Udaya Yugadi: ಯುಗಾದಿ ಸಂಭ್ರಮದಲ್ಲಿ ಮಿಂದೆದ್ದ ಉದಯ ಬಳಗ

By ಎಸ್ ಸುಮಂತ್

ಇತ್ತೀಚೆಗೆ ಧಾರಾವಾಹಿಗಳು ಬಹಳ ಅದ್ದೂರಿಯಾಗಿ ಮೂಡಿ ಬರುತ್ತಿವೆ. ಯಾವ ಸಿನಿಮಾಗಳಿಗೂ ಧಾರಾವಾಹಿ ಕಡಿಮೆ ಇರಲ್ಲ. ಮದುವೆ, ಹಬ್ಬ ಹೀಗೆ ನಾನಾ ಸಂಭ್ರಮಗಳನ್ನು ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಸೀರಿಯಲ್‌ಗಳನ್ನು ರಿಚ್ ಆಗಿಯೇ ತೋರಿಸಲಾಗುತ್ತದೆ. ಹಿಂದೆಲ್ಲಾ ಧಾರಾವಾಹಿಗಳಲ್ಲಿ ಹಬ್ಬ ಹರಿದಿನಗಳ ಆಚರಣೆಯನ್ನು ಇಷ್ಟೊಂದು ಜೋರಾಗಿ ಆಚರಣೆ ಮಾಡುತ್ತಿರಲಿಲ್ಲ. ಕಾಲ ಬದಲಾದಂತೆ ಧಾರಾವಾಹಿಗಳನ್ನು ಪ್ರೊಡ್ಯೂಸ್ ಮಾಡುತ್ತಿರುವ ರೀತಿ ನೀತಿಯೂ ಬದಲಾವಣೆಯಾಗಿದೆ. ಅದರಂತೆ ಪ್ರತಿಯೊಂದು ಹಬ್ಬವನ್ನು ಅಂದಿನ ದಿನವೇ ಆಚರಿಸುತ್ತಾರೆ.

ಉದಯ ಯುಗಾದಿ ಬಹಳ ಜೋರಾಗಿದೆ. ಒಂದೊಂದು ಧಾರಾವಾಹಿಯಲ್ಲೂ ಯುಗಾದಿ ಸಂಭ್ರಮ ಕಳೆಗಟ್ಟಿದೆ. ಅಷ್ಟೆ ಅಲ್ಲ ಟ್ವಿಸ್ಟ್ ಗಳು ಹೆಚ್ಚಾಗಿವೆ. ಯುಗಾದಿಯ ಸಂವತ್ಸರದಿಂದ ಧಾರಾವಾಹಿಗಳಲ್ಲೂ ತಿರುವು ಪಡೆದುಕೊಂಡಿದೆ. 'ಕಸ್ತೂರಿ ನಿವಾಸ'ದಲ್ಲಿ ಸಡಗರ ಮನೆ ಮಾಡಿದ್ದರೆ, 'ಅಣ್ಣ ತಂಗಿ'ಯಲ್ಲಿ ತುಳಸಿಯ ಹಸೆ ಮಣೆಗೆ ಬೇವು ಬೆಲ್ಲದ ತೋರಣ ಕಟ್ಟಿ ಆಗಿದೆ. ತಾಯಿ ಮಗನ ಬಾಂಧವ್ಯಕ್ಕೆ ಯುಗಾದಿ ಹಬ್ಬವೇ 'ನಯನತಾರಾ'ದಲ್ಲಿ ಸೇತುವೆಯಾಗಿದೆ. ಮನೆಯಲ್ಲಿಲ್ಲದ ಸಂಭ್ರಮ ಮನದಲ್ಲಿದೆ ಅಂತಿದೆ 'ಸೇವಂತಿ' ಟೀಂ.

ಸಂದೇಶ ನೀಡಿ ಹಬ್ಬ ಆಚರಣೆ

ಸಂದೇಶ ನೀಡಿ ಹಬ್ಬ ಆಚರಣೆ

ನಮ್ಮಲ್ಲಿ ಒಂದೊಂದು ಹಬ್ಬಕ್ಕೂ ಒಂದೊಂದು ಅರ್ಥವಿದೆ. ಒಂದೊಂದು ಹಬ್ಬದಲ್ಲೂ ಒಂದೊಂದು ಕೊಡು ಕೊಳ್ಳುವಿಕೆ ಇರುತ್ತದೆ. ಅದರಂತೆಯೇ ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ಹಂಚಿ ಬಾಳು ಸಿಹಿಯಾಗಲಿ ಎಂದು ಹಾರೈಸುವುದುಂಟು. ಯುಗಾದಿ ಒಂದು ರೀತಿಯಲ್ಲಿ ಹೊಸ ವರುಷವೇ. ಈ ಯುಗಾದಿಗೆ ಬೇವು ಬೆಲ್ಲದ ಸಂದೇಶವನ್ನು ಉದಯ ಟಿವಿ ಟೀಂ ತಿಳಿಸಿಕೊಟ್ಟಿದೆ.

ಕಸ್ತೂರಿ ನಿವಾಸ ಟೀಂ ಹೇಳಿದ್ದೇನು?

ಕಸ್ತೂರಿ ನಿವಾಸ ಟೀಂ ಹೇಳಿದ್ದೇನು?

'ಕಸ್ತೂರಿ ನಿವಾಸ' ಮನೆಯಲ್ಲೂ ಹಬ್ಬದ ಸಡಗರ ಮನೆ ಮಾಡಿದೆ. ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿರುವ 'ಕಸ್ತೂರಿ ನಿವಾಸ' ಕುಟುಂಬ, ತಮ್ಮ ಪ್ರೇಕ್ಷಕ ವರ್ಗಕ್ಕೂ ಶುಭಕೋರಿದ್ದಾರೆ. "ಬದುಕು ಅನ್ನೋದು ಬೇವು ಬೆಲ್ಲ ಇದ್ದ ಹಾಗೆ. ಸುಖಾನು ಇರುತ್ತೆ, ದುಃಖನೂ ಇರುತ್ತೆ. ಸುಖ ಬಂದಾಗ ಹಿಗ್ಗದೆ, ದುಃಖ ಬಂದಾಗ ಕುಗ್ಗದೆ ಒಟ್ಟಾಗಿ ಜೀವನ ನಡೆಸಬೇಕು. ಅದೇ ನಿಜವಾದ ಜೀವನ. ಈ ಯುಗಾದಿಯಂದು, ನಿಮ್ಮೆಲ್ಲರ ಕಹಿ ಮಾಯವಾಗಿ ನಿಮ್ಮೆಲ್ಲರ ಬಾಳಲ್ಲೂ ಸಿಹಿಯೇ ತುಂಬಲಿ. ಈ ಹೊಸ ಸಂವತ್ಸರ ಎಲ್ಲರ ಬಾಳನ್ನು ಬೆಳಗಿಸಲಿ. ನಿಮ್ಮೆಲ್ಲರ ಕುಟುಂಬದ ಹಾರೈಕೆ ಈ ಕುಟುಂಬದ ಮೇಲಿರಲಿ. ಕಸ್ತೂರಿ ನಿವಾಸ ಕುಟುಂಬದಿಂದ ಯುಗಾದಿಯ ಶುಭಾಶಯಗಳು" ಎಂದು ತಿಳಿಸಿದ್ದಾರೆ‌

ಸುಂದರಿ, ಕನ್ಯದಾನ ತಂಡದಿಂದ ಶುಭಾಶಯ

ಸುಂದರಿ, ಕನ್ಯದಾನ ತಂಡದಿಂದ ಶುಭಾಶಯ

"ಈ ಯುಗಾದಿ ಹಬ್ಬ ಆಚರಣೆ ಮಾಡುವುದು ಜೀವನದಲ್ಲಿ ಬರುವ ಸಿಹಿ ಕಹಿ ಎರಡನ್ನು ಸಮನಾವಾಗಿ ಸ್ವೀಕರಿಸಲೆಂದು. ಅದನ್ನು ಅರ್ಥೈಸಿಕೊಂಡರೆ ಬಾಳು ಬಂಗಾರವಾಗುತ್ತೆ. ಅದೇ ಸಂದೇಶವನ್ನು ಸಾರಿದೆ ಸುಂದರಿ ‌ಮತ್ತು ಕನ್ಯದಾನಾ ಟೀಂ. ಎಲ್ಲರ ಜೀವನದಲ್ಲೂ ಸುಖ ದುಃಖ ಇರುತ್ತೆ. ಸುಖ ಬಂದಾಗ ಹಿಗ್ಗದೆ, ದುಃಖ ಆದಾಗ ಕುಗ್ಗದೆ ಜೀವನ ನಡೆಸೋಣಾ. ಈ ಯುಗಾದಿ ನಿಮ್ಮ ಜೀವನದಲ್ಲಿರುವ ಕಹಿಯನ್ನು ಕಡಿಮೆ ಮಾಡಿ ಸಿಹಿಯನ್ನು ಹೆಚ್ಚಿಸಲಿ. ಯುಗಾದಿ ಹಬ್ಬದ ಶುಭಾಶಯಗಳು" ಎಂದು ಹರಸಿದ್ದಾರೆ.

Recommended Video

KGF 2| ವಿದೇಶದಲ್ಲಿ ಹೇಗಿದೆ ನೋಡಿ 'ಕೆಜಿಎಫ್2' ಟಿಕೆಟ್ ಬುಕ್ಕಿಂಗ್ ಕ್ರೇಝ್! | Filmibeat Kannada
ಮದುಮಗಳು ಹೇಳಿದ್ದೇನು?

ಮದುಮಗಳು ಹೇಳಿದ್ದೇನು?

'ಮದುಮಗಳು' ಧಾರಾವಾಹಿ ಇತ್ತೀಚೆಗೆ ಆರಂಭವಾಗಿರುವ ಧಾರಾವಾಹಿ. ಅಂತಸ್ತು, ಅಧಿಕಾರ ಅಂತ ಗತ್ತು ಮೆಂಟೈನ್ ಮಾಡುತ್ತಿರುವ ಅತ್ತೆ ಒಂದು ಕಡೆ, ಎಲ್ಲರೂ ಸಮಾನರೆ ಎಂದು ಮುನ್ನುಗ್ಗುವ ಸೊಸೆ ಇನ್ನೊಂದು ಕಡೆ. ಭವಿಷ್ಯದಲ್ಲಿ ಅತ್ತೆ ಸೊಸೆಯಾಗಿ ಇವರಿಬ್ಬರ ಕಾದಾಟ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದೀಗ ಮದುಮಗಳು ಟೀಂನಿಂದಲೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೀವನ ನೋವು ನಲಿವಿನ ಸಂಗಮ. ನೋವೆಂಬ ಬೇವು ಕಡಿಮೆಯಾಗಿ, ನಲಿವೆಂಬ ಬೆಲೆ ಹೆಚ್ಚಾಗಲಿ. ದುಃಖ ಕಡಿಮೆಯಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ ಎಂದು ಹಾರೈಸಿದ್ದಾರೆ.

More from Filmibeat

English summary
Udaya Tv serial Team Written Update on Ugadi celebration. Here is the details about Serial team wishes
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X