ಮುಂದಿನ ವಾರವೇ ಶುರು ಹೊಸ ಧಾರಾವಾಹಿ: ಯಾರೆಲ್ಲಾ ಇದ್ದಾರೆ ನೋಡಿ
ಉದಯ ಟಿವಿಯಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರಕ್ಕೆ ಸಜ್ಜಾಗಿದೆ. ಅದಾಗಲೇ 'ಸಿಂಧು ಭೈರವಿ' ಧಾರಾವಾಹಿ ಪ್ರೊಮೋಗಳನ್ನು ಎಲ್ಲರೂ ನೋಡಿದ್ದೀರಾ.
ಇದೀಗ ಮುಂದಿನ ಸೋಮವಾರದಿಂದ 'ಸಿಂಧು ಭೈರವಿ' ಧಾರಾವಾಹಿ ಪ್ರಸಾರವಾಗಲಿದೆ. ಸಿಂಧು ಭೈರವಿಯಾಗುವ ಈ ಹೊಸ ಕತೆಯನ್ನು ನೋಡಲು ವೀಕ್ಷಕರು ಕೂಡ ಕಾದು ಕುಳಿತಿದ್ದಾರೆ.

ಸೋಮವಾರದಿಂದ ಅಂದರೆ ಏಪ್ರಿಲ್ 7ರಿಂದ ಸಂಜೆ 7.00 ಗಂಟೆಗೆ 'ಸಿಂಧು ಭೈರವಿ' ಧಾರಾವಾಹಿ ಪ್ರಸಾರವಾಗಲಿದೆ ಎಂದು ವಾಹಿನಿ ಅದಾಗಲೇ ತಿಳಿಸಿದೆ.
ಹೊಸ ಕಥೆ ಶೀಘ್ರದಲ್ಲೇ ಶುರು
ಇದೇ ಹೆಸರಿನಲ್ಲಿ ಈಗಾಗಲೇ ಪರಭಾಷೆಯಲ್ಲಿ ಧಾರಾವಾಹಿಯೊಂದು ಪ್ರಸಾರವಾಗಿತ್ತು. ಆದರೆ, ಆ ಕಥೆಗೂ ಈ ಹೊಸ ಕಥೆಗೂ ಬಹಳ ವ್ಯತ್ಯಸವಿದೆ. 'ಸಿಂಧುಭೈರವಿ' ಧಾರಾವಾಹಿಯ ವಿಶೇಷವೆಂದರೆ ಹಿರಿಯ ಕಿರುತೆರೆ ಜೋಡಿಗಳು ನಟಿಸಲಿದ್ದು, ಬಹಳ ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಕಿರುತೆರೆಯ ಹಿರಿಯ ನಟಿಯರಾದ ಸುಚಿತ್ರಾ ಕೆಎಸ್, ರೇಖಾಕೃಷ್ಣ 'ಸಿಂಧು ಭೈರವಿ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಮರಳಿದ್ದಾರೆ. ನಟಿಯರು. ದಶಕಗಳ ಹಿಂದೆ ಕನ್ನಡ ಕಿರುತೆರೆಯಲ್ಲಿ ಮೆಗಾ ಧಾರಾವಾಹಿಗಳ ಮೂಲಕ ಕಮಾಲ್ ಮಾಡಿದ ಈ ನಟಿಯರು, ಇದೀಗ ಜೋಡಿಯಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.
ಹಳೆಯ ನಟಿಯರು ನಟನೆ
ನಟಿ ಸುಚಿತ್ರಾ ಕೆಎಸ್ ಅವರು ಈ ಹಿಂದೆ ಕನ್ನಡದ 'ಮಾಂಗಲ್ಯ', 'ರಂಗೋಲಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಅಲ್ಲದೇ, ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ತೆಲುಗು ಮತ್ತು ತಮಿಳು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದು, ಇದೀಗ 'ಸಿಂಧು ಭೈರವಿ' ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ನಟಿ ರೇಖಾ ಕೃಷ್ಣಪ್ಪ 'ಮಾಯಾಮೃಗ' ಧಾರಾವಾಹಿಯಲ್ಲಿ ಶ್ರೀಲಕ್ಷ್ಮೀ ಪಾತ್ರದ ಮೂಲಕ ಜನಮನ ಗೆದ್ದಿದ್ದರು. ಮಲೆನಾಡಿನ ಹುಡುಗಿ ರೇಖಾ ಕೃಷ್ಣಪ್ಪ ಅವರು 'ಈಶ್ವರಿ' ಎಂಬ ಧಾರವಾಹಿಯಲ್ಲಿ ಮಿಂಚಿದವರು. ಇನ್ನು ಶಕ್ತಿ, ಈಶ್ವರಿ, ಬಾಳು, ಬೆಳಗಿತು, 'ಮಾಯಾಮೃಗ' ಸೇರಿದಂತೆ ಸುಮಾರು 50ಕ್ಕೂ ಅಧಿಕ ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಧಾರಾವಾಹಿಗಳಿಗೆ ನಟಿ ರೇಖಾ ಕೃಷ್ಣಪ್ಪ ಅವರು ಬಣ್ಣ ಹಚ್ಚಿದ್ದಾರೆ. ಇದರಲ್ಲಿ ರೇಖಾ ಅವರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎನ್ನಲಾಗಿದೆ.

ಇಂಚರಾ ಕನ್ನಡ ಕಿರುತೆರೆಗೆ ವಾಪಸ್
ಇನ್ನು ಈ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿ ಇಂಚರಾ ಶೆಟ್ಟಿ ಕಾಣಿಸಿಕೊಂಡಿದ್ದು, ಈ ಹಿಂದೆ 'ಕೆಂಡಸಂಪಿಗೆ' ಸೀರಿಯಲ್‌ಗೆ ಬಣ್ಣ ಹಚ್ಚಿದ್ದರು. ಸದ್ಯ ಇಂಚರಾ ಶೆಟ್ಟಿ ಅವರು ತೆಲುಗಿನ 'ಬೊಮ್ಮರಿಲ್ಲು' ಸೀರಿಯಲ್‌ನಲ್ಲಿ ಹೀರೋಯಿನ್ ಆಗಿ ನಟಿಸುತ್ತಿದ್ದಾರೆ. ಚಿಕ್ಕಮಗಳೂರಿನ ಈ ಬೆಡಗಿ ಮನೆಯವರ ವಿರೋಧದ ನಡುವೆಯೂ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಮಂಗಳೂರಿನಲ್ಲಿ ಬಿಕಾಂ ವ್ಯಾಸಂಗ ಮಾಡಿದ್ದಾರೆ. ನಟನೆಯ ಆಸೆಯಿಂದ ಬಣ್ಣದ ಲೋಕಕ್ಕೆ ಆಗಮಿಸಿದ್ದಾರೆ. ಇವರೊಂದಿಗೆ ನಟಿ ಚಂದನಾ ರಾಘವೇಂದ್ರ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಹೊಸ ಪಾತ್ರದಲ್ಲಿ ಸಿರಿ
ಚಂದನಾ ರಾಘವೇಂದ್ರ ಅವರು ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಸೆ, ಶ್ರೀರಸ್ತು ಶುಭಮಸ್ತು ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದನಾ ಅವರು 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಿರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾಜು ಕನ್ನಡ ಮೀಡಿಯಂ', 'ಮೀರಾಳ ಕೃಷ್ಣ', 'ರಾಮಾಚಾರಿ 2.0', 'ಭಗೀರಥ' ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಇನ್ನು ನಾಯಕನ ಪಾತ್ರದಲ್ಲಿ 'ಮನೆದೇವ್ರು' ಧಾರಾವಾಹಿಯ ಅಜಯ್ ಕಾಣಿಸಿಕೊಂಡಿದ್ದು, ನಟ ಬಾಲರಾಜ್, ಡಿಸೋಝಾ, ಮಹೇಶ್ ವಸಿಷ್ಠ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











