ಸುಳ್ಳಿನ ಪೊರೆ ಕಳಚುವ ನಟಿ ಶ್ರುತಿ ಸಾರಥ್ಯದ 'ಸತ್ಯಕಥೆ'

By Harshitha

'ಸತ್ಯಕಥೆ'.... ಇದು ಬದುಕಿನ ಸತ್ಯಘಟನೆಗಳನ್ನು ಆಧರಿಸಿ ಪ್ರಸ್ತುತ ಪಡಿಸುವ ಕಾರ್ಯಕ್ರಮ. ಬದುಕಿನ ಪಯಣದಲ್ಲಿ ನಾವು ಕಂಡು ಕೇಳರಿಯದ ಸತ್ಯದ ಅನಾವರಣ ಮಾಡುವ, ಅನುಭವಕ್ಕೂ ಮೀರಿದ ವಾಸ್ತವ ಪ್ರಪಂಚ ತೆರೆದಿಡುವ, ಮೇಲ್ನೋಟಕ್ಕೆ ಸತ್ಯದಂತೆ ಕಾಣುವ ಸುಳ್ಳಿನ ಪೊರೆ ಕಳಚಿ ಸತ್ಯ ದರ್ಶನ ಮಾಡಿಸುವ ಕಾರ್ಯಕ್ರಮ ಇದು.

'ಸತ್ಯಕಥೆ' ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ವಿನೂತನ, ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ರಮದ ಸಾರಥ್ಯವನ್ನು ಕನ್ನಡದ ಹೆಮ್ಮೆಯ ನಟಿ ಶ್ರುತಿ ಹೊತ್ತಿದ್ದಾರೆ.

ನಟಿ ಶ್ರುತಿ ಸಾರಥ್ಯ

ನಟಿ ಶ್ರುತಿ ಸಾರಥ್ಯ

ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ಶ್ರುತಿಯವರು 'ಸತ್ಯಕಥೆ'ಯಲ್ಲಿ ಒಬ್ಬತಾಯಿಯಾಗಿ, ಸಹೋದರಿಯಾಗಿ, ಜವಾಬ್ದಾರಿಯುತ ಯಜಮಾನಿಯಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಅವರ ದುಃಖವನ್ನು ಆಲಿಸಿ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಾರೆ.

ವೇದಿಕೆಯಲ್ಲಿ ಮುಕ್ತ ಅವಕಾಶ

ವೇದಿಕೆಯಲ್ಲಿ ಮುಕ್ತ ಅವಕಾಶ

ಜೀವನದ ಕಷ್ಟಗಳನ್ನು ಇನ್ನೊಬ್ಬರ ಬಳಿ ಹೇಳಿಕೊಳ್ಳಲಾರದೇ ತವಕಿಸುತ್ತಿರವ ಜೀವಗಳಿಗೆ ಯಾವ ಮುಚ್ಚುಮರೆ ಇಲ್ಲದೆ ತಮ್ಮ ಒಳನೋವನ್ನು ತೆರೆದಿಟ್ಟುಕೊಳ್ಳಲು ಈ ವೇದಿಕೆ ಮುಕ್ತ ಅವಕಾಶ ನೀಡಿದೆ ಮತ್ತು ಆ ಕಷ್ಟಗಳನ್ನು ಪರಿಹರಿಸಲು ಟೊಂಕಕಟ್ಟಿ ನಿಂತಿದೆ.

ಬಾಂಧವ್ಯವನ್ನು ಅರಿವು ಮೂಡಿಸುವ ಕಾರ್ಯಕ್ರಮ

ಬಾಂಧವ್ಯವನ್ನು ಅರಿವು ಮೂಡಿಸುವ ಕಾರ್ಯಕ್ರಮ

ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು ಮುಖ್ಯವಾಗಿ ದಂಪತಿಗಳು ತಂದೆ-ತಾಯಿಯರು ಅತ್ತೆ ಮಾವಂದಿರು, ಪೋಷಕರು ಮತ್ತು ಮಕ್ಕಳ ಮನಸ್ಸುಗಳ ನಡುವೆ ಭಾವನೆಗಳ ಎರಕ ಹೊಯ್ಯುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಒಡೆದ ಮನಸ್ಸುಗಳನ್ನು ಒಗ್ಗೂಡಿಸಿ ಅವರ ಅಭಿಪ್ರಾಯಗಳನ್ನು ಆಲಿಸಿ, ಅವರವರಲ್ಲಿ ಮೂಡಿದ ತಪ್ಪು ತಿಳುವಳಿಕೆಗಳನ್ನು ಕಳೆದು, ಬಾಂಧವ್ಯದ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ.

ಹೊಸ ಆರಂಭ

ಹೊಸ ಆರಂಭ

ಶೀರ್ಷಿಕೆಯ ಟ್ಯಾಗ್ ಲೈನ್ 'ಹೊಸ ಆರಂಭ' ಹೇಳುವಂತೆ ಪ್ರತಿ ಅಧ್ಯಾಯದಲ್ಲೂ ಹೊಸದೊಂದು ರೀತಿಯ ಆಯಾಮವನ್ನು ತರಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಈ ಕಾರ್ಯಕ್ರಮದಲ್ಲಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಜ್ಞರ ಸಲಹೆ ಅನುಭವಿಗಳ ಮಾರ್ಗದರ್ಶನ ಪಡೆದು ಸುಜ್ಞಾನದಿಂದ ವಿಷಯವನ್ನು ಪರಾಮರ್ಶಿಸಿ ಪರಿಹಾರ ಸೂಚಿಸಲಾಗುವುದು. ಅಲ್ಲದೇ ಇಲ್ಲಿ ಬರುವ ಸೋತ ಮನಸ್ಸುಗಳಿಗೆ ಕಾನೂನು ಸಲಹೆ ನೀಡಿ ಮಾನಸಿಕವಾಗಿ ಧೈರ್ಯ ತುಂಬಿಕೊಡಲಾಗುತ್ತದೆ ಎಂಬುದು ವಾಹಿನಿಯ ಅಭಿಪ್ರಾಯ.

ನಟಿ ಶ್ರುತಿ ಏನಂತಾರೆ.?

ನಟಿ ಶ್ರುತಿ ಏನಂತಾರೆ.?

ನಟಿ ಶ್ರುತಿ ಹೇಳುವಂತೆ 'ಸಮಾಜದಲ್ಲಿ ಕೆಲ ಮೂಢನಂಬಿಕೆಗಳನ್ನು, ಆಕಸ್ಮಿಕವಾಗಿ ಬಂದೊದಗಿದ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಲು, ಜನರ ಕಷ್ಟಗಳನ್ನು ಆಲಿಸಿ ಅವರಿಗೆ ಸಾಮಾಜಿಕ ನ್ಯಾಯ ಒದಗಿಸುವುದು ಸುಲಭದ ಕಾರ್ಯವಲ್ಲ. ಅಂತಹ ಮಹತ್ತರ ಜವಾಬ್ದಾರಿಯುತ ಸ್ಥಾನಕ್ಕೆ ನಾನು ಯಾವುದೇ ಧಕ್ಕೆ ಬಾರದ ಹಾಗೆ ಜನರ ಕಷ್ಟಕ್ಕೆ ಸ್ಪಂದಿಸಿ ಜನರ ಸೇವೆ ಮಾಡಲು ಸಿದ್ಧಳಿದ್ದೇನೆ. ಒಬ್ಬರ ನೋವನ್ನು ಕೇಳಿ 'ಅಯ್ಯೋ ಪಾಪಾ..' ಎನ್ನುವುದಕ್ಕಿಂತ ಅವರ ಜೀವನವನ್ನು ಸುಧಾರಿಸುವ ಕಾರ್ಯವನ್ನು ಈ ಕಾರ್ಯಕ್ರಮದ ಮೂಲಕ ಮಾಡುತ್ತಿರುವುದು ನನಗೆ ಖುಷಿ ತಂದಿದೆ ಎನ್ನುತ್ತಾರೆ.

ಪ್ರಸಾರ ಯಾವಾಗ.?

ಪ್ರಸಾರ ಯಾವಾಗ.?

ಹೊಸ ಆಯಾಮದ ಹೊಸ ಆರಂಭ 'ಸತ್ಯಕಥೆ' ಸೋಮವಾರ (28.08.2017)ದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1 ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Karnataka’s leading entertainment channel Udaya TV is launching a new non fiction show called Sathyakathe. This program is hosted by Kannada Actress Shruthi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X