ಇನ್ಮುಂದೆ ಒಂದು ಗಂಟೆ ಕಾಲ ಪ್ರಸಾರವಾಗಲಿದೆ 'ನಂದಿನಿ' ಧಾರಾವಾಹಿ
ಜನ ಮನ್ನಣೆ ಗಳಿಸಿ, ಇನ್ನೂರು ಸಂಚಿಕೆಗಳತ್ತ ದಾಪುಗಾಲು ಹಾಕುತ್ತಿರುವ ಉದಯ ಟಿವಿಯ 'ನಂದಿನಿ' ಧಾರಾವಾಹಿ ಇನ್ಮುಂದೆ ಒಂದು ಗಂಟೆ ಕಾಲ ಪ್ರಸಾರ ಆಗಲಿದೆ.
ಇದೇ ಸೋಮವಾರದಿಂದ (ಅಕ್ಟೋಬರ್ 23) ಉದಯ ಟಿವಿಯಲ್ಲಿ 'ನಂದಿನಿ' ಧಾರಾವಾಹಿಯ ಒಂದು ಗಂಟೆ ಸಂಚಿಕೆಗಳು ಮೂಡಿಬರಲಿವೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟು ಗಂಟೆಯಿಂದ ಒಂಬತ್ತು ಗಂಟೆ ವರೆಗೆ 'ನಂದಿನಿ' ಧಾರಾವಾಹಿ ಪ್ರಸಾರವಾಗಲಿದೆ.

'ನಂದಿನಿ' ಧಾರಾವಾಹಿಯ ಒಂದು ಗಂಟೆ ಸಂಚಿಕೆಯಿಂದಾಗಿ, ಎಂಟು ಗಂಟೆಗೆ ಪ್ರಸಾರವಾಗುತ್ತಿದ್ದ 'ಕಾವೇರಿ' ಏಳು ಗಂಟೆಗೆ ಪ್ರಸಾರವಾಗಲಿದೆ. 'ಸರಯೂ' ಧಾರಾವಾಹಿ ಸಂಜೆ ಏಳು ಗಂಟೆ ಬದಲಾಗಿ ರಾತ್ರಿ ಹತ್ತು ಗಂಟೆಗೆ ಪ್ರಸಾರ ಆಗಲಿದೆ.
ವೈವಿಧ್ಯಮಯ ಸಂಚಿಕೆಗಳೊಡನೆ ಮೂಡಿ ಬರಲಿರುವ ಈ ಎಲ್ಲ ಧಾರಾವಾಹಿಗಳು ವೀಕ್ಷಕರ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ ಎನ್ನುವುದು ಉದಯ ಟಿವಿಯ ಅನಿಸಿಕೆ.
More from Filmibeat
English summary
Inspired with the success of Nandini, Udaya TV is extending its time from 23rd October. From next Monday, Nandini will have One-hour episode. Monday to Friday Nandini will be aired from 8pm to 9pm.


Click it and Unblock the Notifications











