For Quick Alerts
  ALLOW NOTIFICATIONS  
  For Daily Alerts

  500ರ ಸಂಭ್ರಮದಲ್ಲಿ ಜೋ ಜೋ ಲಾಲಿ ಟೀಂ

  |

  ಅನೇಕ ಮನರಂಜನಾ ಸಾಧನೆಗಳನ್ನು 25 ವರ್ಷಗಳಿಂದ ಮಾಡುತ್ತಾ ಬಂದಿರುವ ಉದಯ ಟವಿ ಕರುನಾಡ ಜನತೆಗೆ ಬಲು ಪ್ರೀತಿಯ ಚಾನಲ್. ವಿಶಿಷ್ಟ ಮತ್ತು ವಿನೂತನ ಕಥೆ ಗಳನ್ನು ನೀಡುತ್ತೀರುವ ಸಾಕಷ್ಟು ಧಾರಾವಾಹಿಗಳು ಸಾವಿರಾರು ಕಂತುಗಳನ್ನು ಪೂರೈಸಿ ಯಶಸ್ವಿಯಾಗಿವೆ. ಅವುಗಳ ಸಾಲಿನಲ್ಲಿ ಈಗ "ಜೋ ಜೋ ಲಾಲಿ" ಧಾರಾವಾಹಿ ಕೂಡ ಸೇರಿಕೊಂಡಿದೆ. ಈ ಧಾರಾವಾಹಿ ಈಗ 500 ಕಂತನ್ನು ಯಶಸ್ವಿಯಾಗಿ ಮುಗಿಸಿದೆ.

  ಆದರ್ಶ ದಂಪತಿಯಂತೆ ಇರುವ ರುಕ್ಮಿಣಿ ಮಾಧವನ ಜೋಡಿ ಒಂದ್ಕಡೆ, ರಾಧಾ ಪ್ರೀತಂ ಪವಿತ್ರ ಪ್ರೀತಿ ಇನ್ನೊಂದೆಡೆ, ಇವರುಗಳ ಜೊತೆಗೆ ಯಾರನ್ನೂ ನೆಮ್ಮದಿಯಿಂದ ಇರೋಕೆ ಬಿಡದ ವಿರೋಧಿ ಮಹೇಶ್ವರಿ, ಪ್ರತಿ ಪಾತ್ರವೂ ವಿಶೇಷ, ವಿಭಿನ್ನ ಮತ್ತು ಮನಸ್ಸು ಮುಟ್ಟುವಂತದ್ದಾಗಿದ್ದು ಈ ಧಾರಾವಾಹಿ ಉನ್ನತಿಗೆ ಕಾರಣವಾಗಿದೆ.

  ಉದಯ ಟಿವಿಯಲ್ಲಿ ಹೊಸ ಧಾರಾವಾಹಿ 'ಕ್ಷಮಾ'

  ಈ ಧಾರಾವಾಹಿ ಈಗ ಮಹತ್ತರ ತಿರುವು ಪಡೆದಿದೆ. ಕಥೆಯಲ್ಲಿ ನಿಖಿಲ್ ಅನ್ನೋ ಒಂದು ಹೊಸ ಪಾತ್ರದ ಪರಿಚಯವಾಗಿದೆ, ಸಾವಿಗೆ ಹತ್ತಿರವಾಗುತ್ತಿರುವ ರುಕ್ಮಿಣಿ, ಸೇಡು ಹೊತ್ತಿರೊ ಮಹೇಶ್ವರಿ , ಅವಳ ಸಹಾಯಕ್ಕೆ ನಿಂತಿರೊ ನಿಖಿಲ್, ರಾಧಾ ಪ್ರೀತಂ ಮದುವೆ ಹೀಗೆ ಹಲವಾರು ವಿಷಯಗಳ ಜೊತೆಗೆ ಕುತೂಹಲದಿಂದ ಕೂಡಿರುವ ಜೋ ಜೋ ಲಾಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.

  ಜ್ಯೋತಿ ರೈ , ನಾರಾಯಣ ಸ್ವಾಮಿ , ಮಹಾಲಕ್ಷ್ಮಿ , ರಘು ಬೀರೂರ್, ಕೃಷ್ಣ ನಾಡಿಗ್ , ನಯನಾ ಶೆಟ್ಟಿ , ದೇವಯ್ಯ ಹೀಗೆ ಅದ್ಭುತ ತಾರಾ ಬಳಗ ಹೊಂದಿದ ತಾಯಿ ಮಗುವಿನ ಬಾಂಧವ್ಯದ ಅಪರೂಪದ ಕಥೆಯನ್ನು ಹೇಳುವ "ಜೋ ಜೋ ಲಾಲಿ" ಪ್ರೇಕ್ಷಕರ ನೆಚ್ಚಿನ ಧಾರಾವಾಹಿಯಾಗಿದೆ.

  'ಮಾನಸ ಸರೋವರ'ದಲ್ಲಿ ಅದ್ದೂರಿ ಮದುವೆ ಸಂಭ್ರಮ

  "ಈ ಧಾರಾವಾಹಿ ನನ್ನ ವೃತ್ತಿ ಬದುಕಲ್ಲಿ ಬಹಳ ವಿಶೀಷ ಪಾತ್ರ ವಹಿಸುತ್ತದೆ. ಇಂದು ನಮ್ಮ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. 500 ಸಂಚಕೆ ಪೂರೈಸಿದ್ದು ಬಹಳ ತೃಪ್ತಿ ಕೊಟ್ಟಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ನನ್ನ ಕೃತಜ್ಞತೆಗಳು'' ಎಂದು ಜೋ ಜೋ ಲಾಲಿಯ ನಿರ್ದೆಶಕ ಶಿಡ್ಲಘಟ್ಟ ಶ್ರೀನಿವಾಸ್ ಹೇಳಿದ್ದಾರೆ.

  "ಕಥೆಯ ವೇಗಕ್ಕೆ ಅನುಸಾರವಾಗಿ ಪಾತ್ರಗಳಿಗೆ ತಕ್ಕಂತೆ ಕಥೆಯನ್ನು ಬರೆದಿರುವುದು ಬಹಳ ಸಂತಸ ತಂದಿದೆ. ಇದಕ್ಕೆ ಸ್ಪಂದಿಸಿದ ನನ್ನ ತಂಡಕ್ಕೆ ಧನ್ಯವಾದಗಳು ಹಾಗೆ ವೀಕ್ಷಕರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು" ಎಂದು ಕಥೆಗಾರ ಶೇಖರ ಸಂತಸ ಹಂಚಿಕೊಂಡಿದ್ದಾರೆ.

  "500ರ ಸಂಭ್ರಮದಲ್ಲಿ ನಾವಿದ್ದೀವಿ ಎನ್ನುವುದು ಸಂತಸದ ವಿಷಯ. ನಾನು ಎಲ್ಲಿಗೇ ಹೋಗಲಿ ರುಕ್ಮಿಣಿ ಎಂತಲೇ ಕರೆಯುತ್ತಾರೆ ಅಷ್ಟೋಂದು ಜನಕ್ಕೆ ಹತ್ತಿರವಾಗಿದ್ದೇನೆ ಎನ್ನುವುದು ಖುಷಿಯ ಸಂಗತಿ.ಅದಕ್ಕಾಗಿ ನಮ್ಮನ್ನು ಹಾರೈಸಿದ ವೀಕ್ಷಕರಿಗೆ ರುಣಿಯಾಗಿದ್ದೇನೆ" ಎನ್ನುವುದು ನಟಿ ಜ್ಯೋತಿ ರೈ ಅವರ ಅಭಿಪ್ರಾಯ. ಜೋ ಜೋ ಲಾಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6:30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

  English summary
  Udaya tv famous serial jo jo laali complets 500 episodes. serial team has shared happy about 500 episode.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X