈ.. ಹಾಗಂತ ಸೀರಿಯಸ್ ಆಗಿ ಈ ಕಾರ್ಯಕ್ರಮದಲ್ಲಿ ಪೈಪೋಟಿ ನಡೆಯಲ್ಲ. ವೀಕ್ಷಕ ಮಹಾಪ್ರಭು ನೋಡ ನೋಡುತ್ತಾ ಆ ಗೇಮ್‌ನಲ್ಲಿ ಮುಳುಗೋಗಬೇಕು ಆ ರೀತಿಯಲ್ಲಿರುತ್ತೆ. ನಿರಂಜನ್ ಕೊಡುವ ಗೇಮ್, ನಿರೂಪಣೆಯಲ್ಲೇ ಕಾಮಿಡ ಟಚ್ ಇರುತ್ತೆ. ಫುಲ್ ಕಾಮಿಡಿ ಝಲಕ್‌ನೊಂದಿಗೆ, ನೋಡುಗರು ಬಿದ್ದು ಬಿದ್ದು ನಗುವ ರೇಂಜಿಗೆ ಇಲ್ಲಿನ ಆಟಗಳು ಸಾಗುತ್ತವೆ.

ಹಳೆ ಸಂಚಿಕೆಗಳಿಗೆ ಈಗಲೂ ಸಖತ್ ರೆಸ್ಪಾನ್ಸ್
ಸವಾಲ್‌ಗೆ ಸೈ ಕಾರ್ಯಕ್ರಮದಲ್ಲಿ ಮುದ್ದು ಮುಖದ ಚೆಲುವೆ ಶ್ರೀಲೀಲಾ ಹಾಗೂ ವಿರಾಟ್ ಜೋಡಿ ಮಸ್ತ್ ಮಜಾ ಮಾಡಿದೆ. ಇದು ಆಗಿದ್ದು 'ಕಿಸ್' ಸಿನಿಮಾ ರಿಲೀಸ್ ಆದಾಗ. ಆದರೆ, ಆ ನೆನಪುಗಳನ್ನ ಉದಯ ಟಿವಿ ಈಗಲು ಮೆಲುಕು ಹಾಕಿದೆ. ಆಗಿನ ಫನ್ನಿ ಎಪಿಸೋಡನ್ನ ಮತ್ತೆ ಮತ್ತೆ ರಿವೈಮನಡ್ ಮಾಡುತ್ತಿದೆ. ಇದಕ್ಕೆ ವೀಕ್ಷಕ ಮಹಾಪ್ರಭು ಕೂಡ ಮತ್ತೆ ಮತ್ತೆ ಲೈಕ್ ಮಾಡುತ್ತಿದ್ದಾನೆ.
ನಿಮ್ಗೆಲ್ಲಾ ಗೊತ್ತಿರುವ ಹಾಗೇ 'ಕಿಸ್' ಸಿನಿಮಾದ ಮೂಲಕ ಶ್ರೀಲೀಲಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿರಾಟ್ ಸಂಪೂರ್ಣ ನಾಯಕನ ಪಟ್ಟ ಅಲಂಕರಿಸಿದ್ದು ಇದೇ 'ಕಿಸ್' ಕೊಟ್ಟು. 'ಕಿಸ್' ಸಿನಿಮಾ ರಿಲೀಸ್ ಆಗಿ ವರ್ಷಗಳೇ ಕಳೆದರು ಆ ಜೋಡಿ ಮಾತ್ರ ಎಲ್ಲರಿಗೂ ಹಾಟ್ ಫೇವರಿಟ್ ಆಗಿ ಹೋಯ್ತು.

ಇಬ್ಬರ ಬಬ್ಲಿ ಬಬ್ಲಿ ಕಿತ್ತಾಟ, ಮುದ್ದು ಮುದ್ದು ಮುದ್ದಾಟ ನೋಡಿ ಅಭಿಮಾನಿಗಳ ಸಂಘವೇ ಹುಟ್ಟಿಕೊಂಡಿತ್ತು. ಆಗ ಇದೇ ಸವಾಲ್‌ಗೆ ಸೈ ಅಂಗಳಕ್ಕೆ ಕರೆಸಿ ಒಂದಿಷ್ಟು ಗೇಮ್ಸ್ ಅನ್ನ ಆಡಿಸಿದ್ದರು. ಮೊದಲ ಸಿನಿಮಾದಲ್ಲೇ ಇಬ್ಬರು ಅದೆಷ್ಟು ಅರ್ಥ ಮಾಡಿಕೊಂಡಿದ್ದರು ಎಂಬುದನ್ನ ಗಮನಸಿದರೆಮ ನಿಜಕ್ಕೂ ಶಾಕ್ ಆಗುತ್ತೆ.
ವಿರಾಟ್‌ಗೆ ಇಷ್ಟ-ಕಷ್ಟಗಳು ಶ್ರೀಲೀಲಾಗೆ ಗೊತ್ತು..!
ಈ ಗೇಮ್ ನಲ್ಲಿ ಇಬ್ಬರು ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ಬಳಿಕ ಏನಾದರೊಂದು ಟೇಸ್ಟ್ ಮಾಡೋದಕ್ಕೆ ಹೇಳ್ತಾರೆ. ಟೇಸ್ಟ್ ಮಾಡಿದ ನಂತರ ಹೆಸರೇಳದಂಗೆ ಎದುರುಗಡೆ ಇರುವವರಿಗೆ ಕ್ಲೂ ಕೊಡಬೇಕು. ಆಗ ಅವರು ಅದೇನು ಅನ್ನೋದನ್ನ ಕಂಡು ಹಿಡಿಯಬೇಕು. ಇದು ಆಟ. ಆದರೆ, ಶ್ರೀಲೀಲಾ ಆಂಡ್ ವಿರಾಟ್ ಈ ಗೇಮ್ ಎಷ್ಟು ಅದ್ಭುತವಾಗಿ ಆಡಿದ್ರು ಅಂದರೆ, ಅಲ್ಲಿಯೇ ಗೊತ್ತಾಯ್ತು ಇಬ್ಬರ ತಿನ್ನುವ ವಿಚಾರದಲ್ಲಿ ಇಷ್ಟದ್ದು ಕಷ್ಟದ್ದು ಅತ್ಯದ್ಭುತವಾಗಿ ತಿಳಿದುಕೊಂಡಿದ್ದಾರೆ ಎಂಬುದು. ಈ ಎಪಿಸೋಡ್ ಅಂದು ಮಜಭೂತ ಆಗಿತ್ತೋ ಇಲ್ವೋ ಗೊತ್ತಿಲ್ಲ. ಇಂದು ರಿವೈಂಡ್ ಮೋಡ್‌ನಲ್ಲಿ ನೋಡಿದಾಗಲೂ ವಾಹ್ವ್ ಆಂತ ಅನ್ಸಿದ್ದಂತು ಸುಳ್ಳಲ್ಲ.
ಸದ್ಯ ಶ್ರೀಲೀಲಾ 'ಕಿಸ್' ಆದ್ಮೇಲೆ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿ ಇರೋ ನಟಿಯಾಗಿದ್ದಾರೆ. ಈಗಾಗಲೇ ಬೇರೆ ಭಾಷೆಗೂ ಜಂಪ್ ಆಗಿ ಅಲ್ಲಿಯೂ ತನ್ನದೇ ಹವಾ ಕ್ರಿಯೇಟ್ ಮಾಡಿ ಬಂದಿದ್ದಾರೆ. ಈಗ ಜನಾರ್ದನ್ ರೆಡ್ಡಿ ಪುತ್ರ ಕಿರೀಟಿಗೂ ಶ್ರೀಲೀಲಾನೇ ನಟಿಯಾಗಿದ್ದಾರೆ.


Click it and Unblock the Notifications











