Radhika Serial: ರಾಧಿಕಾಳಿಗೆ ಪ್ರಪೋಸ್ ಮಾಡೋದಕ್ಕೆ ಚಿರಂತ್ ಸರ್ಕಸ್, ಮುಂದೇನಾಯ್ತು?

By ಎಸ್ ಸುಮಂತ್

ಕಾವ್ಯಾ ಶಾಸ್ತ್ರಿ ಮತ್ತೆ ಕಿರುತೆರೆಗೆ ಮರಳಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ರಾಧಿಕಾ ಅನ್ನೋ ಮಹಿಳಾ ಪ್ರಧಾನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಕೆಲವೊಂದು ಕಾರಣಕ್ಕೆ ಎಲ್ಲಾ ವರ್ಗದವರಿಗೂ ತೀರಾ ಹತ್ತಿರವಾಗಿದೆ. ತಾಯಿ, ತಮ್ಮ, ಅತ್ತಿಗೆ, ಮಕ್ಕಳು, ತಂಗಿ, ಅಣ್ಣನಿಗಾಗಿ ತನ್ನಿಡಿ ಸಂಪಾದನೆಯನ್ನು ನೀಡುತ್ತಿರುವ ರಾಧಿಕಾ ತನ್ನೆಲ್ಲಾ ಆಸೆ ಕನಸುಗಳನ್ನೇ ಕೊಂದುಕೊಂಡು ಬದುಕುತ್ತಿದ್ದಾಳೆ. ಇಂಥ ಮನೋಭಾವವುಳ್ಳ ಅದೆಷ್ಟೋ ಹೆಣ್ಣು ಮಕ್ಕಳು ನಮ್ಮ ಸಮಾಜದಲ್ಲಿಯೂ ಸಿಗುತ್ತಾರೆ. ಆ ಒಂದು ಕಾರಣಕ್ಕೂ ಈ ಧಾರಾವಾಹಿ ಮನಸ್ಸಿಗೆ ಹತ್ತಿರ ಎನಿಸದೆ ಇರಲು ಸಾಧ್ಯವಿಲ್ಲ.

ಅತ್ತ ರಾಧಿಕಾ ಫ್ಯಾಮಿಲಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟರೆ ಇತ್ತ ಹೆತ್ತ ತಾಯಿಯ ಮನಸ್ಸು ಯಾವಾಗಲೂ ಮಗಳ ಬಗ್ಗೆಯೇ ಯೋಚಿಸುತ್ತಿರುತ್ತದೆ. ಮಗಳ ಭವಿಷ್ಯಕ್ಕಾಗಿ ಸಕಲ ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಒಳ್ಳೆಯ ವರನನ್ನು ಹುಡುಕುತ್ತಿದ್ದಾರೆ. ಆದರೆ, ಚಿರಂತನ್ ಪಾಪ ತನ್ನ ಪ್ರೀತಿಯನ್ನು ಹೇಳಿಕೊಳ್ಳಲಾಗದೆ ಒದ್ದಾಡುತ್ತಿದ್ದಾನೆ.

ಆಸ್ಪತ್ರೆ ಕಿತಾಪತಿಯಿಂದ ರಾಧಿಕಾಗೆ ಸಂಕಷ್ಟ!

ಆಸ್ಪತ್ರೆ ಕಿತಾಪತಿಯಿಂದ ರಾಧಿಕಾಗೆ ಸಂಕಷ್ಟ!

ರಾಧಿಕಾ ಒಬ್ಬ ಉತ್ತಮ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ಆಕೆಯ ಡ್ಯೂಟಿ ತುಂಬಾ ಅಂದ್ರೆ ತುಂಬಾ ಆನೆಸ್ಟ್ ಆಗಿದೆ. ರೋಗಿಗಳನ್ನು ಬಹಳ ಆತ್ಮೀಯತೆಯಿಂದ ಮಾತಾಡಿಸುತ್ತಾಳೆ, ಉಪಚರಿಸುತ್ತಾಳೆ. ಇದೇ ಕಾರಣಕ್ಕಾಗಿಯೇ ಆಸ್ಪತ್ರೆಗೆ ಅಡ್ಮಿಟ್ ಆಗುವವರೆಲ್ಲಾ ಮೊದಲ ಭೇಟಿಯಲ್ಲೇ ನಮಗೆ ರಾಧಿಕಾ ನರ್ಸ್ ಇರಲಿ ಎನ್ನುತ್ತಿದ್ದಾರೆ. ಇದು ಸಹಜವಾಗಿಯೇ ಸಹೋದ್ಯೋಗಿಗಳಿಗೆ ಎಲ್ಲಿಲ್ಲಿದ ಕೋಪ ತರಿಸಿದೆ. ಹೇಗಾದರೂ ಮಾಡಿ ರಾಧಿಕಾಳನ್ನು ಇಲ್ಲಿಂದ ಹೊರ ಹಾಕಲೇಬೇಕೆಂಬ ಯೋಜನೆಯಲ್ಲಿದ್ದಾರೆ.

ರಾಧಿಕಾ ಬ್ಯಾಗ್‌ನಲ್ಲಿ ಮೊಬೈಲ್

ರಾಧಿಕಾ ಬ್ಯಾಗ್‌ನಲ್ಲಿ ಮೊಬೈಲ್

ಇದರ ಫಲವಾಗಿ ರೋಗಿಯ ಸಂಬಂಧಿಕರೊಬ್ಬರ ಮೊಬೈಲ್ ಕಳವು ಮಾಡಿ ರಾಧಿಕಾ ಬ್ಯಾಗ್‌ನಲ್ಲಿಡಲಾಗುತ್ತದೆ. ರೋಗಿಯ ಸಂಬಂಧಿಕರು ಹುಡುಕಾಡುವಾಗ ಹೇಗಾದರೂ ಮಾಡಿ ರಾಧಿಕಾಳನ್ನು ಸಿಕ್ಕಿ ಬೀಳಿಸುವ ಹುನ್ನಾರ ಮಾಡಿದ್ದವರೇ ನ್ಯಾಯ ಪಂಚಾಯ್ತಿ ಮಾಡಲು ಬಂದಿದ್ದಾರೆ. ಎಲ್ಲರ ಬ್ಯಾಗ್ ಚೆಕ್ ಮಾಡುವ ನಾಟಕವಾಡಿ, ಕಡೆಗೆ ರಾಧಿಕಾ ಬ್ಯಾಗ್‌ನಲ್ಲಿಯೇ ಸಿಗುವಂತೆ ಮಾಡುತ್ತಾರೆ. ಆದರೆ ಇದೆಲ್ಲ ಕೆಟ್ಟದಾಗಲೂ ಚಿರಂತನ್ ಬಿಡಬೇಕಲ್ಲ. ನೋ ವೇ ಚಾನ್ಸೇ ಇಲ್ಲ.

ಮಗನ ಪ್ರೀತಿ ಕಾಪಾಡಲು ಆಸ್ಪತ್ರೆ ಸೇರಿದ ತಂದೆ

ಮಗನ ಪ್ರೀತಿ ಕಾಪಾಡಲು ಆಸ್ಪತ್ರೆ ಸೇರಿದ ತಂದೆ

ರಾಧಿಕಾ ಮತ್ತು ಚಿರಂತ್ ಜೊತೆಯಲ್ಲೇ ಓದಿದವರು. ಓದುವಾಗಿನಿಂದಲೂ ಚಿರಂತ್‌ಗೆ ರಾಧಿಕಾ ಕಂಡರೆ ಸಿಕ್ಕಾಪಟ್ಟೆ ಪ್ರೀತಿ. ಆದರೆ ಹೇಳಿಕೊಳ್ಳುವ ಹಾಗಿಲ್ಲ. ಯಾಕಂದ್ರೆ ರಾಧಿಕಾ ಯಾರಿಗಾಗಿ ಇಷ್ಟೆಲ್ಲಾ ತನ್ನ ಜೀವನವನ್ನು ತ್ಯಾಗ ಮಾಡುತ್ತಿದ್ದಾರೆ ಅನ್ನೋದು ಚಿರಂತ್‌ಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ಹೀಗಾಗಿಯೇ ರಾಧಿಕಾ ಮುಂದೆ ತನ್ನ ಪ್ರೀತಿ ಹೇಳಿಕೊಳ್ಳುವುದಕ್ಕೆ ಭಯ ಪಡುತ್ತಿದ್ದಾನೆ. ಚಿರಂತ್ ಇವತ್ತು ಇಷ್ಟು ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗುವುದರ ಹಿಂದೆ ರಾಧಿಕಾ ಸ್ಪೂರ್ತಿಯೇ ಕಾರಣ. ಹೀಗಾಗಿ ತನ್ನ ಸಹಪಾಠಿಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ.

ಈ ವಿಚಾರ ಚಿರಂತನ್ ಅಪ್ಪನಿಗೆ ಗೊತ್ತಾಗಿ ಬಿಟ್ಟಿದೆ. ಮಗನ ಪ್ರೀತಿಯನ್ನು ಹೇಗಾದರೂ ಮಾಡಿ ಸೊಸೆಗೆ ತಿಳಿಸಬೇಕೆಂದು ಪ್ರಯತ್ನ ಪಡುತ್ತಾನೆ. ಇದಕ್ಕಾಗಿಯೇ ಮಗನನ್ನು ಸೊಸೆ ಇರುವ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಪೋಸ್ ಮಾಡಲೇಬೇಕೆಂದು ತಂದೆಯೇ ಒತ್ತಾಯ ಮಾಡುತ್ತಿದ್ದಾರೆ. ಮಗ ರಾಧಿಕಾ ಹಿಂದೆ ಹಿಂದೆ ಹೋಗುವುದನ್ನು ವಿಡಿಯೋ ಮಾಡುತ್ತಾರೆ. ಇದೇ ವಿಡಿಯೋ ರಾಧಿಕಾಳ ಕಳ್ಳಿ ಅಲ್ಲ ಅನ್ನೋದನ್ನು ಪ್ರೂವ್ ಮಾಡೋದಕ್ಕೂ ಸುಲಭವಾಗಿದೆ.

ಅಪ್ಪ ಮಾದಿ ಎಡವಟ್ಟು ಏನು?

ಅಪ್ಪ ಮಾದಿ ಎಡವಟ್ಟು ಏನು?

ತಂದೆ ಮಗ ಸ್ನೇಹಿತರಂತೆ ಇರುವುದು ಕಾಮನ್. ಪ್ರಪಂಚದ ಬೆಸ್ಟ್ ಫ್ರೆಂಡ್ಸ್ ಇವರಿಬ್ಬರಾಗಿರುತ್ತಾರೆ. ಅದೇ ಥರ ಚಿರಂತ್ ಮತ್ತು ಅವರ ತಂದೆ ಇದ್ದಾರೆ. ಮಗ ಪ್ರಪೋಸ್ ಮಾಡುತ್ತಾನೆ ಅಂತ ಕಾಯುತ್ತಿದ್ದ ತಂದೆಗೆ ಕಾತುರ ಹೆಚ್ಚಾಗಿದೆ. ಇದರಿಂದ ಮಗನ ಮೊಬೈಲ್ ತೆಗೆದುಕೊಂಡು ಸೊಸೆಗೆ ಐ ಲವ್ ಯೂ ಅಂತ ಕಳುಹಿಸಿಯೇ ಬಿಟ್ಟಿದ್ದಾರೆ. ಇದು ಚಿರಂತ್‌ಗೆ ಗೊತ್ತಾಗಿ ಬಾಲ ಸುಟ್ಟ ಬೆಕ್ಕಿನಂತೆ ಒದ್ದಾಡುತ್ತಿದ್ದಾನೆ. ತಂದೆ ಮಾಡಿದ ಮೆಸೇಜನ್ನು ನೋಡುವುದಕ್ಕೂ ಮುನ್ನ ಆ ಮೆಸೇಜ್ ಡಿಲೀಟ್ ಮಾಡೋದಕ್ಕೆ ಸಿಕ್ಕಾಪಟ್ಟೆ ಒದ್ದಾಟ ನಡೆಸುತ್ತಿದ್ದಾನೆ. ಆತನ ಒದ್ದಾಟ ನೋಡಿ ಪ್ರೇಕ್ಷಕರು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

More from Filmibeat

English summary
Udaya Tv Serial Radhika Written Update On April 7th Episode. Here Is The Details About Chiranth Circus To Propose Radhika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X