»   » ಉದಯ ಟಿವಿಯ 'ಜೀವನದಿ'ಗೆ 50ನೇ ಸಂಚಿಕೆಯ ಸಂಭ್ರಮ

ಉದಯ ಟಿವಿಯ 'ಜೀವನದಿ'ಗೆ 50ನೇ ಸಂಚಿಕೆಯ ಸಂಭ್ರಮ

Posted By:
Subscribe to Filmibeat Kannada

ಕಿರುತೆರೆಯಲ್ಲಿ ಉದಯ ಟಿವಿ ಎಂದರೆ ಎಂತಹವರಿಗೂ ಒಂದು ಬಾಂಧವ್ಯ ನೆನಪಾಗುತ್ತದೆ. ಏಕೆಂದರೆ 2 ದಶಕಗಳಿಂದ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿಯಾಗಿರುವ ವಾಹಿನಿ ಉದಯ ಟಿವಿ. ಈಗ ಇದೇ ಉದಯ ವಾಹಿನಿ ಮತ್ತೊಂದು ಸಡಗರದಲ್ಲಿದೆ.

ಸಂದರ್ಶನ: 'ಜೀವನದಿ' ದೀಪಿಕಾಗೆ ಪುನೀತ್ ಎಂದರೆ ಬಲು ಇಷ್ಟ..

ಅದೇನೆಂದರೆ ಮೇ 8 ರಂದು ಪ್ರಾರಂಭವಾದ 'ಜೀವನದಿ' ಎಂಬ ಧಾರಾವಾಹಿ ಈಗ 50 ಸಂಚಿಕೆಗಳನ್ನು ಪೂರೈಸುತ್ತಿರುವುದು. ಈ ಧಾರಾವಾಹಿಯನ್ನು ಮೀಡಿಯಾ ಹೌಸ್ ಮತ್ತು ಸಂಗಮ ಫಿಲ್ಮ್ ನೆಟ್ವರ್ಕ್ ಲಾಂಛನದ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಇದು ಲೇಖಕಿ ಸರಸ್ವತಿ ನಟರಾಜನ್ ರವರ 'ಜ್ಯೋತಿ' ಎಂಬ ಕಾದಂಬರಿಯಾಧರಿತ ಕಥೆಯನ್ನು ಹೊಂದಿದೆ.

Udaya tv serial 'Jeevanadi' reached 50th episode

'ಜೀವನದಿ' ಧಾರಾವಾಹಿಯಲ್ಲಿ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಸ್ಫೂರ್ತಿ ನೀಡುವ ಹಲವು ಅಂಶಗಳಿವೆ. ಕಾರಣ ಒಂದು ಹೆಣ್ಣು ಹೇಗೆ ತನ್ನ ಸಹನೆಯನ್ನೆ ಅಸ್ತ್ರವಾಗಸಿಕೊಂಡು ತನ್ನೆಲ್ಲ ಕಷ್ಟಗಳನ್ನು ಮೆಟ್ಟಿ ಜೀವನದಲ್ಲಿ ಗುರಿ ಮುಟ್ಟುತ್ತಾಳೆ ಎಂಬ ಕಥಾಹಂದರವನ್ನು ಹೊಂದಿದೆ.

ಪ್ರಕಾಶ್ ರೈ ರಿಂದ ಪ್ರಭಾವಿತರಾದ ಮನೋಜ್ 'ಜೀವನದಿಗೆ' ವಿಲನ್ ಆದ ಕತೆ!

ಧಾರಾವಾಹಿಯಲ್ಲಿ ಜ್ಯೋತಿಯ ಪಾತ್ರವನ್ನು ದೀಪಿಕಾ ವೆಂಕಟೇಶ್ ನಿರ್ವಹಿಸುತ್ತಿದ್ದು, ಮುಖ್ಯ ಭೂಮಿಕೆಯಲ್ಲಿ ಹಿರಿಯ ಕಲಾವಿದರಾದ ನಾಗೇಂದ್ರ ಶಾ, ಸುನೇತ್ರಾ ಪಂಡಿತ್, ಪುಷ್ಪಾ, ಅನಿಲ್ ಮುಂತಾದವರು ಇದ್ದಾರೆ. ಕಿರುತೆರೆಯ ಹಿರಿಯ ಬರಹಗಾರ ಮತ್ತು ನಿರ್ದೇಶಕ ಬಿ.ಸುರೇಶ್ ರವರ ಸಾರಥ್ಯ ಈ ಧಾರಾವಾಹಿಗೆ ಇದೆ. 50 ಸಂಚಿಕೆ ಪೂರ್ಣಗೊಂಡಿರುವ 'ಜೀವನದಿ' ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

English summary
Udaya tv serial 'Jeevanadi' reached 50th episode.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada